ಈಗಿನ ಸುದ್ದಿ

ಮೋದಿ ಭಾಷಣವೆಲ್ಲ ಪೊಳ್ಳು: ದಿಗ್ವಿಜಯ್ ಟೀಕೆ

Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಷಣವೆಲ್ಲ ಪೊಳ್ಳು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಭಾನುವಾರ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಷಣದ ಮಾಡಿದ ಬೆನ್ನಲ್ಲೇ ಇತ್ತ ದಿಗ್ವಿಜಯ್ ಸಿಂಗ್ ಮೋದಿ ಭಾಷಣವೆಲ್ಲ ಪೊಳ್ಳು ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಕೆಲಸಕ್ಕೆ ಬಾರದಂತ ಮಾತಗಳನ್ನು ಆಡುವುದರಲ್ಲಿ ನಿಸ್ಸೀಮರು. ಬಳಕೆಯಿಲ್ಲದ ಭಾಷಣ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂತಹ ಭಾಷಣಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಎನ್‌ಡಿಎ ಅಧಿಕಾರದಲ್ಲಿದ್ದಾಗ ಶೇ.8.4ರಷ್ಟು ದೇಶದ ಅಭಿವೃದ್ಧಿ ಆಗಿತ್ತು. ಆದರೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ. 4.8ಕ್ಕೆ ಕುಸಿದಿದೆ ಎಂದು ಮೋದಿ ಆರೋಪಿಸಿದ್ದರು. ಮೋದಿ ಆರೋಪವನ್ನು ತಳ್ಳಿ ಹಾಕಿರುವ ದಿಗ್ವಿಜಯ್ ಸಿಂಗ್, ಇಂತಹ ಪೊಳ್ಳು ಮಾತುಗಳಿಂದ ಅಧಿಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಮೋದಿ ಕುರುಡತನ ತೋರಿಸುತ್ತಿದ್ದಾರೆ. ಒಮ್ಮೆ ಯುಪಿಎ ವೆಬ್‌ಸೈಟ್ ತೆರೆದು ನೋಡಬೇಕು, ಆಗ ತಿಳಿಯುತ್ತದೆ ಯಾರು ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆಂದು. ಯುಪಿಎ ಸರ್ಕಾರ ಜನರಿಗೆ ಕೊಟ್ಟಂತಹ ಭಾಷೆಯನ್ನು ಉಳಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಜನರಿಗೆ ಮಾಹಿತಿ, ಶಿಕ್ಷಣದ ಹಕ್ಕು ಹಾಗೂ ಬುಡಕಟ್ಟು ಮಹಿಳೆಯರಿಗೆ ಆಹಾರ ಭದ್ರತೆ ಮತ್ತು ಕೆಲಸಗಳನ್ನು ಕಲ್ಪಿಸಿ, ತಮ್ಮ ಹಕ್ಕುಗಳನ್ನು ನೀಡಲಾಗಿದೆ ಎಂದರು.

ಮೋದಿ ಅವರು ಕೇವಲ ತಾವು ಮಾತ್ರ ಎಲ್ಲಾ ಹಕ್ಕುಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಹೊರತು, ಹಿಂದುಳಿದಿರುವ ಜನರ ಬಗ್ಗೆ ಚಿಂತಿಸುತ್ತಿಲ್ಲ. ಅಧಿಕಾರದ ಅಮಲಿನಲ್ಲಿರುವ ಮೋದಿ ದೇಶದ ಜನತೆಯನ್ನು ಕಾಪಾಡುವುದು ಕಷ್ಟ ಎಂದು ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.