ಡೋಂಟ್ ವರಿ ಇಶಾಂತ್, ಎಲ್ಲರಿಂದಲೂ ತಪ್ಪು ಆಗುತ್ತೆ: ಫಾಕ್ನರ್
ಮೊಹಾಲಿ: ನಿನ್ನೆ ಮೊಹಾಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಒಂದು ಓವರ್ನಲ್ಲಿ 30 ರನ್ಗಳನ್ನು ನೀಡುವ ಮೂಲಕ ಆಸ್ಟ್ರೇಲಿಯಾಗೆ ಗೆಲವು ಧಾರೆಯೆರೆದ ಭಾರತೀಯ ಬೌಲರ್ ಇಶಾಂತ್ ಶರ್ಮಾ ವಿರುದ್ಧ ಭಾರತೀಯರು ಸಿಟ್ಟುಗೊಂಡಿರುವುದು ಸಹಜ. ಪಂದ್ಯ ಸೋತ ನಂತರ ಪ್ರತಿಕ್ರಿಯೆ ನೀಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಬೌಲರ್ಗಳ ವಿರುದ್ಧ ಗರಂ ಆಗಿದ್ದರು.
ಇಶಾಂತ್ ಬೌಲಿಂಗ್ ಬಗ್ಗೆ ಎಲ್ಲರೂ ಅಸಹನೆ ವ್ಯಕ್ತಪಡಿಸುತ್ತಿರುವಾಗ ಆಸ್ಟ್ರೇಲಿಯಾದ ಆಲ್ರೌಂಡರ್ ಜೇಮ್ಸ್ ಫಾಕ್ನರ್, ಎಲ್ಲರಿಂದಲೂ ತಪ್ಪು ಆಗುತ್ತೆ, ಅದಕ್ಕಾಗಿ ಬೇಸರ ಮಾಡಿಕೊಳ್ಳಬೇಡಿ ಎಂದು ಇಶಾಂತ್ ಶರ್ಮಾಗೆ ಹೇಳಿದ್ದಾರೆ. ಪ್ರತಿಯೊಬ್ಬ ಬೌಲರ್ಗೆ ಕೂಡಾ ಕೊನೆಗೊಂದು ದಿನ ತಾನು ಮಾಡಿದ ತಪ್ಪಿನ ಬಗ್ಗೆ ಅರಿವು ಆಗಿಯೇ ಆಗುತ್ತೆ ಎಂದು ಅವರು ಹೇಳಿದ್ದಾರೆ.
ಭಾರತದ 304 ರನ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಗುರಿ ಮುಟ್ಟುವುದು ಅಸಾಧ್ಯ ಎಂದೇ ತೋರುತ್ತಿತ್ತು. ಆದರೆ 48ನೇ ಓವರ್ನಲ್ಲಿ ಇಶಾಂತ್ ಶರ್ಮಾ 30 ರನ್ಗಳನ್ನು ನೀಡುವ ಮೂಲಕ ಪ್ರಸ್ತುತ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆಸ್ಟ್ರೇಲಿಯಾದ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ ಫಾಕ್ನರ್ 29 ಬಾಲ್ಗಳಲ್ಲಿ 64 ರನ್ ಕಲೆ ಹಾಕಿದ್ದು, ಇದು ಆಸ್ಟ್ರೇಲಿಯಾದ ಗೆಲುವಿಗೆ ಕಾರಣವಾಯಿತು.
ಇಶಾಂತ್ ಬಾಲ್ಗೆ ಸಿಕ್ಸ್ , ಬೌಂಡರಿಗಳನ್ನು ಬಾರಿಸಿದ ಫಾಕ್ನರ್ ಇಶಾಂತ್ ಮೇಲೆ ಸಹಾನುಭೂತಿ ಪ್ರಕಟಿಸಿದ್ದು, ಎಲ್ಲ ಬೌಲರ್ಗಳಿಗೂ ಈ ರೀತಿಯ ಅನುಭವ ಆಗಿಯೇ ಆಗುತ್ತೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

