ಭಾರತ - ಚೀನಾ ನಡುವೆ 9 ಒಪ್ಪಂದಗಳಿಗೆ ಅಂಕಿತ
ನವದೆಹಲಿ /ಬಿಜಿಂಗ್: ಗಡಿ ರಕ್ಷಣಾ ವಲಯದಲ್ಲಿ ಸಹಕಾರ ಸೇರಿದಂತೆ 9 ಒಪ್ಪಂದಗಳಿಗೆ ಉಭಯದೇಶಗಳಾದ ಚೀನಾ ಮತ್ತು ಭಾರತ ಬುಧವಾರ ಸಹಿ ಹಾಕಿದೆ.
ನೆರೆ ದೇಶಗಳ ನಡುವೆ ಇದ್ದ ವೈಮನಸ್ಯಕ್ಕೆ ಅಂತ್ಯ ಹಾಡಿದ್ದು, ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ 9 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ನದಿ ವಿವಾದ, ಗಡಿ ಸಮಸ್ಯೆ ಸೇರಿದಂತೆ ಇತರೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಎರಡು ದೇಶಗಳು 9 ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಚೀನಾದ ಪ್ರಧಾನಿ ಲಿ ಕಿಯಾಂಗ್, ಭಾರತದ ಪ್ರಧಾನಿ ಮನಮೋಹನ್ ಸಿಂಗ್, ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಆರ್.ಕೆ ಮಥುರ್, ಲೇ. ಜ. ಸನ್ ಜಿಯಾಂಗೋ ಅವರು ಒಪ್ಪಂದದ ಪತ್ರಗಳಿಗೆ ಸಹಿ ಹಾಕಿದ್ದಾರೆ.
ಗಡಿ ಭಾಗದಲ್ಲಿ ರಕ್ಷಣಾ ಪಡೆಗಳಿಂದ ಸಹಕಾರ, ಶಾಂತಿ ಮತ್ತು ಸೌರ್ಹಾದ್ಯತೆ ಕಾಪಾಡಲು ಎರಡು ದೇಶಗಳು ಸಹಕಾರ ನೀಡಬೇಕು. ಸೇನಾ ಕಾರ್ಯವೈಖರಿ ಬಗ್ಗೆ ಮಾಹಿತಿ ಹಂಚಿಕೆ ಹಾಗೂ ಗಡಿ ಪ್ರದೇಶದಲ್ಲಿ ಕೈಗೊಳ್ಳಬೇಕಾದ ನಿಯಂತ್ರಣ ಮತ್ತು ಕಾನೂನು ಪಾಲಿಕೆ ಮಾಡುವ ಸಂಬಂಧ ಅಂಕಿತ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರೊಡನೆ ಮಾತನಾಡಿದ ಬಳಿಕ ಉಭಯ ದೇಶಗಳ ಸ್ನೇಹಕ್ಕೆ ಹಸಿರು ಚಿಹ್ನೆ ದೊರೆತಂತಾಗಿದೆ. ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಚೀನಾ ದುಡಿಯಲಿದೆ. ಇದಕ್ಕೆ ಎರಡು ದೇಶಗಳು ಸಹಕಾರ ನೀಡಲಿದೆ ಎಂದು ಚೀನಾದ ಪ್ರಧಾನಿ ಹೇಳಿದ್ದಾರೆ.
ವಿಸಾ ವಿವಾದ ಕುರಿತು ಮಾತನಾಡಿದ ಪ್ರಧಾನಿ ಸಿಂಗ್, ಭಾರತೀಯರು ಚೀನಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಚೀನಾ ಸತ್ಕರಿಸಲಿದೆ ಎಂಬ ಆತ್ಮವಿಶ್ವಾಸ ಮೂಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

