ಈಗಿನ ಸುದ್ದಿ

ವಿಭಜಿಸಿ ಆಳುವ ನೀತಿ ಕಾಂಗ್ರೆಸ್ಸಿನದ್ದು: ಮೋದಿ

Published On :

ಕಾನ್ಪುರ್: ಉತ್ತರಪ್ರದೇಶದ ಕಾನ್ಪುರ್‌ನಲ್ಲಿ ಚುನಾವಣಾ ಪ್ರಚಾರಾರ್ಥ ರ್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾಜವಾದಿ ಪಕ್ಷ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಉತ್ತರಪ್ರದೇಶಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿರುವ ಮೋದಿ, ಉತ್ತರಪ್ರದೇಶದ ಸರ್ಕಾರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯವನ್ನು ನಿರ್ನಾಮಗೊಳಿಸಿದೆ. ಇದರಿಂದ ರಾಜ್ಯವನ್ನು ಕಾಪಾಡಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

ಏತನ್ಮಧ್ಯೆ, ಕಲ್ಲಿದ್ದಲು ಘಟಕ ಹಂಚಿಕೆ ಹಗರಣದ ಬಗ್ಗೆ ಮಾತನಾಡಿದ ಅವರು, ಕಲ್ಲಿದ್ದಲಿನ ಮಸಿ ಕೇವಲ ದೆಹಲಿಗೆ ಮಾತ್ರ ಸೀಮಿತವಲ್ಲ ಅದು ಕಾನ್ಪುರದವರೆಗೂ ಹರಡಿಕೊಂಡಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕಾಪ್ರಕಾರ ಮಾಡಿದ ಅವರು ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟ ಫೈಲುಗಳು ಮಾತ್ರವಲ್ಲ ಸರ್ಕಾರವೇ ನಾಶವಾಗಿದೆ ಎಂದಿದ್ದಾರೆ.

ಬಡತನ ಎಂಬುದು ಇಲ್ಲವೇ ಇಲ್ಲ, ಅದು ಮನಸ್ಥಿತಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಬಂದವರಿಗೆ ಬಡತನವೇನೆಂದು ಗೊತ್ತಾಗುವುದಾದರೂ ಹೇಗೆ? ಬಡವನ ಗುಡಿಸಲಿ ಹೋಗುವಾಗಲೂ ಕ್ಯಾಮೆರಾ ಹಿಡಿದುಕೊಂಡು ಹೋಗುವವರಿಗೆ ಬಡತನ ಏನೆಂದು ತಿಳಿಯುತ್ತಾ? ನಮ್ಮ ಬಡ ರೈತರು ಕಾಂಗ್ರೆಸ್ಸಿಗರಿಗೆ ತಮಾಷೆಯಂತೆ ಕಾಣುತ್ತಿದ್ದಾರೆ. ಆದ್ದರಿಂದಲೇ ರಾಜಕುಮಾರ ಹೇಳಿದ್ದು, ಬಡತನವೆಂಬುದು ಇಲ್ಲವೇ ಇಲ್ಲ, ಅದೊಂಥರಾ ಮನಸ್ಥಿತಿ ಎಂದು.

ನಾವು ಬಡತನದಲ್ಲೇ ಹುಟ್ಟಿ ಬೆಳೆದವರು. ಬಡತನದ ಕಷ್ಟ ಏನೆಂದು ನನಗೆ ಗೊತ್ತು. ಬಡವರ ಬಗ್ಗೆ ಯಾರಾದರೂ ಈ ತರ ತಮಾಷೆ ಮಾಡಿದರೆ ನನಗೆ ದುಃಖವಾಗುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಇದು. ಸರ್ಕಾರಕ್ಕೆ ಬಡವರ ಅಥವಾ ಬಲ್ಲಿದ ಎಂಬ ಭೇದ ಇರಕೂಡದು.

ಕಾಂಗ್ರೆಸ್ ಯಾವತ್ತು ಸಂಕಷ್ಟದಲ್ಲಿರುತ್ತದೆಯೋ ಆವಾಗ ಅದು ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತದೆ. ಆದರೆ ಬಿಜೆಪಿ ಅಭಿವೃದ್ಧಿಗಾಗಿ ಮತ ಯಾಚಿಸುತ್ತಿದೆ. ನಾವು ದೇಶವನ್ನು ಉತ್ತುಂಗಕ್ಕೇರಿಸಲಿದ್ದೇವೆ ಎಂದು ಮೋದಿ ಭರವಸೆ ನೀಡಿದ್ದಾರೆ.

ಬಡವರನ್ನು ತಮಾಷೆ ಮಾಡುತ್ತಿರುವ ಕಾಂಗ್ರೆಸ್ ಸಚಿವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಸಂಸದರೊಬ್ಬರು ಮುಂಬೈನಲ್ಲಿ 12 ರು.ಗೆ ಊಟ ಸಿಗುತ್ತೆ ಎಂದು ಹೇಳುತ್ತಿದ್ದಾರೆ. ನಿಮಗೆ ಎಲ್ಲಿಯಾದರೂ 12 ರು.ಗೆ ಊಟ ಸಿಗುತ್ತಾ? ಸಿಗುವುದಿಲ್ಲವಾದರೆ ಬಡವರನ್ನು ಯಾಕೆ ಪರಿಹಾಸ ಮಾಡಬೇಕು? ಇದರ ನಂತರ ಇನ್ನೊಬ್ಬರು 5 ರು. ಗೆ ಊಟ ಸಿಗುತ್ತೆ ಅಂದರು. ಏನಿದ್ದರೂ ಅವರೀಗ ಜೈಲಿನಲ್ಲಿದ್ದಾರೆ.

ಸಂಸದರ ನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಗಡಿಯಲ್ಲಿ ನಮ್ಮ ಜವಾನರ ಶಿರಚ್ಛೇದ ಮಾಡಿದಾಗಲೂ ಪ್ರಧಾನಿ ಸುಮ್ಮನಿದ್ದರು. ಇನ್ನೊಮ್ಮೆ ಹಾಗೆ ಮಾಡಿದರೆ ನೋಡಿಕೊಳ್ಳೋಣ ಎಂದಿದ್ದಾರೆ. ಎಂದಾದಾರೂ ರಕ್ಷಣಾ ಸಚಿವರು ಮತ್ತು ಸೇನಾಪಡೆ ಬೇರೆ ಬೇರೆ ಹೇಳಿಕೆ ನೀಡಿದ ಘಟನೆ ನಮ್ಮಲ್ಲಿ ನಡೆದಿದೆಯೇ?.

ಕಾಂಗ್ರೆಸ್ ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ. ಆದರೆ ನಾವು ದೇಶದ ಉನ್ನತಿಗೋಸ್ಕರ ಜನರು ಒಟ್ಟುಗೂಡಿಸಲು ಯತ್ನಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.