26/11: 5 ಮೂಲ ದಾಖಲೆಗಳು ಪಾಕ್ ಗೆ ಹಸ್ತಾಂತರ
ನವದೆಹಲಿ: 26/11 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 600 ಪುಟಗಳನ್ನೋಳಗೊಂಡ 5 ಮೂಲ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿ ಹೇಳಿದೆ.
ಪ್ರಕರಣದ ಏಳು ಆರೋಪಿಗಳ ವಿರುದ್ಧ ದೊರೆತಿರುವ ಸಾಕ್ಷ್ಯಾಧಾರಗಳ 600ಪುಟಗಳನ್ನೋಳಗೊಂಡ ದಾಖಲೆಯನ್ನು ಪಾಕ್ ಗೆ ನೀಡಲಾಗಿದ್ದು, ಪಾಕ್ ಇನ್ನಾದರೂ ವಿಚಾರಣೆ ಮುಗಿಸುತ್ತದೇಯೇ ಎಂದು ನೋಡಬೇಕಾಗಿದೆ.
ಮುಂಬೈ ದಾಳಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಒಳಗೊಂಡ ನಿಜಪ್ರತಿ, ಘಟನೆಯಲ್ಲಿ ಸಾವನ್ನಪ್ಪಿದ್ದ 9 ಉಗ್ರರ ಮರಣೋತ್ತರ ಪರೀಕ್ಷೆ ವರದಿಯನ್ನು ಪಾಕ್ಗೆ ನೀಡಲಾಗಿದೆ.
26/11ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಾಕ್ಷಾಧಾರಗಳು ನೀಡಿ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಪಾಕಿಸ್ತಾನದ ಬಳಿ ಶೇ.99ರಷ್ಟು ಸಾಕ್ಷ್ಯಾಧಾರಗಳು ಇವೆ. ನಮ್ಮನ್ನು ಮತ್ತಷ್ಟು ಸಾಕ್ಷ್ಯಾಧಾರಗಳನ್ನು ನೀಡಿ ಎಂದು ಕೇಳುವ ಬದಲು, ತಾವೆ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಿ ಎಂದು ಹೇಳಿತ್ತು.
ಆದರೆ ಇದರ ಬೆನ್ನಲ್ಲೇ ಭಾರತ 5 ಮೂಲ ದಾಖಲೆಗಳನ್ನು ಪಾಕ್ ಗೆ ನೀಡಿದೆ. ಇನ್ನಾದರೂ ಪಾಕ್ ವಿಚಾರಣೆಯನ್ನು ತ್ವರಿತವಾಗಿ ಮುಗಿಸುತ್ತದೇಯೋ ಅಥವಾ ಮತ್ತೇ ಸಾಕ್ಷ್ಯಾಧಾರಗಳನ್ನು ಭಾರತದಿಂದ ನಿರೀಕ್ಷಿಸುತ್ತದೇಯೋ ಎಂದು ಕಾದು ನೋಡಬೇಕಿದೆ.
ಪ್ರಕರಣ ಸಂಬಂಧಿಸಿದಂತೆ ಪಾಕ್ ನ್ಯಾಯಾಂಗದ ಆಯೋಗಕ್ಕೆ ಭಾರತ ಪೂರ್ಣ ಸಹಕಾರ ನೀಡಿದೆ. ಹೆಚ್ಚಿನ ವಿಚಾರಣೆಗಾಗಿ ಆಯೋಗ ಭಾರತಕ್ಕೆ ಬಂದಾಗ, ಎಲ್ಲಾ ರೀತಿಯ ಮಾಹಿತಿಯನ್ನು ನೀಡಲಾಗಿದ್ದು, ಬೇಕಾದಂತಹ ಸಾಕ್ಷ್ಯಾಧಾರಗಳನ್ನು ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ಉನ್ನತ ಆಯೋಗಕ್ಕೆ ಒಪ್ಪಿಸಲಾಗಿದೆ. ಹಾಗಾಗಿ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವ ಹೊಣೆಗಾರಿಕೆ ಪಾಕ್ ಮೇಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

