ಈಗಿನ ಸುದ್ದಿ

ನನ್ನಮ್ಮನಿಗೆ ಆಕೆಯ ಆರೋಗ್ಯಕ್ಕಿಂತ ಆಹಾರ ಭದ್ರತಾ ಮಸೂದೆ ಮಹತ್ವದ್ದಾಗಿತ್ತು: ರಾಹುಲ್

Published On :

ಶಹದೂಲ್, ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಾರ್ಥ ರ್ಯಾಲಿಯಲ್ಲಿ ಭಾಗವಹಿಸಿದ ರಾಹುಲ್, ಸೋನಿಯಾ ಗಾಂಧಿ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ.
 
ಸಂಸತ್‌ನಲ್ಲಿ ಆಹಾರ ಭದ್ರತೆ ಮಸೂದೆ ಜಾರಿಯಾಗುವ ವೇಳೆ ತನಗೆ ಅಲ್ಲಿರಲು ಸಾಧ್ಯವಾಗಿಲ್ಲವಲ್ಲ ಎಂಬ ಕೊರಗು ಸೋನಿಯಾ ಅವರನ್ನು ಕಾಡಿತ್ತು ಎಂದು ರಾಹುಲ್ ಹೇಳಿದ್ದಾರೆ.

ಸಂಸತ್‌ನಲ್ಲಿ ಆಹಾರ ಭದ್ರತೆ ಮಸೂದೆ ಚರ್ಚೆ ನಡೆಯುವಾಗ ಆಕೆ ಸಂಸತ್‌ನಲ್ಲಿ ಉಪಸ್ಥಿತರಿದ್ದರು. ಆದರೆ ಮತದಾನದ ಸಮಯದಲ್ಲಿ ಆಕೆಗೆ ಅಲ್ಲಿರಲು ಸಾಧ್ಯವಾಗಲಿಲ್ಲ. ಆಕೆಗೆ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿತ್ತು. ಆಕೆಗೆ ಉಸಿರಾಡುವುದೂ ಕಷ್ಟವಾಗಿತ್ತು. ತಾನು ಪಟ್ಟು ಹಿಡಿದು ಜಾರಿಗೆ ತಂದ ಆಹಾರ ಭದ್ರತೆ ಮಸೂದೆಗೆ ಮತದಾನ ಹಾಕಲು ತನ್ನಿಂದ ಸಾಧ್ಯವಾಗಿಲ್ಲವಲ್ಲಾ ಎಂದು ನನ್ನಮ್ಮ ಆಸ್ಪತ್ರೆಯಲ್ಲಿ ಕಣ್ಣೀರಿಟ್ಟಿದ್ದರು ಎಂದು ರಾಹುಲ್ ರ್ಯಾಲಿಯಲ್ಲಿ ಹೇಳಿದ್ದಾರೆ.

ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ನಾನು ರಾಜಕೀಯದಲ್ಲಿ ಹೊಸ ಬೆಳವಣಿಗೆಯನ್ನು ಮಾಡಲು ಉದ್ದೇಶಿಸಿದ್ದೇನೆ. ಅದೇನೆಂದರೆ ನಿಮ್ಮ ನಾಯಕರು ನಿಮ್ಮ ಮನೆಗೆ ಬಂದು, ಮನೆಯಲ್ಲೇ ಊಟ ಮಾಡಿ ಹೇಗಿದ್ದಿಯಪ್ಪಾ? ಎಂದು  ಕೇಳುವಂತಿರಬೇಕು.

ಲೋಕಸಭೆ, ರಾಜ್ಯಸಭೆಯಲ್ಲಿ ಸಾಧಾರಣ ವ್ಯಕ್ತಿಗಳು, ದಲಿತರು, ಪರಿಶಿಷ್ಟರು ಬೇಕಾಗಿಲ್ಲ, ಇಂಥವರು ಹವಾನಿಯಂತ್ರಿತ ಕೊಠಡಿಗಳಿಗೆ ಪ್ರವೇಶಿಸಬಾರದು ಎಂದು ವಿಪಕ್ಷಗಳು ಬಯಸುತ್ತಿವೆ ಎಂದು ವಿಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

5 ವರ್ಷಗಳಲ್ಲಿ ಎನ್‌ಡಿಎ 2,650 ಕಿಮೀ ರಸ್ತೆಗಳನ್ನು ನಿರ್ಮಾಣ ಮಾಡಿದೆ ಆದರೆ 9 ವರ್ಷಗಳಲ್ಲಿ ಯುಪಿಎ ಸರ್ಕಾರ 9,750 ಕಿಮೀ ರಸ್ತೆಗಳನ್ನು ನಿರ್ಮಿಸಿದೆ. ಆದಾಗ್ಯೂ, ವಿಪಕ್ಷಗಳು ಅಭಿವೃದ್ಧಿ ಬಗ್ಗೆ ಮಾತನಾಡುವಾಗ ರಸ್ತೆಗಳ ಬಗ್ಗೆಯೇ ಮಾತನಾಡುತ್ತವೆ.

ಶಿವರಾಜ್ ಚೌಹಾಣ್ ವಿದ್ಯುತ್ ಸ್ಥಾವರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನಿಮಗೇನು ಸಿಕ್ಕಿದೆ? ಜೀರೋ ವ್ಯಾಟ್!

ಅವರು (ವಿಪಕ್ಷಗಳು) ಅಭಿವೃದ್ಧಿ, ಭೂಮಿ ಬಗ್ಗೆ ಮಾತನಾಡುತ್ತಾರೆ. ಇದರಲ್ಲಿ ನಿಮಗೆ ಸಿಕ್ಕಿದ ಹಣವೆಷ್ಟು?  ಸೊನ್ನೆ!.

ನಾವು ನಿಮಗಾಗಿ ಭಟ್ಟಾ ಪರ್ಸೂಲ್, ಅಲಿಗಡ್ ಮತ್ತು ಇಲ್ಲಿ ಹೋರಾಡುತ್ತಿದ್ದೇವೆ. ಇಲ್ಲಿರುವ ಯುವಜನಾಂಗ ಉತ್ತರಿಸಿ, ನಿಮಗೆ ಉದ್ಯೋಗ ಸಿಕ್ಕಿದೆಯೇ?

ನಿಮಗೆ ಭೂಮಿ ಸಿಗಬೇಕಾದರೆ ಮಾರುಕಟ್ಟೆ ಬೆಲೆಯಿಂದ ದಾನವಾಗಿ ಸಿಗಬೇಕಷ್ಟೆ ಎಂದು ಹೇಳಿದ ರಾಹುಲ್, ಬಡವರಿಗೆ ಗೌರವ ಸಿಗಬೇಕು. ಅವರಿಗೆ ಅನ್ನ ಸಿಗಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಬದಲಾಗಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್‌ಗೆ ಮತನೀಡಿ ಎಂದು ರಾಹುಲ್ ಮಧ್ಯಪ್ರದೇಶದ ಜನರಲ್ಲಿ ವಿನಂತಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ನವಂಬರ್ 25ಕ್ಕೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮೂರನೇ ಬಾರಿ ಅಧಿಕಾರಕ್ಕೇರಲು ಯತ್ನಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.