ಆದರ್ಶ ಹೌಸಿಂಗ್ ಹಗರಣ: ಶಿಂಧೆಗೆ ಕ್ಲೀನ್ ಚಿಟ್

ಮುಂಬೈ: ಆದರ್ಶ ಹೌಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಅವರಿಗೆ ಸಿಬಿಐ ಗುರುವಾರ ಕ್ಲೀನ್ ಚಿಟ್ ನೀಡಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಶಿಂಧೆ ಅವರು ಅಧಿಕಾರವನ್ನು ದೂರಪಯೋಗ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮುಖ ಸಾಕ್ಷ್ಯಗಳು ಸಿಗದಿದ್ದ ಕಾರಣ ಅವರನ್ನು ಪ್ರಕರಣದಿಂದ ಕೈ ಬೀಡಲಾಗುತ್ತಿದೆ ಎಂದು ಮುಂಬೈ ಹೈಕೋರ್ಟ್ಗೆ ಸಿಬಿಐ ತಿಳಿಸಿದೆ.
ಆದರ್ಶ ಬಹುಮಹಡಿ ಕಟ್ಟಡ ನಿರ್ಮಾಣದಲ್ಲಿ ಹಲವಾರು ನಿಯಮಗಳ ಉಲ್ಲಂಘನೆಯಾಗಿದೆ. 6 ಅಂತಸ್ತುಗಳ ನಿರ್ಮಾಣವಾಗಬೇಕಿದ್ದ ಕಟ್ಟಡವನ್ನು ಯಾವುದೇ ಪೂರ್ವಾನುಮತಿ ಇಲ್ಲದೇ 31 ಅಂತಸ್ತುಗಳಿಗೆ ಏರಿಸಲಾಗಿದೆ. ಇದರಲ್ಲಿ ಶಿಂಧೆ ಅವರದ್ದು ಮನೆಗಳಿವೆ. ಹೀಗಾಗಿ ಶಿಂಧೆ ಹೆಸರನ್ನು ಪ್ರಕರಣದಲ್ಲಿ ಸೇರಿಸಬೇಕು ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪರ್ವಿನ್ ವಾಟೆಗ್ನೋಂಕರ್ ಮುಂಬೈ ಹೈಕೋರ್ಟ್ಗೆ ಅರ್ಜಿ ಸಲ್ಲಿದ್ದರು.
ಈ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಈ ಪ್ರಕರಣದಲ್ಲಿ ಶಿಂಧೆ ಅವರ ಪಾತ್ರವಿಲ್ಲ. ಹೀಗಾಗಿ ಪ್ರಕರಣದಲ್ಲಿ ಅವರ ಹೆಸರನ್ನು ನಮೂದಿಸಲು ಯಾವುದೇ ಪೂರಾವೆಗಳು ಇಲ್ಲ. ಇದರಿಂದಾಗಿ ಪ್ರಕರಣದಿಂದ ಕೈ ಬಿಡಲಾಗಿದೆ ಎಂದು ಹೇಳಿ ಕೋರ್ಟ್ಗೆ ವರದಿ ಸಲ್ಲಿಸಿದೆ.
ಆದರ್ಶ ಆಯೋಗದಿಂದ ಮಾಜಿ ಸಚಿವ ಕನ್ನೈಯಲಾಲ್ ಗಿಡ್ವಾಣಿ ಅವರಿಂದ ತೆರವುಗೊಂಡಿದ್ದ ಸ್ಧಾನಕ್ಕೆ ಲೇಟ್ ಮೇಜರ್ ಎನ್. ಡಬ್ಲೂ. ಖಾನ್ಕೋಜಿ ಅವರನ್ನು ನೇಮಕ ಮಾಡಿ ಎಂದು ಶಿಂಧೆ ಸೂಚಿಸಿದ್ದರು ಎಂದು ವಾಟೆಗ್ನೊಂಕರ್ ದೂರಿದ್ದರು.
ಆದರ್ಶ ಸೊಸೈಟಿಯ ಸದಸ್ಯರನ್ನಾಗಿ ಮಾಡವಂತೆ ಸೂಚಿಸಲು ಖಾನ್ಕೋಜಿ ಹಾಗೂ ಶಿಂಧೆ ಅವರ ನಡುವೆ ಕೌಟುಂಬಿಕ ಸಂಬಂಧವಿಲ್ಲ. ಹೀಗಾಗಿ ಗಿಡ್ವಾಣಿ ಸ್ಥಾನಕ್ಕೆ ಖಾನ್ಕೋಜಿ ಅವರನ್ನು ನೇಮಿಸವ ಸಂಬಂಧ ಯಾವುದೇ ಪೂರಾವೆಗಳು ಇಲ್ಲ ಎಂದು ಹಿರಿಯ ಸಿಬಿಐ ಅಧಿಕಾರಿ ಕೆ. ಬಾಬು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


