ಈಗಿನ ಸುದ್ದಿ

ಯುವ ಜನಾಂಗಕ್ಕೆ ಮೋದಿ ಆದರ್ಶ: ಮುಖೇಶ್ ಅಂಬಾನಿ

ಯುವ ಜನಾಂಗಕ್ಕೆ ಮೋದಿ ಆದರ್ಶ: ಮುಖೇಶ್ ಅಂಬಾನಿ
Published On :

ಗಾಂಧಿನಗರ: ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾನಿಲಯ
(ಪಿಡಿಪಿಯು) ದಲ್ಲಿ ನಡೆದ 3ನೇ ಘಟಿಕೋತ್ಸವದಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಪಿಡಿಪಿಯು ಅಧ್ಯಕ್ಷ ಮುಖೇಶ್ ಅಂಬಾನಿ ನರೇಂದ್ರ ಮೋದಿ ಯುವಜನಾಂಗಕ್ಕೆ ಆದರ್ಶ ಎಂದು ಹೇಳಿದ್ದಾರೆ.

ಘಟಿಕೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ ಗುಜರಾತ್ ಮುಖ್ಯಮಂತ್ರಿ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವೆಲ್ಲರೂ ಹೊಸ ಜವಾಬ್ದಾರಿಯನ್ನು ಹೊತ್ತು ಕೊಳ್ಳಲಿದ್ದೀರಿ. ನಿಮಗೆಲ್ಲರಿಗೂ ಅಭಿನಂದನೆಗಳು. ಜೀವನದಲ್ಲಿ ಕಷ್ಟಗಳು ಎದುರಾಗಬಹುದು ಆದರೆ ನಿಮ್ಮಲ್ಲಿ ಗುರಿ ಹಾಗು ಸಾಧನೆಯ ಛಲ ಗಟ್ಟಿಯಾಗಿದ್ದರೆ ಎಲ್ಲವನ್ನೂ ಜಯಿಸಬಲ್ಲಿರಿ ಎಂದು  ಹೇಳಿದ್ದಾರೆ.

ನಾವು ಭಾರತದ ಯುವಶಕ್ತಿಯನ್ನು ಸರಿಯಾಗಿ ಬಳಸಿದರೆ, ಎಲ್ಲರೂ ಒಗ್ಗಟ್ಟಾಗಿ ದುಡಿದರೆ ಕಳೆದ 60 ವರ್ಷಗಳಲ್ಲಿ ನಮಗುಂಟಾದ ನಷ್ಟವನ್ನು ನಾವು ಹತ್ತೇ ವರುಷಗಳಲ್ಲಿ ಭರಿಸಬಲ್ಲೆವು. ಅದಕ್ಕಾಗಿ ಯುವ ಜನರನ್ನು ಒಂದಾಗಿಸಬೇಕು. ಹಾಗಾದರೆ ಮಾತ್ರ ದೇಶಕ್ಕೆ ಹೊಸ ಚೈತನ್ಯ ಲಭಿಸುವುದು.

ಅದೇ ವೇಳೆ ನಲಂದಾ, ಟೆಕ್ಸಿಲ್ಲಾ ಮತ್ತು ವಲ್ಲಭಾಯಿ ವಿಶ್ವವಿದ್ಯಾನಿಲಯಗಳನ್ನು ಉಲ್ಲೇಖಿಸಿದ ಮೋದಿ ವಿಶ್ವವಿದ್ಯಾನಿಲಯಗಳು ನಮ್ಮ ಸಂಸ್ಕೃತಿಯ ಭಾಗವಾಗಿದೆ. ವಿಶ್ವವಿದ್ಯಾನಿಲಯಗಳು ಸಮಾಜದ ಬೆಳವಣಿಗೆಗೆ ನೀಡುವ ಕೊಡುಗೆ ಮಹತ್ವದ್ದು.

ದೇಶದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಬೇಕು. ಅವರಲ್ಲಿನ ಕೌಶಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ನೀಡುವ ಹಣ 1000 ಕೋಟಿ ರು. ಆದಾಗ್ಯೂ, ಗುಜರಾತ್‌ನಲ್ಲಿ ವಿದ್ಯಾಭ್ಯಾಸಕ್ಕೆ ನಾವು 800 ಕೋಟಿ ರು. ವ್ಯಯಿಸುತ್ತೇವೆ.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಮೋದಿ, ನಾವು ಇಂಥವರ ಕೈಯಲ್ಲಿ ದೇಶದ ಚುಕ್ಕಾಣಿ ನೀಡಿದ್ದೇವೆ. ಇದೇ ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮ ದೇಶದ ಗತಿ ಏನಾಗಬಹುದು? ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವರು ಯುವ ಜನಾಂಗದಲ್ಲಿ ಶಕ್ತಿಯನ್ನು ಕಾಣುತ್ತಾರೆ ಆದರೆ ನಾನು ಯುವಜನಾಂಗದಲ್ಲಿ ಅಧಿಕಾರವನ್ನು ಕಾಣುತ್ತೇನೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.