ಈಗಿನ ಸುದ್ದಿ

ನೈರೋಬಿಯ ಮಾಲ್‌ನಲ್ಲಿ ಉಗ್ರರ ಅಟ್ಟಹಾಸ, 59ಕ್ಕೇರಿದ ಸಾವಿನ ಸಂಖ್ಯೆ

ನೈರೋಬಿಯ ಮಾಲ್‌ನಲ್ಲಿ ಉಗ್ರರ ಅಟ್ಟಹಾಸ, 59ಕ್ಕೇರಿದ ಸಾವಿನ ಸಂಖ್ಯೆ
Published On :

ನೈರೋಬಿ: ಕಳೆದ ರಾತ್ರಿಯಿಂದ ನೈರೋಬಿಯ ವೆಸ್ಟ್‌ಗೇಟ್ ಮಾಲ್‌ನಲ್ಲಿ ಅಡಗಿರುವ ಉಗ್ರರು ದಾಳಿ ನಡೆಸುತ್ತಿದ್ದು, ಇಲ್ಲಿಯವರೆಗೆ ಸುಮಾರು 59 ಮಂದಿ ಮೃತಪಟ್ಟಿರುವುದಾಗಿ ಕೀನ್ಯಾ ವಿದೇಶಾಂಗ ಸಚಿವ ಜೋಸೆಫ್ ಒಲೇ ಭಾನುವಾರ ತಿಳಿಸಿದ್ದಾರೆ.

ಇಂದು ಸಹ ತಮ್ಮ ದಾಳಿಯನ್ನು ಮುಂದುವರೆಸಿರುವ ಉಗ್ರರು ಈವರೆಗೆ 59 ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ಸಚಿವ ಜೋಸೆಫ್ ಅವರು ಧೃಡಪಡಿಸಿದ್ದಾರೆ. ಇದೇ ವೇಳೆ, ಉಗ್ರರ ದಾಳಿಗೆ ಕನಿಷ್ಠ 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ಮಾಲ್ನಲ್ಲಿ ಸುಮಾರು 10ರಿಂದ 15 ಮಂದಿ ಉಗ್ರರು ಮಾಲ್ನನ ವಿವಿಧ ಕಡೆಗಳಲ್ಲಿ ಅಡಗಿ ಕುಳಿತ್ತಿದ್ದು, ಹಲವರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದಾರೆ ಎಂದರು.

ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಕೀನ್ಯಾ ಭದ್ರತಾ ಪಡೆ ಯೋಧರು ಮಾಲ್‌ನಲ್ಲಿ ಅಡಗಿ ಕುಳಿತ್ತಿದ್ದ ಇಬ್ಬರು ಉಗ್ರರರನ್ನು ಕೊಂದಿದ್ದು, ಇನ್ನುಳಿದಿರುವ ಉಗ್ರರು ಧಮನಕ್ಕೆ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಜೋಸೆಫ್ ತಿಳಿಸಿದ್ದಾರೆ.

ಉಗ್ರರ ಹಟ್ಟಹಾಸದ ವಿರುದ್ಧ ಕಿಡಿ ಕಾಡಿರುವ ಕೀನ್ಯಾದ ಅಧ್ಯಕ್ಷ, ಉಗ್ರರು ಎಲ್ಲಿ ಓಡಲು ಯತ್ನಿಸಿದರು, ಅವರನ್ನು ಬಿಡುವುದಿಲ್ಲ. ಅವರನ್ನು ಬೆನ್ನಟ್ಟಿ ಹಿಡಿದು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.ಮಾಲ್‌ನಲ್ಲಿ ಇನ್ನೂ ಉಗ್ರರು ಅವಿತುಕೊಂಡಿದ್ದು, ಅವರ ವಿರುದ್ಧ ಕೀನ್ಯಾದ ಭದ್ರತಾ ಸಿಬ್ಬಂದಿಗಳು ಹೋರಾಟ ನಡೆಸುತ್ತಿದ್ದಾರೆ ಎಂದರು.


ಉಗ್ರರ ಈ ಹಟ್ಟಹಾಸಕ್ಕೆ ಕಡಿವಾಣ ಹಾಕಬೇಕಾಗಿದೆ. ಇಂತಹ ಹೀನಾಯ ಕೃತ್ಯವನ್ನು ಮಾಡಿರುವ ಮಾಲ್‌ನಲ್ಲಿ ಅವಿತಿರುವ ಉಗ್ರರನ್ನು ಹಿಡಿದು ಕಠಿಣ ಶಿಕ್ಷೆ ನೀಡಲಾಗುವುದು. ಇನ್ನೂ ಮುಂದೆ ಉಗ್ರರ ಹಟ್ಟಹಾಸಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಕೀನ್ಯಾ ಅಧ್ಯಕ್ಷರು ಹೇಳಿದ್ದಾರೆ.

ದಾಳಿಯಲ್ಲಿ ಭಾರತೀಯರಾದ ಚೆನ್ನೈ ಮೂಲದ ಶ್ರೀಧರ್ ನಟರಾಜನ್(40) ಮತ್ತು ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಅವರ ಪುತ್ರ ಪರಮಾನ್ಶು ಜೈನ್(8) ಎಂಬವರು ಉಗ್ರರ ಗುಂಡೆಟಿಗೆ ಬಲಿಯಾಗಿದ್ದು, ಮತ್ತೈವರು ಭಾರತೀಯರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಭಾರತೀಯರ ರಕ್ಷಣೆಗಾಗಿ ಭಾರತೀಯ ರಾಯಭಾರಿ ಕಚೇರಿ ಕೀನ್ಯಾ ಸರ್ಕಾರದೊಂದಿಗೆ ನಿರಂತರವಾಗಿ ಸಮರ್ಪಕದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಭಾರತೀಯರಾದ ಮಂಜುಳಾ ಶ್ರೀಧರ್, ಮುಕ್ತಾ ಜೈನ್, ಕುಮಾರ್ ಪೂರ್ವಿ ಜೈನ್, ಶ್ರೀ ನಟರಾಜನ್ ರಾಮಚಂದ್ರನ್ ಅವರುಗಳ ಹೆಸರನ್ನು ಟ್ವೀಟ್ ಮಾಡಿರುವುದಾಗಿ ವಿದೇಶಾಂಗ ಸಚಿವಾಲಯ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರು ತಿಳಿಸಿದ್ದಾರೆ.


ಮುಸ್ಲಿಮೇತರರನ್ನು ಗುರಿಯಾಗಿಟ್ಟುಕೊಂಡೆ ಈ ದಾಳಿ ನಡೆಸಲಾಗಿದೆ. ಬಂದೂಕುಗಳೊಂದಿಗೆ ಮಾಲ್‌ನೊಳಗೆ ಪ್ರವೇಶಿಸಿದ ಉಗ್ರರು ಮುಸ್ಲಿಮರೆಲ್ಲರೂ ಹೊರಹೋಗಿ, ಇತರರು ಇಲ್ಲೇ ಉಳಿಯಿರಿ ಎಂದು ಸೂಚಿಸಿದರು. ಈ ವೇಳೆ ಮುಸ್ಲಿಂರು ಹೌದೋ ಅಲ್ಲವೋ ಎನ್ನುವುದನ್ನು ಪರಿಶೀಲಿಸಿಯೇ ಹೊರಬಿಡುತ್ತಿದ್ದರು ಎಂದು ಉಗ್ರರಿಂದ ಜೀವ ಉಳಿಸಿಕೊಂಡ ಕೆಲವರು ತಿಳಿಸಿದ್ದರು.

ಸೋಮಾಲಿಯಾದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. 2011ರಲ್ಲಿ ಸೋಮಾಲಿಯದಲ್ಲಿ ಕೀನ್ಯಾ ಪಡೆಗಳು ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೆ  ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದು ಎಚ್ಚರಿಕೆ ನೀಡಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.