ಈಗಿನ ಸುದ್ದಿ

ಬಿಸಿಸಿಐಯಿಂದ ಲಲಿತ್ ಮೋದಿ ಉಚ್ಛಾಟನೆ?

ಬಿಸಿಸಿಐಯಿಂದ ಲಲಿತ್ ಮೋದಿ ಉಚ್ಛಾಟನೆ?
Published On :

ನವದೆಹಲಿ: ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ಭಾರತೀಯ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಯಾವುದೇ ಹುದ್ದೆಗಳನ್ನು ವಹಿಸದಂತೆ ಆಜೀವ ನಿಷೇಧ ಹೇರಲಾಗಿದೆ.

ಏತನ್ಮಧ್ಯೆ, ಬಿಸಿಸಿಐ ಮೋದಿ ಅವರನ್ನು ಬುಧವಾರ ಉಚ್ಛಾಟಿಸಿದೆ ಎಂಬ ಸುದ್ದಿ ಲಭಿಸಿದೆ.

ಐಪಿಎಲ್‌ನಲ್ಲಿ ಚೇರ್‌ಮೆನ್ ಆಗಿದ್ದ ಮೋದಿ, ಐಪಿಎಲ್ ಮೂರನೇ ಆವೃತ್ತಿಯ ಮುನ್ನ ಐಪಿಎಲ್ ಟೀಂ ಹರಾಜು ಪ್ರಕ್ರಿಯೆಗಳಲ್ಲಿ ಅವ್ಯವಹಾರ ನಡೆಸಿದ್ದರು.

ಈ ಆರೋಪದ ತನಿಖೆ ನಡೆಸಿದ ಮೂವರು ಸದಸ್ಯರ ತಂಡವು ಬಿಸಿಸಿಐಗೆ 133 ಪುಟಗಳ ವರದಿಯನ್ನು ಸಲ್ಲಿಸಿದ್ದು, ಮೋದಿ ತಪ್ಪಿತಸ್ಥ ಎಂದು ಸಾಬೀತಾಗಿತ್ತು. ಮೋದಿ ತಪ್ಪಿತಸ್ಥ ಎಂದು ಸಾಬೀತಾದ ಕೂಡಲೇ ಅವರನ್ನು ಚೇರ್‌ಮೆನ್ ಹುದ್ದೆಯಿಂದ ವಜಾಗೈಯ್ಯಲಾಗಿತ್ತು.

ಮೋದಿ ಅವರನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸಿಂಧಿಯಾ, ಜೇಟ್ಲಿ ಸೇರಿದಂತೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಶಿಸ್ತು ಸಮಿತಿಯ ಸದಸ್ಯರನ್ನಾಗಿ ಮಾಡಲಾಯಿತು. ಆ ವೇಳೆ ಶ್ರೀನಿವಾಸನ್ ಸಮಿತಿಯಿಂದ ಹೊರಬಂದ ಕಾರಣ, ಐಪಿಎಲ್‌ನ ಮಾಜಿ ಚೇರ್‌ಮೆನ್ ಆಗಿದ್ದ ಚಿರಾಯು ಆಮೀನ್‌ರನ್ನು ಸಮಿತಿಗೆ ಸೇರಿಸಿಕೊಳ್ಳಲಾಯಿತು.

ಅಮೀನ್ ಕೂಡಾ ಸಮಿತಿಯಿಂದ ಹೊರ ನಡೆದ ಕಾರಣ ಕೊನೆಗೆ ಇಬ್ಬರು ಸದಸ್ಯರ ಶಿಸ್ತು ಸಮಿತಿಯನ್ನು ರೂಪಿಸಲಾಯಿತು.

ಆದಾಗ್ಯೂ, ಈ ಹಿಂದೆ ಬಿಸಿಸಿಐ ಸಭೆಯಲ್ಲಿ ಭಾಗವಹಿಸಲು ಅನುಮತಿ ಕೋರಿ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.