ಈಗಿನ ಸುದ್ದಿ

ಮೋದಿಯನ್ನು ಕೊಲ್ಲಲು ಪಿತ್ತೂರಿ ನಡೆಸಲಾಗಿದೆ: ಬಿಜೆಪಿ

Published On :

ಪಾಟ್ನಾ: ಭಾರತೀಯ ಜನತಾ ಪಕ್ಷ(ಬಿಜೆಪಿ) ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಪಿತ್ತೂರಿ ನಡೆಸಲಾಗಿದೆ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಸೋಮವಾರ ಆರೋಪಿಸಿದ್ದಾರೆ.

ಪಾಟ್ನಾದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಫೋಟಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು. ಸ್ಫೋಟವನ್ನು ತಡೆಯುವಲ್ಲಿ ಬಿಹಾರ ಸರ್ಕಾರ ವಿಫಲವಾಗಿದೆ. ಮೋದಿ ಅವರನ್ನು ಕೊಲ್ಲಲು ಉದ್ದೇಶ ಪೂರ್ವಕವಾಗಿ ಸರಣಿ ಬಾಂಬ್ ಸ್ಫೋಟಿಸಲಾಗಿದೆ ಎಂದು ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗಿರುವ ಮೋದಿ ಅವರನ್ನು ಹತ್ಯೆ ಮಾಡುವ ಮೂಲಕ ಪ್ರಬಲ ಸ್ಪರ್ಧಿಯನ್ನು ಚುನಾವಣೆಯಿಂದ ತೆಗೆದುಹಾಕಲು ಕೃತ್ಯ ನಡೆಸಲಾಗಿದೆ ಎಂದರು.

ಮೋದಿ ಅವರ ಜೀವಕ್ಕೆ ಬೆದರಿಕೆ ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರು ಅದನ್ನು ಬಿಹಾರ ಸರ್ಕಾರ ನಿಲರ್ಕ್ಷಿಸಿದೆ ಎಂದರು. ಬಿಜೆಪಿ ರ್ಯಾಲಿಗೆ ಬಿಹಾರ ಸರ್ಕಾರ ಸರಿಯಾದ ಭದ್ರತೆ ಒದಗಿಸಿರಲಿಲ್ಲ. ರ್ಯಾಲಿಗೆ ಬರುವಂತ ಜನರನ್ನು ಸರಿಯಾದ ರೀತಿಯಲ್ಲಿ ಬಿಹಾರ ಪೊಲೀಸರು ತಪಾಸಣೆ ನಡೆಸಿಲ್ಲ. ತಪಾಸಣೆ ನಡೆಸದೇ ಗಾಂಧಿ ಮೈದಾನದೊಳಗೆ ಜನರನ್ನು ಬಿಟ್ಟಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ಹಲವು ಹಿರಿಯ ರಾಷ್ಟ್ರ ನಾಯಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವೇದಿಕೆಯಿಂದ ಸುಮಾರು 100 ಮೀಟರ್‌ನಲ್ಲಿ ಕಡಿಮೆ ಪ್ರಮಾಣದ ಬಾಂಬ್ ಸ್ಫೋಟಗೊಂಡಿದ್ದು, ಅದರ ತೀವ್ರತೆ ಹೆಚ್ಚಾಗಿದಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದರು.

ಮೋದಿ ಅವರ 'ಹೂಂಕಾರ್ ರ್ಯಾಲಿ' ಆರಂಭಕ್ಕೆ ಮುನ್ನವೇ ಬಿಹಾರ ರಾಜಧಾನಿ ಪಟನಾದಲ್ಲಿ 8 ಅಲ್ಪಪ್ರಮಾಣದ ಸರಣಿ ಸ್ಫೋಟಗಳು ಸಂಭವಿಸಿತ್ತು. ಈ ದುರಂತದಲ್ಲಿ ಆರು ಮಂದಿ ಅಸುನೀಗಿದ್ದಾರೆ. 83 ಮಂದಿ ಗಾಯಗೊಂಡಿದ್ದಾರೆ. ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಪಟನಾ ರೇಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 10ರಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದಾದ ಬಳಿಕ ರ್ಯಾಲಿ ನಡೆಯಬೇಕಾಗಿದ್ದ ಬೆಳಗ್ಗೆ 11.40ರಿಂದ 11.45ರ ನಡುವಿನ ಅವಧಿಯಲ್ಲಿ ಗಾಂಧಿ ಮೈದಾನ ಸುತ್ತಮುತ್ತ ಆರು ಅಲ್ಪಪ್ರಮಾಣದ ಸ್ಫೋಟಗಳು ಸಂಭವಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.