ಈಗಿನ ಸುದ್ದಿ

ಬುಂದೇಲ್ಖಂಡ್‌ದ ಕೂಗು ಲಖನೌಗೆ ಕೇಳಿಸುತ್ತಿಲ್ಲ: ರಾಹುಲ್ ಗಾಂಧಿ

Published On :

ಹಮೀರ್‌ಪುರ್: ಉತ್ತರ ಪ್ರದೇಶ ಸರ್ಕಾರದ ವಿರದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬುಂದೇಲ್ಖಂಡ್‌ದ ಜನತೆಯ ಕೂಗು ದೆಹಲಿಗೆ ಕೇಳಿಸುತ್ತೇ ಆದರೆ ಲಖನೌಗೆ ಕೇಳಿಸುತ್ತಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಇಂದು ಬುಂದೇಲ್ಖಂಡ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಂದೇಲ್ಖಂಡ್ ಜನತೆ ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ನೀವು ಇಲ್ಲಿಗೆ ರೈಲ್ವೆ ಹಳಿಗಳನ್ನು ತನ್ನಿ ಎಂದು ಕೇಳಬೇಡಿ. ಬದಲಾಗಿ ಕೈಗಾರಿಕೋದ್ಯಮಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಎಂದು ಜನತೆಗೆ ಕರೆ ನೀಡಿದರು.

ಮತದಾರರು ಬುಂದೇಲ್ಖಂಡ್‌ನಲ್ಲಿ ಕೈಗಾರಿಕೋದ್ಯಮಗಳನ್ನು ಸ್ಥಾಪಿಸುವಂತೆ ಆಗ್ರಹಿಬೇಕು. ಆಗ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯವಾಗುತ್ತದೆ. ಇಲ್ಲಿನ ಜನತೆ ದೊಡ್ಡ ಕನಸುಗಳನ್ನು ಕಾಣಬೇಕು ಆಗ ಮಾತ್ರ ಕನಸುಗಳನ್ನು ಸಕಾರಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೇವಲ ದೆಹಲಿಯನ್ನು ಸಂಪರ್ಕಿಸುವ ಕನಸು ಕಾಣಬಾರದು. ಅದಕ್ಕೂ ಹೆಚ್ಚಿನ ಅಂದರೆ ಅಮೆರಿಕಾವನ್ನು ಸಂಪರ್ಕಿಸುವಂತ ಕನಸನ್ನು ಕಾಣಿ ಎಂದರು.

ಇದೇ ವೇಳೆ, ಬುಂದೇಲ್ಖಂಡ್ ಅಭಿವೃದ್ಧಿ ಪತದಲ್ಲಿ ಮುನ್ನಡೆಸಿ, ಇದನ್ನು ದೆಹಲಿ ಅಥವಾ ಬೆಂಗಳೂರಿನಂತೆ ಮಾಡಲು ಯಾರು ಮುಂದಾಗುತ್ತಾರೋ ಅಂತಹ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮತದಾರರಿಗೆ ಕರೆಕೊಟ್ಟರು. ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಇಂತಿಷ್ಟು ಹಣವನ್ನು ಬಿಡುಗೆಡೆ ಮಾಡುತ್ತದೆ. ಅಂದರಂತೆ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಹಣ ಬಂದು ಸೇರುತ್ತದೆ. ಆದರೆ ಅದನ್ನು ಜನರಿಗೆ ತಲುಪಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸೋತಿದೆ ಎಂದರು.

ಕೇಂದ್ರ ಸರ್ಕಾರ ಬಿಕ್ಕಟ್ಟಿನಂತಹ ಸಂದರ್ಭಗಳಲ್ಲಿ ಆಯಾ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತದೆ. ಅದರಂತೆ ಬುದೇಂಲ್ಖಡ್ ಜಿಲ್ಲೆಗೂ ಅನುದಾನ ಬಿಡುಗಡೆ ಮಾಡಿದೆ. ಇದರ ಪ್ರಯೋಜನ ತಾವುಗಳು ಪಡೆದುಕೊಂಡಿದ್ದಿರಾ ಎಂದು ಜನರನ್ನು ಪ್ರಶ್ನಿಸಿದರು. ಆದರೆ ಜನರು ನಮಗೆ ಯಾವುದೇ ಅನುದಾನದ ಪ್ರಯೋಜನಗಳು ದೊರಕಿಲ್ಲ ಎಂದು ಘಂಟಾಗೋಷವಾಗಿ ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.