ಸೂರತ್ ಮೂಲದ ಮಹಿಳೆಯ ಮೈ ಮುಟ್ಟಿದ್ದೆ: ಅಸಾರಾಂ ಬಾಪು
ಅಹ್ಮದಾಬಾದ್: ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅಸಾರಾಂ ಬಾಪು ವಿರುದ್ಧ ದೂರು ನೀಡಿದ್ದ ಸೂರತ್ ಮೂಲದ ಮಹಿಳೆಯನ್ನು ತಾನು ಮುಟ್ಟಿದ್ದೆ ಎಂದು ಬಾಪು ಒಪ್ಪಿಕೊಂಡಿದ್ದಾರೆ.
ಸುಳ್ಳು ಪತ್ತೆ ಪರೀಕ್ಷೆಗೆ ಅಂಜಿದ ಬಾಪು, ತಾನು ಮಂತ್ರ ದೀಕ್ಷೆ ನೀಡುವಾಗ ತನ್ನ ಕೊಠಡಿಯಲ್ಲಿ ಆ ಹುಡುಗಿಯ ಮೈ ಮುಟ್ಟಿದ್ದೆ ಎಂದು ಅಹ್ಮದಾಬಾದ್ ಪೊಲೀಸರಲ್ಲಿ ಹೇಳಿದ್ದಾರೆ.
ತಾನು ಎಲ್ಲ ಮಹಿಳೆಯರನ್ನು ಆಗಾಗ ತನ್ನ ಕೊಠಡಿಗೆ ಕರೆಸುತ್ತಿದ್ದದ್ದು ನಿಜ ಆದರೆ ಅವರಿಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ತನ್ನ ಮೇಲೆ ದೂರು ನೀಡಿರುವ ಮಹಿಳೆಯನ್ನು ನಾನು ಬಲ್ಲೆ ಆಕೆ ಅಹ್ಮದಾಬಾದ್‌ನಲ್ಲಿ ವಾಸವಾಗಿದ್ದಳು ಎಂದು ಅಸಾರಾಂ ಹೇಳಿದ್ದಾರೆ.
ಲೈಂಗಿಕ ಕಿರುಕುಳ ಆಪಾದನೆಗೊಳಗಾಗಿರುವ ಅಸಾರಾಂ ಬಾಪು ಮತ್ತು ದೂರು ನೀಡಿದ ಮಹಿಳೆಯನ್ನು ಎಟಿಎಸ್ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.
ದೂರು ನೀಡಿದ ಮಹಿಳೆಯನ್ನು ನೋಡಿದಾಗ ಅಸಾರಾಂ ಮುಖ ಭಯದಿಂದ ಬೆವತುಕೊಂಡಿತು ಎಂದು ಪೊಲೀಸರು ಹೇಳಿದ್ದಾರೆ.
ದೂರು ನೀಡಿರುವ ಮಹಿಳೆಯನ್ನು ತನಿಖೆಗೆ ಒಳಪಡಿಸಿದಾಗ ಆಕೆ 17 ಮಂದಿಯ ಹೆಸರು ಬಹಿರಂಗ ಪಡಿಸಿದ್ದು, ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.
ಆಕೆ ಬಹಿರಂಗ ಪಡಿಸಿದ 17 ವ್ಯಕ್ತಿಗಳಲ್ಲಿ ನಿರ್ಮಲಾ ಅಲಿಯಾಸ್ ಧೇಲ್ ಮತ್ತು ಮೀರಾ ಅಲಿಯಾಸ್ ಬಾಗ್ಲ್ ಎಂಬವರು ಅಸಾರಾಂಗೆ ಮಹಿಳೆಯರನ್ನು ಉಪಾಯದಿಂದ ಒಪ್ಪಿಸುವ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಏತನ್ಮಧ್ಯೆ, ಅಸಾರಾಂನ ಮಗಳು ಭಾರತಿ ಮತ್ತು ಪತ್ನಿ ಲಕ್ಷ್ಮಿ ಹೆಣ್ಮಕ್ಕಳನ್ನು ಅಸಾರಾಂ ಬಾಪುವಿನ ಕೊಠಡಿಗೆ ಕರೆದೊಯ್ಯುತ್ತಿದ್ದರು ಎಂದು ದೂರು ನೀಡಿದ ಮಹಿಳೆ ಹೇಳಿದ್ದಾರೆ.
ಆದರೆ ತನ್ನ ಪತ್ನಿ ಮತ್ತು ಮಗಳು ನಿರಪರಾಧಿ ಎಂದು ಹೇಳಿದ ಬಾಪು, ವಿಚಾರಣೆ ವೇಳೆ ನಿಮ್ಮ ಪ್ರಶ್ನೆಗಳಿಂದ ನಾನು ಕಂಗಾಲಾಗಿದ್ದೇನೆ ಎಂದು ಹೇಳಿ ಅತ್ತು ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ಅಸಾರಾಂ ಬಾಪು ಅವರ ತಲೆ ಮರೆಸಿಕೊಂಡಿರುವ ಪುತ್ರ ನಾರಾಯಣ್ ಸಾಯಿ ಅವರಿಗಾಗಿ ಶೋಧ ನಡೆಯುತ್ತಿದೆ.
ನಾರಾಯಣ ಸಾಯಿ ಅವರ ಸಹಚರ ಧರ್ಮೇಶ್ ಅವರನ್ನು ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿದ್ದು, ಆತನನ್ನು ಗುಜರಾತ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

