ಬೆಲೆ ಏರಿಕೆ ಬಗ್ಗೆ ಸೋನಿಯಾ, ರಾಹುಲ್ ಪಶ್ಚಾತಾಪ ಪಟ್ಟಿದ್ದಾರಾ? : ಮೋದಿ
ಕಾನ್ಪುರ್: ಉತ್ತರಪ್ರದೇಶದ ಕಾನ್ಪುರ್ನಲ್ಲಿ ಚುನಾವಣಾ ಪ್ರಚಾರಾರ್ಥ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾಜವಾದಿ ಪಕ್ಷ ವೋಟ್ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿರುವ ಮೋದಿ, ಉತ್ತರಪ್ರದೇಶದ ಸರ್ಕಾರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ,
ಇಲ್ಲಿ ಕಳೆದ ವರ್ಷದಿಂದ ಹಲವಾರು ಮುಗ್ದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉ.ಪ್ರದೇಶದಲ್ಲಿ ನಿಯಮ ಮತ್ತು ಕಾನೂನು ಎಲ್ಲಿದೆ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಭಾರತ ಕಾಂಗ್ರೆಸ್ ಮುಕ್ತವಾಗಬೇಕು. ಈ ಮೊದಲು ಸ್ವರಾಜ್ಯಕ್ಕಾಗಿ ಹೋರಾಡಿದ್ದರೆ, ಈಗ ಅದು ಸುರಾಜ್ಯವಾಗಿದೆ.
ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ನ ಜತೆ ಮೈತ್ರಿ ಮಾಡಿಕೊಂಡವರು ಕೂಡಾ ತಪ್ಪಿತಸ್ಥರೇ ಎಂದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮೋದಿ ಟೀಕಿಸಿದ್ದಾರೆ.
ಚುನಾವಣೆಯ ವೇಳೆ ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡುತ್ತಾ ಬಂದಿದ್ದು, ಕಳೆದ 60 ವರ್ಷಗಳಿಂದ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಪ್ರಸ್ತುತ ಪಕ್ಷ ಜನರ ಬಗ್ಗೆ ಯಾವುದೇ ಕಳಕಳಿಯನ್ನು ಹೊಂದಿಲ್ಲ. ನಮ್ಮ ಬಗ್ಗೆ ಆಸ್ಥೆ ವಹಿಸದೇ ಇರುವವರ ಬಗ್ಗೆ ನಾವು ಯಾಕೆ ಚಿಂತಿಸಬೇಕು?
ಬೆಲೆ ಏರಿಕೆಯ ಬಗ್ಗೆ ಯಾವತ್ತಾದರೂ ಸೋನಿಯಾ ಗಾಂಧಿಯಾಗಲಿ, ರಾಜಕುಮಾರನಾಗಲೀ(ರಾಹುಲ್ ಗಾಂಧಿ) ಪಶ್ಚಾತಾಪ ಪಟ್ಟದ್ದು ಇದೆಯೇ?ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಬೆಲೆ ಏರಿಕೆಯಾಗುತ್ತಿರುವಾಗ ಅದನ್ನು ತಡೆಯಲು ಯತ್ನಿಸಿದರೆ?
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಚುನಾವಣೆ ವೇಳೆ ಹಲವಾರು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿವೆ. ನೀವು ನಿಮ್ಮ ಮಕ್ಕಳು ಕೂಡಾ ಇಂಥಾ ದುರ್ಲಭ ಬದುಕನ್ನು ಸಾಗಿಸಬೇಕು ಎಂದು ಬಯಸುತ್ತೀರಾ? ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಬೇಕು ಎಂದು ನೀವು ಬಯಸುವುದಿಲ್ಲವೆ? ಎಂದು ರ್ಯಾಲಿಯಲ್ಲಿ ಮೋದಿ ತಮ್ಮ ವಾಗ್ಝರಿ ಹರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

