ಬಿಜೆಪಿಯಲ್ಲಿದ್ದಾಗ ಮಾನಸಿಕವಾಗಿ ನೋಂದಿದ್ದೇನೆ: ಕರುಣಾ ಶುಕ್ಲಾ
ಭೋಪಾಲ್: ಭಾರತೀಯ ಜನತಾ ಪಕ್ಷದಲ್ಲಿರಬೇಕಾದರೆ ಮಾನಸಿಕವಾಗಿ ತೊಂದರೆ ಅನುಭವಿಸಿದ್ದೇನೆ ಎಂದು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಅವರು ಹೇಳಿದ್ದಾರೆ.
ಕರುಣಾ ಶುಕ್ಲಾ ಅವರು ನಿನ್ನೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಛತ್ತೀಸ್ಗಡದ ಹಿರಿಯ ನಾಯಕರು ತಮ್ಮನ್ನು ಕಡೆಗಣಿಸಿದ್ದರಿಂದ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಶುಕ್ಲಾ ಅವರು ಹೇಳಿಕೆ ನೀಡಿದ್ದರು.
ಇದರೆ ಬೆನ್ನಲ್ಲೇ ಇಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿರುವ ಶುಕ್ಲಾ, ಬಿಜೆಪಿಯಲ್ಲಿ ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದಾರೆ. ಪಕ್ಷದ ಮುಖಂಡರು ತನ್ನೋಡನೆ ಮಾತನಾಡಲು ಇಚ್ಚಿಸುತ್ತಿಲ್ಲ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷವು ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಬೆಲ್ತಾರಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧಿಸುವ ಆಸೆ ನನಗಿತ್ತು. ಆದರೆ ಅಲ್ಲಿ ಸ್ಫರ್ಧಿಸಲು ನನಗೆ ಟಿಕೆಟ್ ನೀಡಲಿಲ್ಲ. ಪಕ್ಷದ ಯಾವುದೇ ಕಾರ್ಯಕರ್ತನಿಗೂ ಚುನಾವಣೆಯ ಟಿಕೆಟ್ ನೀಡಿ ಎಂದು ಕೇಳುವ ಹಕ್ಕಿದೆ ಎಂದು ಶುಕ್ಲಾ ಅವರು ಹೇಳಿದ್ದಾರೆ.
ನನಗೆ ಯಾವುದೇ ಮಾಹಿತಿ ನೀಡದೆ, ಪಕ್ಷದಲ್ಲಿದ್ದ ಎಲ್ಲಾ ಸ್ಥಾನಗಳಿಂದ ನನ್ನನ್ನು ದೂರ ತಳ್ಳಲಾಯಿತು. ನನ್ನನ್ನು ಬಲವಂತವಾಗಿ ಪಕ್ಷವನ್ನು ಬಿಡುವಂತೆ ವಾತಾವರಣ ಸೃಷ್ಟಿಸಿ ಪರೋಕ್ಷವಾಗಿ ಹೊರ ಹಾಕಲು ಯತ್ನಿಸಿದ್ದಾರೆ ಎಂದು ಶುಕ್ಲಾ ಅವರು ಆಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

