ಈಗಿನ ಸುದ್ದಿ

ರಣಜಿಯಲ್ಲಿ ಸಚಿನ್ ಅಜೇಯ 79, ಮುಂಬೈಗೆ ಜಯ

ರಣಜಿಯಲ್ಲಿ ಸಚಿನ್ ಅಜೇಯ 79, ಮುಂಬೈಗೆ ಜಯ
Published On :

ಲಾಹ್ಲಿ: ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಅಂಚಿನಲ್ಲಿರುವ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ರಣಜಿ ಪಂದ್ಯದಲ್ಲಿ ಅಜೇಯ 79 ರನ್‌ಗಳನ್ನು ಸಿಡಿಸಿದ್ದು, ಏಕಾಂಗಿ ಹೋರಾಟದ ಮೂಲಕ ಮುಂಬೈ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದಾರೆ.

ಹರ್ಯಾಣ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುಂಬೈ ತಂಡ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಇದರೊಂದಿಗೆ ಸಚಿನ್ ತಮ್ಮ ಕೊನೆಯ ದೇಶಿ ಕ್ರಿಕೆಟ್ ಬದುಕಿನಲ್ಲಿ ಸ್ಮರಣಿಯ ಸಾಧನೆ ಮಾಡುವ ಮೂಲಕ ವಿದಾಯ ಹೇಳಿದ್ದಾರೆ.

ಬನ್ಸಿಲಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಹರಿಯಾಣ ತಂಡಗಳ ನಡುವಣ ಎ ಗುಂಪಿನ ಪಂದ್ಯದಲ್ಲಿ ಗೆಲುವು ಕ್ಷಣಕ್ಷಣಕ್ಕೂ ಸ್ಥಾನ ಬದಲಿಸುತ್ತಾ ಪಂದ್ಯದ ರೋಚಕತೆಯನ್ನು ಹೆಚ್ಚಿಸುತ್ತಿತ್ತು. ನಾಲ್ಕನೇ ಅಂತಿಮ ದಿನದಾಟದಲ್ಲಿ ಮುಂಬೈ ಗೆಲುವಿಗೆ 39 ರನ್ ಬೇಕಾಗಿತ್ತು. ಆದರೆ ಮುಂಬೈ ಬಳಿ ಕೇವಲ ನಾಲ್ಕು ವಿಕೆಟ್‌ಗಳು ಮಾತ್ರ ಕೈಯಲ್ಲಿದ್ದವು. ಮೊದಲ ಇನಿಂಗ್ಸ್ ನಲ್ಲಿ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದ್ದ ಸಚಿನ್, ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಆಟವಾಡಿ ಒಟ್ಟು 175 ಎಸೆತಗಳನ್ನೆದುರಿಸಿ 79 ರನ್ ಗಳಿಸಿ ಅಜೇಯರಾದರು. ಇದರೊಂದಿಗೆ ಮುಂಬೈ ಗೆಲುವಿನ ದಡ ಸೇರಿತು.

ಮಂಗಳವಾರ ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ 6 ವಿಕೆಟ್‌ಗಳನ್ನು ಕಳೆದುಕೊಂಡು 201 ರನ್ ಗಳಿಸಿತ್ತು, ಈ ವೇಳೆ ಸಚಿನ್ 55 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಸಚಿನ್‌ಗೆ ಆಸರೆಯಾಗಿ ಧವಳ್ ಕುಲಕರ್ಣಿ ಅಜೇಯ 16 ರನ್ ಗಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.