ಬೆಂಗಳೂರಲ್ಲಿ ನಮೋ ದರ್ಶನಕ್ಕೆ 10 ರು. ಶುಲ್ಕ
ಬೆಂಗಳೂರು: ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಬಿಜೆಪಿ ಸರಿಯಾಗಿ ಬಳಸಿಕೊಳ್ಳಲು ಸಜ್ಜಾದಂತಿದೆ. ಇನ್ನೇನು ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ದೇಶಾದ್ಯಂತ ನಡೆಸುವ ರ್ಯಾಲಿಗಳಲ್ಲಿ ಭಾಗವಹಿಸುವ ಜನರಿಂದ ಶುಲ್ಕ ಸ್ವೀಕರಿಸಲು ಬಿಜೆಪಿ ನಿರ್ಧರಿಸಿರುವುದೇ ಇದಕ್ಕೆ ನಿದರ್ಶನ.
ಮುಂದಿನ ತಿಂಗಳು ಬೆಂಗಳೂರಿನಲ್ಲಿ ಮೋದಿ ರ್ಯಾಲಿ ನಡೆಯಲಿದ್ದು, ಅದರಲ್ಲಿ ಭಾಗವಹಿಸಲಿಚ್ಛಿಸುವವರು ರು. 10 ಶುಲ್ಕ ತೆರಬೇಕಾಗಿದೆ. ಜನರಿಂದ ಶುಲ್ಕ ವಸೂಲಿ ಮಾಡುತ್ತಿರುವುದರ ಬಗ್ಗೆ ಕರ್ನಾಟಕದ ಬಿಜೆಪಿ ರಾಜ್ಯ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನಾ ಹೇಳುವುದು ಹೀಗೆ: ಇದು ನರೇಂದ್ರ ಮೋದಿಯವರ ದರ್ಶನಕ್ಕಾಗಿರುವ ಶುಲ್ಕ ಅಲ್ಲ, ಇದು ಸಹಾಯಧನ ಅಷ್ಟೇ. ಇದು ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿನ ಹೊಸ ಬದಲಾವಣೆ.
ಅದೇ ವೇಳೆ ಮುಂದಿನ ವಾರ ಭೋಪಾಲದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಲು ಜನರು ರು. 5 ಶುಲ್ಕ ತೆರಬೇಕಾಗಿದೆ. ಆದರೆ ಇಲ್ಲಿ ಪಕ್ಷದ ಕಾರ್ಯಕರ್ತರು ಮಾತ್ರ ಈ ಶುಲ್ಕ ಪಾವತಿಸಿದರೆ ಸಾಕು.
ಜುಲೈ ತಿಂಗಳಲ್ಲಿ ನರೇಂದ್ರ ಮೋದಿ ಹೈದ್ರಾಬಾದ್ನಲ್ಲಿ ನಡೆಸಿದ ರ್ಯಾಲಿಗೆ ರು. 5 ಶುಲ್ಕ ವಿಧಿಸಲಾಗಿತ್ತು. ನಮೋ ರ್ಯಾಲಿಗೆ ಶುಲ್ಕ ವಿಧಿಸುವುದನ್ನು ಬಿಜೆಪಿ ರಾಜಕೀಯದಲ್ಲಿನ ಬದಲಾವಣೆ ಎಂದು ಬಿಂಬಿಸಿದರೆ, ಕಾಂಗ್ರೆಸ್ ಇದು ನರೇಂದ್ರ ಮೋದಿ ಅವರ ಮಾರುಕಟ್ಟೆ ಬೆಲೆ ಎಂದು ಟೀಕಿಸಿತ್ತು.
ಮೋದಿ ರ್ಯಾಲಿಯಲ್ಲಿ ಹೀಗೆ ಸಂಗ್ರಹಿಸಿದ ಹಣವನ್ನು ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ನೀಡಲಾಗುವುದು ಎಂದು ಬಿಜೆಪಿ ಹೇಳಿದೆ.
ಆದಾಗ್ಯೂ, ಹೈದ್ರಾಬಾದ್ನಲ್ಲಿ ಸಂಗ್ರಹಿಸಿದ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿದ್ದರೆ, ಬೆಂಗಳೂರಿನಲ್ಲಿ ಸಂಗ್ರಹವಾದ ಹಣವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸುವ ಯಾವುದಾದರೂ ಸಂಘ ಸಂಸ್ಥೆಗಳಿಗೆ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಮಾಜಿ ರಾಜ್ಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

