ಸಭ್ಯತೆಯಿಂದ ಮಾತನಾಡಲಿ: ಬಿಎಸ್ವೈ ಏಕವಚನಕ್ಕೆ ಸಿದ್ದು ತಿರುಗೇಟು

ಬೆಂಗಳೂರು: ಮನಸ್ಸು ಮಾಡಿದರೆ ನಾನು ಎರಡಲ್ಲ, 10 ಪಟ್ಟು ಏಕವಚನದಲ್ಲಿ ಮಾತನಾಡಬಲ್ಲೆ. ಆದರೆ ಅದು ನನ್ನ ಸಂಸ್ಕೃತಿ ಅಲ್ಲ ಎಂದು ತಮ್ಮ ವಿರುದ್ಧ ಏಕವಚನ ಪ್ರಯೋಗಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಿರುಗೇಟು ನೀಡಿದ್ದಾರೆ.
ಇಂದು ನಗರದಲ್ಲಿ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದು, ಬಿಎಸ್ವೈ ಕೂಡ ಸಿಎಂ ಆಗಿದ್ದರು ಎಂಬ ಕಾರಣಕ್ಕೆ ಏಕವಚನದಲ್ಲಿ ಮಾತನಾಡುವ ಹಕ್ಕು ಇಲ್ಲ. ಅವರು ಸಭ್ಯತೆಯಿಂದ ಮಾತನಾಡುವುದನ್ನು ಕಲಿತುಕೊಳ್ಳಲಿ ಎಂದರು.
ಅಭಿವೃದ್ಧಿ ಮಾಡಿದ್ದೇನೆಂದು ಯಡಿಯೂರಪ್ಪ ಕೊಚ್ಚಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಅಭಿವೃದ್ಧಿ ಮಾಡಿದ್ದರಿಂದಲೇ ಅವರು ಜೈಲಿಗೆ ಹೋಗಿ ಬಂದದ್ದು ಎಂದು ಸಿಎಂ ವ್ಯಂಗ್ಯವಾಡಿದರು.
ಅವರು ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸುತ್ತೇನೆಂದು ಹೇಳಿದ್ದಾರೆ. ಆದರೆ ನೂರು ಜನ ಯಡಿಯೂರಪ್ಪ ಬಂದರೂ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಆಗುವುದಿಲ್ಲ ಎಂದು ಸಿದ್ದು ಹೇಳಿದರು.
ನಿನ್ನೆ ಹಾಲಿ ಹಾಗೂ ಮಾಜಿ ಸಿಎಂಗಳ ವಾಕ್ಸಮರ ತಾರಕಕ್ಕೇರಿತ್ತು. ಅದು ಏಕವಚನ ಸಂಭಾಷಣೆ ಹಂತ ತಲುಪಿತ್ತು. ಶಿವಮೊಗದಲ್ಲಿ ಅಭಿವೃದ್ಧಿ ನೆಪದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಲೂಟಿ ಮಾಡಿದ್ದಾರೆ ಎಂದು ಸಿದ್ದು ಆರೋಪಿಸಿದ್ದರು. ಇದಕ್ಕ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, 'ಅಕ್ರಮ ಗಣಿಗಾರಿಕೆ ರದ್ದು ಮಾಡಿದ್ದು ನಾನು. ಈಗ ನನ್ನ ವಿರುದ್ಧವೇ ಮಾತನಾಡುತ್ತೀಯಾ' ಎಂದು ಹರಿಹಾಯ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


