ಈಗಿನ ಸುದ್ದಿ

ಮುಜಾಫರ್‌ನಗರ ಗಲಭೆ: 6 ರಾಜಕಾರಣಿಗಳ ವಿರುದ್ಧ ವಾರೆಂಟ್

ಮುಜಾಫರ್‌ನಗರ ಗಲಭೆ: 6 ರಾಜಕಾರಣಿಗಳ ವಿರುದ್ಧ ವಾರೆಂಟ್
Published On :

ಮುಜಾಫರ್‌ನಗರ: 50 ಮಂದಿಯ ಸಾವಿಗೆ ಕಾರಣವಾದ ಮುಜಾಫರ್‌ನಗರ ಹಿಂಸಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ರಾಜಕಾರಣಿಗಳ ವಿರುದ್ಧ ಸ್ಥಳೀಯ ನ್ಯಾಯಾಲಯ ಬುಧವಾರ ಬಂಧನ ವಾರೆಂಟ್ ಜಾರಿಮಾಡಿದೆ.

ಮುಜಾಫರ್‌ನಗರ ಗಲಭೆ ಸಂದರ್ಭದಲ್ಲಿ ಪ್ರಮುಖ ಪಕ್ಷಗಳ ರಾಜಕಾರಣಿಗಳು ಸಭೆಗಳನ್ನು ಮಾಡಬಾರದೆಂಬ ನಿಷೇಧಾಜ್ಞೆ ಜಾರಿಯಲ್ಲಿದ್ದರು ಅದನ್ನು ಉಲ್ಲಂಘಿಸಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಕೋರ್ಟ್, ಬಿಎಸ್‌ಪಿ ನಾಯಕರಾದ ಖಾಧಿರ್ ರಣ, ಜಮೀಲ್ ಅಹಮದ್ ಮತ್ತು ನೂರ್ ಸಲೀಂ ರಣ, ಕಾಂಗ್ರೆಸ್ ಮಾಜಿ ಸಂಸದ ಶೀಬುಜಾಮನ್, ಬಿಜೆಪಿಯ ನಾಯಕರಾದ ಹುಕುಂ ಸಿಂಗ್, ಸಂಗತ್ ಸಿಂಗ್ ಸೋಮ್ ವಿರುದ್ಧ ವಾರೆಂಟ್ ಜಾರಿ ಮಾಡಿದೆ.

ಕೋರ್ಟ್‌ನ ಆದೇಶದಂತೆ ಇನ್ನು ಎರಡು ದಿನಗಳೊಳಗೆ ಆರು ರಾಜಕಾರಣಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪ್ರವೀಣ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಮೂರ್ನಾಲ್ಕು ರಾಜಕಾರಣಿಗಳನ್ನು ಬಂಧಿಸಲಾಗಿದ್ದು, ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ಆರು ರಾಜಕಾರಣಿಗಳ ಬಂಧನಕ್ಕೆ ಹತ್ತು ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ನಿನ್ನೆಯಷ್ಟೆ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿದ್ದ ಬಿಜೆಪಿ ನಾಯಕಿ ಉಮಾ ಭಾರತಿ ಅವರನ್ನು ತಡೆ ಹಿಡಿಯಲಾಗಿತ್ತು. ಇದೇ ಸಂದರ್ಭದಲ್ಲಿ ರಾಜಕಾರಣಿಗಳ ವಿರುದ್ಧ ಕೋರ್ಟ್ ವಾರೆಂಟ್ ಜಾರಿಮಾಡಿದ್ದು, ರಾಜಕಾರಣಿಗಳು ಬಂಧನದ ಭೀತಿ ಎದುರಿಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.