ಈಗಿನ ಸುದ್ದಿ

ವಿ.ಕೆ. ಸಿಂಗ್ ವಿರುದ್ಧ ತನಿಖೆಗೆ ಸೇನೆ ಒತ್ತಾಯ

Published On :

ನವದೆಹಲಿ: ಗುಪ್ತಚರ ಮಾಹಿತಿ ಘಟಕವನ್ನು ರಚಿಸಿದ್ದ ಆರೋಪ ಎದುರಿಸುತ್ತಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ವಿರುದ್ಧ ಉನ್ನತ್ತ ಮಟ್ಟದ ತನಿಖೆ ನಡೆಸುವಂತೆ ರಕ್ಷಣಾ ಇಲಾಖೆಯನ್ನು ಸೇನೆ ಶುಕ್ರವಾರ ಒತ್ತಾಯಿಸಿದೆ.

ಅತ್ಯಂತ ಗೌಪ್ಯ ಮಾಹಿತಿ ಘಟಕವನ್ನು ರಚಿಸಿದ ಜನರಲ್ ವಿ.ಕೆ. ಸಿಂಗ್ ಅವರು, ಈ ಘಟಕದ ಮೂಲಕ ಸೇನೆಯ ಹಿರಿಯ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ಸೇನೆ ಆರೋಪಿಸಿದೆ. ಅಲ್ಲದೆ ಇದೊಂದು ಅನಧಿಕೃತ ಕಾರ್ಯಾಚರಣೆ ಘಟಕವಾಗಿದ್ದು, ಸಿಂಗ್ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಮಾಡುವಂತೆ ಸೇನೆ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.

ಸೇನೆಯ ಹಿರಿಯ ಅಧಿಕಾರಗಳ ದೂರವಾಣಿ ಕರೆಗಳ ಕದ್ದಾಲಿಕೆ ನಡೆದಿದೆ ಎಂಬುದನ್ನು ಸೇನಾ ತಾಂತ್ರಿಕ ಬೆಂಬಲ ವಿಭಾಗ(ಟಿಎಸ್‌ಡಿ)ದ ಮೂಲಕ ಪತ್ತೆ ಹಚ್ಚಲಾಗಿದೆ. ಹೀಗಾಗಿ ಗೌಪ್ಯ ಮಾಹಿತಿ ಘಟಕದ ವಿರುದ್ಧ ತನಿಖೆ ನಡೆಸಬೇಕು ಎಂದು ರಕ್ಷಣಾ ಇಲಾಖೆಗೆ ನೀಡಿರುವ ವರದಿಯಲ್ಲಿ ಸೇನೆ ತಿಳಿಸಿದೆ.

ಜನರಲ್ ವಿ.ಕೆ. ಸಿಂಗ್, ಮಾಜಿ ಜನರಲ್ ಬಿಕ್ರಂ ಸಿಂಗ್ ಅವರ ನೇತೃತ್ವದಲ್ಲಿ ಈ ಗೌಪ್ಯ ಮಾಹಿತಿ ಘಟಕವನ್ನು ರಚಿಸಲಾಗಿತ್ತು. ಅವರ ಮಾಹಿತಿಯ ಮೇರೆಗೆ ಸೇನಾ ಕಾರ್ಯಾಚರಣೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟೀಯ ಅವರು ವರದಿ ತಯಾರಿಸಿದ್ದಾರೆ ಎನ್ನಲಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.