ಈಗಿನ ಸುದ್ದಿ

ಹಣದ ಹಾಸಿಗೆಯಲ್ಲಿ ಮಲಗಿದ ಸಿಪಿಎಂ ಸದಸ್ಯನ ಉಚ್ಛಾಟನೆ

Published On :

ತ್ರಿಪುರ: ಹಣದ ಕಂತೆಗಳಿಂದಲೇ ಹಾಸಿಗೆ ನಿರ್ಮಿಸಿ ಅದರ ಮೇಲೆ ಮಲಗಿದ ಸಿಪಿಎಂ ಕಾರ್ಯಕರ್ತರೊಬ್ಬರನ್ನು ಸಿಪಿಎಂ ಪಕ್ಷ ಉಚ್ಛಾಟನೆ ಮಾಡಿದೆ.

ಇಲ್ಲಿನ ಬಂಕುಮಾರಿ ಸ್ಥಳೀಯ ಸಮಿತಿಯ ಸದಸ್ಯರಾಗಿರುವ ಸಮರ್ ಆಚಾರ್ಜೀ ನೋಟಿನ ಹಾಸಿಗೆಯ ಮೇಲೆ ಮಲಗಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಈ ಕಾರಣದಿಂದ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದೇವೆ ಎಂದು ದುಕ್ಲೀ ವಿಭಾಗೀಯ ಸಮಿತಿಯ ಕಾರ್ಯದರ್ಶಿ ಸುಭ್ರತಾ ಚಕ್ರಬೊರ್ತಿ ಹೇಳಿದ್ದಾರೆ.

ವೃತ್ತಿಯಲ್ಲಿ ಕಂಟ್ರಾಕ್ಟರು ಆಗಿರುವ ಆಚಾರ್ಜೀ ಕಳೆದ ಗುರುವಾರ ಹಣದ ಕಂತೆಯ ಮೇಲೆ ಮಲಗಿ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದ ಚಿತ್ರ ಟೀವಿಯಲ್ಲಿ ಪ್ರಸಾರವಾಗಿತ್ತು.

ಈ ಬಗ್ಗೆ ಮಾತನಾಡಿದ ಆಚಾರ್ಜೀ ನಾನು ಬ್ಯಾಂಕ್ನಿಂದ 20 ಲಕ್ಷ ರು. ತೆಗೆದು ಅದನ್ನೇ ಹಾಸಿಗೆಯನ್ನಾಗಿ ಮಾಡಿ ಅದರ ಮೇಲೆ ಮಲಗಿ ನನ್ನ ದೀರ್ಘಕಾಲದ ಕನಸನ್ನು ನನಸು ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಾನು ಪಕ್ಷದ ಇತರ ಸದಸ್ಯರಂತೆ ಹಣವಿದ್ದೂ, ಹಣವಿಲ್ಲದೇ ಇರುವವರಂತೆ ವರ್ತಿಸುತ್ತಿಲ್ಲ. ನನ್ನಲ್ಲಿ ಹಣವಿದೆ ಆದ್ದರಿಂದಲೇ ನಾನು ಅದರ ಮೇಲೆ ಮಲಗಿಕೊಂಡೆ ಎಂದು ಆಚಾರ್ಜೀ ತಮ್ಮ ಕೃತ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಆದರೆ ಅವರ ಸ್ಪಷ್ಟನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಪಿಎಂ ಪಕ್ಷ, ಆಚಾರ್ಜೀ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.