ಸರ್ದಾರ್ ಪಟೇಲ್ ಪ್ರಧಾನಿಯಾಗಿದಿದ್ದರೆ ಚಿತ್ರಣವೇ ಬದಲಾಗುತ್ತಿತ್ತು : ಮೋದಿ
ಅಹಮದಾಬಾದ್: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲರ ಜೀವನ ಚರಿತ್ರೆಯನ್ನು ಬಿಂಬಿಸುವ ಸಂಗ್ರಹಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಒಂದೇ ವೇದಿಕೆಯನ್ನು ಮಂಗಳವಾರ ಹಂಚಿಕೊಂಡಿದ್ದರು.
ಈ ವೇಳೆ ಮಾತನಾಡಿದ ನರೇಂದ್ರ ಮೋದಿ ಅವರು, ಗುಜರಾತ್ಗೆ ಆಗಮಿಸಿರುವ ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸಿದರು. ಉತ್ತಮ ಆಡಳಿತಕ್ಕಾಗಿ ಗುಜರಾತ್ ರಾಜ್ಯಕ್ಕೆ ಪ್ರಶಸ್ತಿ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ನಾನು ಆಭಾರಿ. ಗುಜರಾತ್ಗೆ ಸಂದಿರುವ ಗೌರವದಿಂದ ನಾವು ಪ್ರೇರಿತರಾಗಿದ್ದು, ರಾಜ್ಯದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಬಲ ಬಂದಂತಾಗಿದೆ ಎಂದರು.
ಇದೇ ವೇಳೆ, ಸರ್ದಾರ್ ವಲ್ಲಭ ಭಾಯ್ ಅವರು ದೇಶದ ಪ್ರಥಮ ಪ್ರಧಾನಿಯಾಗಬೇಕಿತ್ತು. ಅವರು ಪ್ರಧಾನಿಯಾಗಿದಿದ್ದರೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದರು. ಆಗ ದೇಶದ ಚಿತ್ರಣವೇ ಬದಲಾಗಿರುತ್ತಿತ್ತು ಎಂದು ಪ್ರಧಾನಿ ಸಿಂಗ್ ಅವರ ಸಮ್ಮುಖದಲ್ಲೇ ಮೋದಿ ಹೇಳಿದ್ದಾರೆ.
ಉಗ್ರವಾದಿಗಳು- ಮಾವೋಗಳು ಶಸ್ತ್ರತ್ಯಾಗ ಮಾಡಬೇಕು. ಬಂಧೂಕು ತೋರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನೀವು ಆಯುಧಗಳನ್ನು ತೊರೆದು ಸಮಾಜದ ಮುಖ್ಯ ವಾಹಿನಿಯೊಂದಿಗೆ ಬೆರೆಯಬೇಕು. ಆಗ ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ, ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ಭಾರತದ ಮಹಾನ್ ನಾಯಕರ ಸಾಲಿನಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲರು ಅಗ್ರ ಗಣ್ಯರು. ಸರ್ದಾರ್ ವಲ್ಲಭ ಭಾಯ್ ಪಟೇಲರು ದೇಶದ ಹೆಮ್ಮೆಯ ಪುತ್ರರಾಗಿದ್ದರು ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ದೇಶವನ್ನು ಒಂದು ಗೂಡಿಸುವಲ್ಲಿ ಪಟೇಲರ ಪಾತ್ರ ದೊಡ್ಡದು. ಭಾರತದ ಏಕೀಕರಣದಲ್ಲಿ ಪಟೇಲರ ಪಾತ್ರ ಸ್ಮರಣೀಯ ಎಂದು ಸಿಂಗ್ ಕೊಂಡಾಡಿದರು. ವಲ್ಲಭ ಭಾಯಿ ಪಟೇಲರು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದು, ಜಾತ್ಯತೀತ ಮುಖಂಡ ಎನ್ನಿಸಿಕೊಂಡಿದ್ದರು. ಅಲ್ಲದೆ ದೇಶದ ಪ್ರಗತಿಪರ ಕಾರ್ಯಗಳಲ್ಲಿ ಅವರು ಹೆಚ್ಚು ಶ್ರಮವಹಿಸಿದ್ದರು. ರೈತರು, ದಲಿತವರ್ಗದ ಶ್ರೇಯೋಭಿಲಾಷಿಗಳಾಗಿ ದುಡಿದ ಧೀಮಾಂತ ವ್ಯಕ್ತಿ ಎಂದು ಸಿಂಗ್ ತಿಳಿಸಿದರು.
ಪಟೇಲರಿಗಿದ್ದ ಇಚ್ಛಾಶಕ್ತಿಯು ಇಂದಿನವರಲ್ಲಿ ಇಲ್ಲ. ಇಂದಿನ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

