ಇರಾಖ್‌ನಲ್ಲಿ ಕಾರ್ ಬಾಂಬ್ ಸ್ಫೋಟ: 56 ಸಾವು
ಬಾಗ್ಧಾದ್: ಶಿಟ್ಟೆ ಮುಸ್ಲೀಂ ಜನಾಂಗವನ್ನು ಗುರಿಯಾಗಿಸಿಟ್ಟುಕೊಂಡ ದಾಳಿಕೋರರು, ಕಾರ್ ಬಾಂಬ್ ಸ್ಫೋಟಿಸಿರುವ ಘಟನೆ ಭಾನುವಾರ ಇರಾಖ್‌ನ ಬಾಗ್ಧಾದನಲ್ಲಿ ನಡೆದಿದೆ.
ಘಟನೆಯಲ್ಲಿ 56ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್‌ನಿಂದ ಶಿಯಾ ಮತ್ತು ಶಿಟ್ಟೆ ಮುಸ್ಲೀಂ ಜನಾಂಗದವರ ನಡುವೆ ಗಲಭೆ ಹೆಚ್ಚಾಗಿದ್ದು, ಬಾಂಬ್‌ಗಳನ್ನು ಸ್ಫೋಟಿಸಲಾಗುತ್ತಿದೆ. ಈ ಘಟನೆಗಳಲ್ಲಿ ಒಟ್ಟು 5,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.
ಪಾರ್ಕಿಂಗ್ ಜಾಗ ಮತ್ತು ವಾಣಿಜ್ಯ ಸ್ಥಳದಲ್ಲಿ ಬಾಂಬ್ ಸ್ಫೋಟಿಸಲಾಗಿದೆ. ಆಗ್ನೇಯ ದಿಕ್ಕಿನಲ್ಲಿರುವ ನಹ್ರಾವಾನ್ ಜಿಲ್ಲೆಯಲ್ಲಿ ಎರಡು ಕಾರ್ ಬಾಂಬ್ ಸ್ಫೋಟಗೊಂಡು 7 ಜನರು ಸಾವನ್ನಪ್ಪಿದ್ದಾರೆ. ಉತ್ತರದ ಶಾಬ್ ಮತ್ತು ದಕ್ಷಿಣದ ಅಬು ಡಿಶಿರ್ ಎಂಬ ಪ್ರದೇಶದಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದು, 6 ಜನರು ಸಾವನ್ನಪ್ಪಿದ್ದಾರೆ.
ಮಶ್ತಾಲ್, ಬಾಲದಿಯತ್ ಮತ್ತು ಉರ್ ಎಂಬ ಪ್ರದೇಶದಲ್ಲೂ ಬಾಂಬ್ ಸ್ಫೋಟವಾಗಿ ಅನೇಕರು ಮೃತಪಟ್ಟಿದ್ದು, ಇನ್ನೂ ಅನೇಕ ಪ್ರದೇಶಗಳಲ್ಲಿ ದಾಳಿ ಕೋರರು ಬಾಂಬ್ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

