ಈಗಿನ ಸುದ್ದಿ

ಮುಜಾಫರ್‌ನಗರ ಗಲಭೆ: ಬಿಎಸ್‌ಪಿ ಶಾಸಕನಿಗೆ ಜಾಮೀನು

Published On :

ಲಖನೌ: ಮುಜಾಫರ್‌ನಗರ ಕೋಮುಗಲಭೆಗೆಪ್ರಚೋದನೆ ನೀಡಿದ ಆರೋಪದ ಮೇಲೆ ಜೈಲುಸೇರಿದ್ದ ಬಿಎಸ್‌ಪಿ ಶಾಸಕ ನೂರ್ ಸಲೀಂರಾಣಾ ಅವರಿಗೆಸ್ಥಳೀಯ ನ್ಯಾಯಾಲಯಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಕೋಮುಗಲಭೆ ಸಂದರ್ಭದಲ್ಲಿ ಪ್ರಚೋದನಕಾರಿಭಾಷಣ ಮಾಡಿದಆರೋಪದ ಮೇಲೆಬಂಧನಕ್ಕೊಳಗಾಗಿದ್ದ ರಾಣಾ ಸಲ್ಲಿಸಿದ್ದಮಧ್ಯಂತರ ಜಾಮೀನು ಅರ್ಜಿಯನ್ನು ಕಳೆದ ಶನಿವಾರತಿರಸ್ಕರಿಸಿದ್ದ ಕೋರ್ಟ್, ಅವರಿಗೆ 14 ದಿನಗಳನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಪ್ರಕರಣ ಸಂಬಂಧ ಜಾಮೀನುಕೋರಿ ರಾಣಾಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ಇಂದು ಜಾಮೀನುನೀಡಿದೆ.

ಗಲಭೆ ಪೀಡಿತ ಪ್ರದೇಶದಲ್ಲಿಸಭೆ ಸಮಾರಂಭಗಳುಮಾಡಬಾರದು ಎಂಬ ನಿಷೇಧಾಜ್ಞೆ ಜಾರಿಯಲ್ಲಿದ್ದರು. ಅದನ್ನು ಉಲ್ಲಂಘಿಸಿ ಪ್ರಚೋದನಕಾರಿ ಭಾಷಣಮಾಡಿದ ಆರೋಪದಮೇಲೆ ಸ್ಥಳೀಯನ್ಯಾಯಾಲಯ ಶಾಸಕ ನೂರ್ ಸಲೀಂ ರಾಣಾಸೇರಿದಂತೆ 16 ಮಂದಿ ರಾಜಕಾರಣಿಗಳ ವಿರುದ್ಧವಾರೆಂಟ್ ಜಾರಿ ಮಾಡಿತ್ತು

ನ್ಯಾಯಾಲಯದ ಆದೇಶದ ಮೇರೆಗೆಪೊಲೀಸರು ನೂರ್ ಸಲೀಂ ರಾಣಾ ಸೇರಿದಂತೆಶಾಸಕ ಖಾದೀರ್ರಾಣಾ ಮತ್ತುಜಮೀಲ್ ಅಹಮದ್ಅವರನ್ನು ಬಂಧಿಸಿ ಮಿರ್ಜಾಪುರ್ ಕಾರಾಗೃಹದಲ್ಲಿ ಇಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.