ಈಗಿನ ಸುದ್ದಿ

ರಾಮನ ಭಕ್ತನಾಗುವುದು ಅಪರಾಧವೇ? : ಅಶೋಕ್ ಸಿಂಘಾಲ್

Published On :

ಲಕ್ನೋ: ಶುಕ್ರವಾರ ಆರಂಭವಾಗಲಿರುವ ವಿಶ್ವ ಹಿಂದೂ ಪರಿಷತ್‌ನ ಸಂಕಲ್ಪ ಯಾತ್ರೆ ಅಯೋಧ್ಯೆ ಪ್ರವೇಶಿಸುವುದಕ್ಕೆ ಭಾರೀ ಭದ್ರತೆಗಳನ್ನೇರ್ಪಡಿಸಿರುವ ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಹಿಂಪ ನಾಯಕ ಅಶೋಕ್ ಸಿಂಘಾಲ್ ಕಿಡಿ ಕಾರಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಎಸ್ಸೆಮ್ಮೆಸ್ಸ್‌ಗೆ ನಿರ್ಬಂಧ ಹೇರಿದ್ದು ಮಾತ್ರವಲ್ಲದೆ ಸಂಕಲ್ಪ ಯಾತ್ರೆಗೆ ಪೂರ್ವಭಾವಿಯಾಗಿ ಸುಮಾರು 1,200 ಮಂದಿಯನ್ನು ಬಂಧಿಸಿದೆ.

ಈ ಬಗ್ಗೆ ಉ. ಪ್ರದೇಶ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಂಘಾಲ್, ರಾಮನ ಭಕ್ತರಾಗಿರುವುದು ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.

ಉ.ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಸಂಕಲ್ಪ ಯಾತ್ರೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಹಿಂದೂ ಸೇನೆ ದೆಹಲಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್‌ರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದೆ.

ಸಂಕಲ್ಪ ಯಾತ್ರೆಯ ಪೂರ್ವಭಾವಿಯಾಗಿ ಅಯೋಧ್ಯೆ, ಫಾಜಿಯಾಬಾದ್ ಜಿಲ್ಲೆಯ ನಗರಗಳು ಹಾಗು ಬಿಹಾರ್, ಜಾರ್ಖಂಜ್ ಮತ್ತು ಮಧ್ಯಪ್ರದೇಶದ ಗಡಿಪ್ರದೇಶಗಳಲ್ಲಿ ಬಿಗಿ ಭದ್ರತೆಗಳನ್ನು ಕಲ್ಪಿಸಲಾಗಿದೆ.


ರಾಮ ಮಂದಿರ ಚಳುವಳಿಯ ನೇತಾರರಾದ ಮಹಾಂತ್ ನೃತ್ಯ ಗೋಪಾಲ್‌ದಾಸ್, ಮಹಾಂತ್ ಸುರೇಶ್ ದಾಸ್, ಬೃಜ್‌ಮೋಹನ್ ದಾಸ್, ಅಭಿಷೇಕ್ ಮಿಶ್ರಾ ಮತ್ತು ಮನ್‌ಮೋಹನ್ ದಾಸ್ ಸೇರಿದಂತೆ 42 ಮಂದಿಯನ್ನು ಅಯೋಧ್ಯೆಯಲ್ಲಿ ಗೃಹಬಂಧನದಲ್ಲಿರಿಸಲಾಗಿದೆ.

ರಾಜ್ಯದ ರಾಜಧಾನಿಯಲ್ಲಿ ಬಜರಂಗದಳದ ರಾಜ್ಯ ನಿರ್ವಾಹಕ, ಸುರೇಂದ್ರ ಮಿಶ್ರಾ ಮತ್ತು ವಕ್ತಾರ ಶರದ್ ಶರ್ಮಾ ಸೇರಿದಂತೆ 366 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ.

ರ್ಯಾಲಿ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನೇತಾರ ನರೇಶ್ ಅಗ್ರವಾಲ್, ಚುನಾವಣೆ ಸಮಯದಲ್ಲಿ ಬಿಜೆಪಿ ಬಳಸುವ ಸಂಸ್ಥೆಯಾಗಿದೆ ವಿಹಿಂಪ ಎಂದು ಹೇಳಿದ್ದಾರೆ. ಮಾತ್ರವಲ್ಲದೆ, ಯಾತ್ರೆ ಮುಂದುವರಿಸಿದರೆ ನಾವು ಜನರನ್ನು ಬಂಧಿಸಲೇ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆದಾಗ್ಯೂ, ವಿಹಿಂಪ ಅಯೋಧ್ಯೆಯತ್ತ ತಮ್ಮ ರ್ಯಾಲಿ ಮುಂದುವರಿಸಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.