ಪಾಕ್ ಸೇನೆಯ ನೆರವಿಲ್ಲದೆ ಉಗ್ರರು ಗಡಿ ನುಸುಳಲು ಅಸಾಧ್ಯ: ಆಂಟನಿ

ನವದೆಹಲಿ: ಅಂತರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟಿನಿ ಬುಧವಾರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಯಲ್ಲಿ ಪಾಕ್ ಸೈನಿಕರು ನಿರಂತರವಾಗಿ ದಾಳಿ ನಡೆಸುತ್ತಿರುವುದು ಅಕ್ಷಮ್ಯ ಎಂದು ಪಾಕಿಸ್ತಾನ ವಿರುದ್ಧ ಕಿಡಿಕಾರಿದರು. ಇದೇ ವೇಳೆ, ಪ್ರಸಕ್ತ ವರ್ಷ ಹಲವಾರು ಅಸಾಮಾನ್ಯ ಬೆಳವಣಿಗೆಗಳು ಸಂಭವಿಸಿವೆ. ಪಾಕ್ ಸೈನಿಕರು ಪದೇಪದೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿದ್ದಾರೆ. ಇದು ಹೆಚ್ಚು ಕಳವಳಕಾರಿ ವಿಷಯವಾಗಿದೆ. ನನಗೆ ನಂಬಿಕೆ ಇದೆ. ನಮ್ಮ ಸೇನೆ ಹೆಚ್ಚು ಸದೃಡವಾಗಿದ್ದು. ಅನಿರೀಕ್ಷಿತ ದಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಮರ್ಥರಾಗಿದ್ದಾರೆ ಎಂದರು.
ಪ್ರಸಕ್ತ ವರ್ಷದಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿರುವುದಕ್ಕೆ ಭಾರತವೇ ಸಾಕ್ಷಿಯಾಗಿದೆ. ಅಲ್ಲದೆ ಗಡಿಯೊಳಗೆ ನುಸುಳುತ್ತಿರುವ ಉಗ್ರರ ಉಪಟಳವು ಹೆಚ್ಚಾಗಿದೆ. ಗಡಿಯೊಳ ನುಸುಳಲು ಉಗ್ರರಿಗೆ ಪಾಕ್ ಸೈನಿಕರು ಸಹಕರಿಸುತ್ತಿದ್ದಾರೆ. ಪಾಕ್ ಸೈನಿಕರ ನೇರವಿಲ್ಲದೆ ಭಾರತದ ಗಡಿಯೊಳಗೆ ಉಗ್ರರು ನುಸುಳಲು ಸಾಧ್ಯವಿಲ್ಲ ಎಂದರು.
ಅಂತರಾಷ್ಟ್ರೀಯ ಗಡಿ ಭಾಗದ ಎರಡು ಬದಿಗಳಲ್ಲೂ ಶಸ್ತ್ರಸರ್ಜಿತ ಯೋಧರು ಕಾವಲು ಕಾಯುತ್ತಿದ್ದಾರೆ. ಈಗಿದ್ದರು ಭಯೋತ್ಪಾದಕರು ಪಾಕಿಸ್ತಾನ ಗಡಿ ಕಡೆಯಿಂದ ಭಾರತದ ಗಡಿಯೊಳಗೆ ಸುಲಭವಾಗಿ ನುಸುಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೀಗಾಗಿ ಭಯೋತ್ಪಾದಕರು ಗಡಿ ಒಳನುಸುಳಲು ಪಾಕ್ ಸೈನಿಕರ ನೇರವಿನಿಂದ ಮಾತ್ರ ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


