ಈಗಿನ ಸುದ್ದಿ

ಪಾಟ್ನಾ ಸ್ಫೋಟದ ಹಿಂದೆ ಐಎಂ ಪಾತ್ರ ಸ್ಪಷ್ಟ: ಯಾಸಿನ್ ಭಟ್ಕಳ್ ವಶಕ್ಕೆ

ಪಾಟ್ನಾ ಸ್ಫೋಟದ ಹಿಂದೆ ಐಎಂ ಪಾತ್ರ ಸ್ಪಷ್ಟ: ಯಾಸಿನ್ ಭಟ್ಕಳ್ ವಶಕ್ಕೆ
Published On :

ಪಾಟ್ನಾ: ನಿನ್ನೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿಯ ವೇಳೆ ಪಾಟ್ನಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ಹಿಂದೆ ಇಂಡಿಯನ್ ಮುಜಾಹಿದ್ದೀನ್(ಐಎಂ) ಕೈವಾಡ ಇರುವುದು ಸ್ಪಷ್ಟವಾಗಿದ್ದು, ಈ ಸಂಬಂಧ ಐಎಂ ಸಂಸ್ಥಾಪಕ ಯಾಸಿನ್ ಭಟ್ಕಳ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯಾಸಿನ್ ಭಟ್ಕಳ್‌ನನ್ನು ವಶಕ್ಕೆ ಪಡೆದಿರುವ ದೆಹಲಿ ವಿಶೇಷ ಪೊಲೀಸ್ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ ಸ್ಫೋಟದ ಹಿಂದೆ ಮುಜಾಹಿದ್ದೀನ್ ಪಾತ್ರವಿರುವುದಾಗಿ ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ಬಂಧಿತ ಶಂಕಿತ ಉಗ್ರ ಇಮ್ತಿಯಾಜ್ ಅನ್ಸಾರಿಯ ರಾಂಚಿಯ ನಿವಾಸದಲ್ಲಿದ್ದ ಪ್ರೆಸ್ಸರ್ ಕೂಕ್ಕರ್ ಬಾಂಬ್‌ಗಳನ್ನು ಸೋಮವಾರ ಪೊಲೀಸರು ವಶಪಡಿಸಿಕೊಂಡಿದ್ದು, ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ವಿಚಾರಣೆ ವೇಳೆ ಅನ್ಸಾರಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದು, ಆತನಿಂದ ಬಾಂಬ್‌ಗಳ ಬಗ್ಗೆ ಮಾಹಿತ ಪಡೆದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶೀಘ್ರ ಕಾರ್ಯಾಚರಣೆ ನಡೆಸಿ, ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆ ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಯನ್ನು ಕೈಗೆತ್ತಿಕೊಂಡಿದ್ದು, ಈ ಸಂಬಂಧ ಸ್ಫೋಟದ ರೂವಾರಿ ಇಂಡಿಯನ್ ಮುಜಾಹಿದ್ದೀನ್‌ನ ತೆಹ್ಸೀನ್ ಅಖ್ತರ್ ಸೇರಿದಂತೆ 13 ಶಂಕಿತರನ್ನು ಬಂಧಿಸಿದೆ.

ಮೋದಿ ಅವರ 'ಹೂಂಕಾರ್ ರ್ಯಾಲಿ' ಆರಂಭಕ್ಕೆ ಮುನ್ನವೇ ಬಿಹಾರ ರಾಜಧಾನಿ ಪಟನಾದಲ್ಲಿ 8 ಅಲ್ಪಪ್ರಮಾಣದ ಸರಣಿ ಸ್ಫೋಟಗಳು ಸಂಭವಿಸಿವೆ. ಈ ದುರಂತದಲ್ಲಿ ಐವರು ಅಸುನೀಗಿದ್ದಾರೆ. 83 ಮಂದಿ ಗಾಯಗೊಂಡಿದ್ದಾರೆ. ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಪಟನಾ ರೇಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 10ರಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದಾದ ಬಳಿಕ ರ್ಯಾಲಿ ನಡೆಯಬೇಕಾಗಿದ್ದ ಬೆಳಗ್ಗೆ 11.40ರಿಂದ 11.45ರ ನಡುವಿನ ಅವಧಿಯಲ್ಲಿ ಗಾಂಧಿ ಮೈದಾನ ಸುತ್ತಮುತ್ತ ಆರು ಅಲ್ಪಪ್ರಮಾಣದ ಸ್ಫೋಟಗಳು ಸಂಭವಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.