ಅಪರಾಧಿ ಸಂಸದರನ್ನು ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲು ಆದೇಶ
ನವದೆಹಲಿ: ಅಪರಾಧಿ ಸಂಸದರಾದ ಲಾಲು ಪ್ರಸಾದ್ ಯಾದವ್ ಮತ್ತು ಜಗದೀಶ್ ಶರ್ಮಾ ಅವರನ್ನು ಅನರ್ಹಗೊಳಿಸಿ, ಪ್ರಸ್ತುತ ಸಂಸದ ಸ್ಥಾನಗಳು ಖಾಲಿ ಇವೆ ಎಂದು ಅಧಿಸೂಚನೆ ಹೊರಡಿಸುವಂತೆ ಅಟೋರ್ನಿ ಜನರಲ್ ಲೋಕಸಭಾ ಇಲಾಖೆಗೆ ಆದೇಶಿಸಿದ್ದಾರೆ.
ಸಂಸದರನ್ನು ಅನರ್ಹಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ತಮ್ಮ ಅಭಿಪ್ರಾಯಗಳನ್ನು ಹೇಳಿದ ಅಟರ್ನಿ ಜನರಲ್ ವಹಾನ್ವತಿ ಓರ್ವ ಸಂಸದನನ್ನು ನ್ಯಾಯಾಲಯವು ಯಾವಾಗ ಅಪರಾಧಿ ಎಂದು ಘೋಷಿಸುತ್ತದೋ ಆವಾಗಲೇ ಅವರ ಸ್ಥಾನ ಖಾಲಿ ಇದೆ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ಅಂಥಾ ಅಧಿಸೂಚನೆಗಳನ್ನು ಹೊರಡಿಸಲು ವಿಳಂಬ ಮಾಡಿದರೆ ಅದು ಸುಪ್ರೀಂ ನ್ಯಾಯಾಲಯದ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇಂಥಾ ಅಧಿಸೂಚನೆಗಳನ್ನು ಸಂಬಂಧಪಟ್ಟ ಇಲಾಖೆಗಳು ಹೊರಡಿಸತಕ್ಕದ್ದು ಎಂದು ವಹಾನ್ವತಿ ಹೇಳಿದ್ದಾರೆ.
ಈ ಹಿಂದೆ ಸಂಸದರು ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಕೂಡಲೇ ಅನರ್ಹಗೊಳಿಸಬೇಕೆಂದು ವಹಾನ್ವತಿ ಹೇಳಿದ್ದರು. ಆದರೆ ಈ ಕ್ರಮದ ಬಗ್ಗೆ ಹೆಚ್ಚಿನ ವಿವರಗಳು ಬೇಕು ಎಂದು ಲೋಕಸಭಾ ಇಲಾಖೆ ವಹಾನ್ವತಿಯವರಲ್ಲಿ ಕೇಳಿಕೊಂಡಿತ್ತು.
ಇದಕ್ಕೆ ಉತ್ತರಿಸಿರುವ ಅಟರ್ನಿ ಜನರಲ್ ಅನರ್ಹಗೊಳಿಸಿದ ಸಂಸದರ ಸ್ಥಾನ ಖಾಲಿ ಇದೆ ಎಂದು ಅಧಿಸೂಚನೆ ಹೊರಡಿಸುವಂತೆ ಲೋಕಸಭಾ ಇಲಾಖೆಗೆ ಆದೇಶ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

