ಪಟೇಲರ ಧೋರಣೆಯನ್ನು ಮೋದಿ ಒಪ್ಪುತ್ತಾರಾ?: ತಿವಾರಿ
ನವದೆಹಲಿ: ಅಹಮದಾಬಾದ್ನಲ್ಲಿ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ 180 ಮೀ ಉದ್ದದ ಸ್ಮಾರಕ ನಿರ್ಮಾಣ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೆಸರೆರೇಚಾಟ ಶುರುವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಅವರು, ಆರ್ಎಸ್ಎಸ್ ಸಮಾಜದಲ್ಲಿ ಕೋಮು ದ್ವೇಷ ಹರುಡುತ್ತಿದೆ ಎಂಬದು ಸರ್ದಾರ್ ವಲ್ಲಬಾಯ್ ಪಟೇಲ್ರ ಧೋರಣೆಯಾಗಿತ್ತು ಇದನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಆರ್ಎಸ್ಎಸ್ ಬಗೆಗಿನ ಸರ್ದಾರ್ ಪಟೇಲರ ಧೋರಣೆಯನ್ನು ಒಪ್ಪುವುದಾದರೆ ಅಹಮದಾಬಾದ್ನಲ್ಲಿ ತಾವು ನಿರ್ಮಿಸುತ್ತಿರುವ ಕಂಚಿನ ಪುತ್ಥಳಿಗೆ ಯಾವ ಮಹತ್ವವಿದೆ ಹೇಳಿ ಎಂದಿದ್ದಾರೆ. ಆರ್ಎಸ್ಎಸ್, ಬಿಜೆಪಿ ಸರ್ದಾರ್ ಪಟೇಲರ ಪರಂಪರೆಯನ್ನು ಕೇವಲ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲು ಯತ್ನಿಸುತ್ತಿದೆ. ಪಟೇಲರ ಸ್ಮಾರಕ ಕಟ್ಟಿದಾಕ್ಷಣ ಸರ್ದಾರ್ ಪರಂಪರೆಯನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸರ್ದಾರ್ ಪಟೇಲರು 9-11-1948ರಂದು ರಾಷ್ಟ್ರೀಯ ಸ್ವಯಂ ಸೇವಕ(ಆರ್ಎಸ್ಎಸ್) ಸಂಘದ ಸಂಸ್ಥಾಪಕ ಎಂ.ಎಸ್ ಗೋಲ್ವಾಕರ್ಗೆ ಪತ್ರ ಬರೆದಿದ್ದು, ಪತ್ರದಲ್ಲಿ ಆರ್ಎಸ್ಎಸ್ ಸಮಾಜದಲ್ಲಿ ಕೋಮು ದ್ವೇಷ ಹರುಡುತ್ತಿದೆ ಎಂದು ಪಟೇಲರು ಉಲ್ಲೇಖಿಸಿದ್ದರು. ಅಲ್ಲದೆ ಮಹಾತ್ಮ ಗಾಂಧೀಜಿಯ ಹತ್ಯೆಗೂ ಸಹ ಆರ್ಎಸ್ಎಸ್ ಮೂಲ ಹೊಣೆ ಎಂಬ ಧೋರಣೆ ಸರ್ದಾರ್ ಪಟೇಲ್ ಹೊಂದಿದ್ದರು ಎಂದು ತಿವಾರಿ ಹೇಳಿದ್ದಾರೆ.
ಸ್ವತಃ ಬಿಜೆಪಿಗೆ ಇದರ ಇತಿಹಾಸ ಗೊತ್ತಿಲ್ಲ. ಹೀಗಾಗಿ ಅವರು ಬೇರೆಯವರ ಇತಿಹಾಸ ಕದಿಯಲು ಯತ್ನಿಸುತ್ತಿದ್ದಾರೆ. ಯಾರಿಗೆ ಇತಿಹಾಸದ ಅರಿವಿರುವುದಿಲ್ಲವೋ ಅವರು ಮತ್ತೊಬ್ಬರ ಇತಿಹಾಸ ಕದಿಯಲು ಅಥವಾ ಅನುಕರಿಸಲು ಮುಂದಾಗುತ್ತಾರೆ. ಮತ್ತೊಬ್ಬರ ಪರಂಪರೆ ಕದಿಯಲು ಯತ್ನಿಸುವ ಮುನ್ನ ಸೂಕ್ತವಾದ ಅಧ್ಯಯನ ನಡೆಸಿದಾಗ ಅವರ ಅಭಿಪ್ರಾಯ ಧೋರಣೆ ಎನ್ನಿತ್ತು ಎಂಬುದು ತಿಳಿಯುತ್ತದೆ ಎಂದಿದ್ದಾರೆ.
ಇದೇ ವೇಳೆ, ಸ್ವಾತಂತ್ರ್ಯ ಹೋರಾಟದಲ್ಲಿ ಇಂಡಿಯನ್ ಕಾಂಗ್ರೆಸ್ ಸಕ್ರಿಯವಾಗಿ ಭಾಗವಹಿಸಿದೆ. ಅಲ್ಲದೆ ಭಾರತದ ಏಕೀಕರಣಕ್ಕಾಗಿಯು ಕಾಂಗ್ರೆಸ್ ದುಡಿದಿದೆ ಎಂದು ತಿವಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

