ಈಗಿನ ಸುದ್ದಿ

ಬಡತನಕ್ಕೆ ನಿರುದ್ಯೋಗ ಕಾರಣ ಅಲ್ಲ: ರಾಹುಲ್

ಬಡತನಕ್ಕೆ ನಿರುದ್ಯೋಗ ಕಾರಣ ಅಲ್ಲ: ರಾಹುಲ್
Published On :

ಬರನ್ (ರಾಜಸ್ಥಾನ): ಮೂಲಸೌಕರ್ಯ ಎಲ್ಲರಿಗೂ ಅತ್ಯಗತ್ಯ ಎಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ ಪ್ರತಿಯೊಬ್ಬ ಕೂಲಿ ಕಾರ್ಮಿಕನೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಇಂದು ರಾಜಸ್ಥಾನದ ಬರನ್ ಜಿಲ್ಲೆಯಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಕೂಲಿ ಕಾರ್ಮಿಕನು ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂಬ ಆಸೆ ನನ್ನದು, ಈ ನನ್ನ ಕನಸು ಯಾವಾಗ ಸಾಧ್ಯವಾಗುತ್ತದೆ ಎಂದು ಕಾದು ನೋಡುತ್ತಿದ್ದೇನೆ ಎಂದಿದ್ದಾರೆ. ಬರೀ ಕನಸನ್ನೇ ನೋಡುತ್ತಿದ್ದರೆ ಸಾಲದು ಅದಕ್ಕೆ ಪೂರಕವಾಗಿ ಶ್ರಮ ವಹಿಸಬೇಕು. ಕಾಂಗ್ರೆಸ್ ಈ ಕನಸನ್ನು ಈಡೇರಿಸಲು ಶ್ರಮಿಸುತ್ತಿದೆ ಎಂದಿದ್ದಾರೆ.

ಪಕ್ಷದ ಮುಖ್ಯ ಉದ್ದೇಶ ದೇಶದ ಪ್ರತಿಯೊಬ್ಬ ಪ್ರಜೆಯೂ ವಿಮಾನದಲ್ಲಿ ಪ್ರಯಾಣಿಸುವುದನ್ನು ಕಾಣುವ ಹಂಬಲ ಕಾಂಗ್ರೆಸ್‌ನದ್ದು, ಶ್ರೀಮಂತರು ಮಾತ್ರ ವಿಮಾನಗಳಲ್ಲಿ ಪ್ರಯಾಣಿಸಬೇಕೆ? ಕೂಲಿ ಕಾರ್ಮಿಕನಿಗೆ ಯಾಕೆ ಸಾಧ್ಯವಾಗಿಲ್ಲ. ಈ ಅಸಾಧ್ಯವನ್ನು ಸಾಧ್ಯವನ್ನಾಗಿ ಮಾಡಲು ಕಾಂಗ್ರೆಸ್ ಶ್ರಮಿಸುತ್ತಿದೆ ಎಂದರು. ಇದೇ ವೇಳೆ, ಯಾವುದೇ ಒಂದು ದೇಶದ ಅಭಿವೃದ್ದಿ ಸಾಧಿಸಬೇಕಾದರೆ ಅದು ಯುವಜನತೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಯುವಕರೆ ದೇಶದ ಅಸ್ತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರವಾನ್ ನದಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ಬಡತನಕ್ಕೆ ನಿರುದ್ಯೋಗ ಕಾರಣ ಅಲ್ಲ. ಆರೋಗ್ಯ ಸಮಸ್ಯೆ ಹಾಗೂ ಅನಾರೋಗ್ಯ ಸಹ ಕಾರಣ ಎಂದರು. ಅನಾರೋಗ್ಯ ಉಂಟಾದಾಗ ಒಬ್ಬ ಕೂಲಿ ಕಾರ್ಮಿಕ ಚಿಕಿತ್ಸೆಗೆ ಎಷ್ಟು ಹಣ ವ್ಯಹಿಸಬಹುದು ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್ ಇಂತಹ ಸ್ಥಿತಿಯನ್ನು ಬೇರು ಸಮೇತ ಕಿತ್ತು ಹಾಕಲು ನಿರ್ಧರಿಸಿದೆ ಎಂದರು.

ಮೂಲಸೌಕರ್ಯ ಒದಗಿಸಿದರೆ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ ಆದರೆ ಇಲ್ಲಿ ಮೂಲಸೌಕರ್ಯ ಒದಗಿಸುವುದೆ ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಮೂಲಸೌಕರ್ಯ ಒದಗಿಸಲು ಕಾಂಗ್ರೆಸ್ ಅವಿರತ ಶ್ರಮವಹಿಸುತ್ತಿದೆ ಎಂದು ರಾಹುಲ್ ತಿಳಿಸಿದ್ದಾರೆ.  

ಯಾವುದೇ ಸಮಸ್ಯೆಯನ್ನು ತೆಗೆದುಕೊಂಡರು ಅಲ್ಲಿ ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತದೆ. ಪ್ರತಿಪಕ್ಷದ್ದೇ ಒಂದು ಅಭಿಪ್ರಾಯವಾದರೆ ನಮ್ಮದು ಮತ್ತೊಂದು ಅಭಿಪ್ರಾಯವಾಗಿರುತ್ತದೆ. ಹೀಗಿರುವಾಗ ಒಂದಕ್ಕೊಂದು ಸಾಮತ್ಯೆ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.