ಈಗಿನ ಸುದ್ದಿ

ಫೇಸ್‌ಬುಕ್‌ಗೆ ಹೆತ್ತವರ ವಿರೋಧ: ವಿದ್ಯಾರ್ಥಿನಿ ಆತ್ಮಹತ್ಯೆ

Published On :

ಪರ್ಭಾನಿ: ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ಅನ್ನು ಬಳಸಬೇಡ ಎಂದು ಹೆತ್ತವರು ಬುದ್ದಿ ಹೇಳಿದ್ದಕ್ಕೆ ಹದಿಹರೆಯದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಕಳೆದ ಬುಧವಾರ 17ರ ಹರೆಯದ ಐಶ್ವರ್ಯಾ ಎಸ್ ದಹಿವಾಲಾ ಮೊಬೈಲ್‌ನಲ್ಲಿ ಅತಿಯಾಗಿ ಎಸ್ಸೆಮ್ಮೆಸ್ ಕಳುಹಿಸುತ್ತಿದ್ದುದು ಮಾತ್ರವಲ್ಲದೆ ಫೇಸ್‌ಬುಕ್ ಅತಿಯಾಗಿ ಬಳಕೆ ಮಾಡುತ್ತಿದ್ದಳು ಎನ್ನಲಾಗುತ್ತಿದೆ. ಆಕೆಯ ಈ ಪ್ರವೃತ್ತಿಗೆ ಹೆತ್ತವರು ವಿರೋಧ ವ್ಯಕ್ತ ಪಡಿಸಿದ್ದು, ಓದಿನ ಬಗ್ಗೆ ಗಮನ ನೀಡಿದರೆ ಸಾಕು ಎಂದು ಆಕೆಗೆ ಬುದ್ದಿವಾದ ಹೇಳಿದ್ದಾರೆ. ಇದೇ ವಿಷಯದಲ್ಲಿ ಮನೆಯಲ್ಲಿ ಜಗಳ ನಡೆದಿದೆ.

ಇದಾದ ನಂತರ ತನ್ನ ಕೋಣೆಗೆ ಹೋದ ಐಶ್ವರ್ಯಾ ಆತ್ಮಹತ್ಯಾ ಟಿಪ್ಪಣಿ ಬರೆದಿಟ್ಟು, ನೇಣು ಹಾಕಿಕೊಂಡಿದ್ದಾಳೆ.

ಫೇಸ್‌ಬುಕ್ ಕೆಟ್ಟದ್ದೇ? ಇಷ್ಟೆಲ್ಲಾ ನಿರ್ಬಂಧ ಹೇರಿದರೆ ನಮಗೆ ಮನೆಯಲ್ಲಿರಲು ಸಾಧ್ಯವಿಲ್ಲ, ಫೇಸ್‌ಬುಕ್ ಇಲ್ಲದಿದ್ದರೆ ನಾನು ಬದುಕುವುದಿಲ್ಲ ಎಂದು ಆಕೆ ಟಿಪ್ಪಣಿಯಲ್ಲಿ ಬರೆದಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.