ಕಲ್ಲಿದ್ದಲು ಘಟಕ ಹಂಚಿಕೆ ಬಗ್ಗೆ ಪರಾಖ್ ವಿವರಣೆ ನೀಡಲಿ
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಆರೋಪಿ ಎಂದು ಪರಿಗಣಿಸಬೇಕೆಂದು ಹೇಳಿರುವ ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿ.ಸಿ ಪರಾಖ್, ಕಲ್ಲಿದ್ದಲು ಘಟಕ ಹಂಚಿಕೆ ಬಗ್ಗೆ ವಿವರಣೆ ನೀಡಲಿ ಎಂದು ಬಿಜೆಪಿ ಹೇಳಿದೆ.
ಕಲ್ಲಿದ್ದಲು ಘಟಕ ಹಂಚಿಕೆ ನಡೆವಾಗ ಪ್ರಧಾನಿ ಮನಮೋಹನ್ ಸಿಂಗ್ ಕಲ್ಲಿದ್ದಲು ಸಚಿವಾಲಯದ ಹೊಣೆ ಹೊತ್ತಿದ್ದರು. ಆದ್ದರಿಂದ ಹಗರಣದಲ್ಲಿ ಅವರೂ ತಪ್ಪಿತಸ್ಥರೇ ಎಂದು ಪಿ.ಸಿ ಪರಾಖ್ ಹೇಳಿದ್ದರು.
ಪರಾಖ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಅವರು ಈಗ ಪರಾಖ್ ಅವರು ಎಲ್ಲವನ್ನೂ ವಿವರಿಸಿ ಹೇಳಬೇಕಾಗಿದೆ. ಪರಾಖ್ ಅವರು ಈ ಬಗ್ಗೆ ಕೆಲವೇ ಮಾತುಗಳನ್ನು ಹೇಳಿದ್ದಾರೆ. ಇದೀಗ ಅವರು ಕಲ್ಲಿದ್ದಲು ಘಟಕ ಹಂಚಿಕೆ ಹೇಗೆ ನಡೆಯಿತು ಎಂಬುದನ್ನು ವಿವರವಾಗಿ ಹೇಳಬೇಕಾಗಿದೆ.
ಕಲ್ಲಿದ್ದಲು ಘಟಕ ಹಂಚಿಕೆಗಾಗಿ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಯಾವ ರೀತಿಯ ಕಾರ್ಯಗಳು ನಡೆದವು? ಅವು ಪ್ರಧಾನಿ ಕಚೇರಿಗೆ ಹೇಗೆ ತಲುಪಿತು? ಪ್ರಧಾನಿ ಕಚೇರಿಯಿಂದ ಕಲ್ಲಿದ್ದಲು ಸಚಿವಾಲಯಕ್ಕೆ ಯಾವ ರೀತಿಯ ನಿರ್ದೇಶನಗಳನ್ನು ನೀಡಲಾಯಿತು ಎಂಬುದರ ಬಗ್ಗೆ ಪರಾಖ್ ಅವರು ವಿಸ್ತೃತವಾಗಿ ಹೇಳಬೇಕು ಎಂದು ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಪ್ರಧಾನಿ ಅವರನ್ನು ಪ್ರಥಮ ಆರೋಪಿಯನ್ನಾಗಿ ಪರಿಗಣಿಸಬೇಕೆಂದು ಪರಾಖ್ ಹೇಳಿಕೆ ಬಗ್ಗೆ ನನಗೆ ಅಚ್ಚರಿಯೆನಿಸಿಲ್ಲ ಎಂದು ಸಿನ್ಹಾ ಹೇಳಿದ್ದಾರೆ.
ಕಲ್ಲಿದ್ದಲು ಘಟಕ ಹಂಚಿಕೆಯು ಆವಾಗ ಕಲ್ಲಿದ್ದಲು ಸಚಿವರಾಗಿದ್ದ ಸಿಂಗ್ ಅವರ ಸಮ್ಮತಿಯಿಂದಲೇ ಎಲ್ಲವೂ ನಡೆದಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಎಂದು ಸಿನ್ಹಾ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

