ಈಗಿನ ಸುದ್ದಿ

ಭಾರತ ಮತ್ತೊಮ್ಮೆ ವಿಶ್ವ ಗುರು ಆಗಲಿದೆ: ಮೋದಿ

Published On :

ತಿರುವಂನಂತಪುರಂ/ಕೊಲ್ಲಂ: ಭಾರತ ಮತ್ತೊಮ್ಮೆ ವಿಶ್ವ ಗುರು ಆಗಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಇಂದು ಕೇರಳದಲ್ಲಿ ಮಾತ ಅಮೃತಾನಂದಮಯಿ ದೇವಿ ಅವರ 60 ಜನ್ಮದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಭಾರತ ಆದಷ್ಟು ಬೇಗ ವಿಶ್ವ ಗುರು ಆಗಲಿದೆ ಎಂದು ತಿಳಿಸಿದ್ದಾರೆ.

ದೇಶದ ಸದ್ಯದ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಆದರೆ ಇನ್ನೂ ಕೆಲವೇ ದಿನಗಳಲ್ಲಿ ದೇಶ ಮತ್ತೊಮ್ಮೆ ವಿಶ್ವ ಗುರು ಆಗಲಿದ್ದು, ದೇಶ ಏಳಿಗೆ ಕಾಣಲಿದೆ ಎಂದು ಅವರು ಹೇಳಿದ್ದಾರೆ.

ಸಾಧುಗಳ ಮಾಡಿದಂತ ಕೆಲಸಗಳ ಬಗ್ಗೆ ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ತಪ್ಪಾದ ಅಭಿಪ್ರಾಯ ಮೂಡಿಸುತ್ತಿದ್ದಾರೆ. ಇದಲ್ಲದೇ ಇನ್ನೂ ಕೆಲವರು ಸಾಧಗಳ ಹೆಸರಲ್ಲಿ ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ. ಇದರಿಂದ ಮಾತ್ರ ದೇಶದ ಪರಿಸ್ಥಿತಿ ಹದಗೆಟ್ಟಿದೆ. ಆದರೆ ಇನ್ನೂ ಕೆಲವೇ ದಿನಗಳಲ್ಲಿ ಇದರಿಂದ ಮುಕ್ತಿ ಕಾಣಲಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾತಾ ಅಮೃತಾನಂದಮಯಿ ದೇವಿ ಅವರು ಸಮಾಜಕ್ಕೆ ಬೇಕಾದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ಸರ್ಕಾರ ಮಾಡಬೇಕಾಂದಂತಹ ಅನೇಕ ಕೆಲಸಗಳನ್ನು ಮಾತಾ ಅವರು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಮೋದಿ ಶ್ಲಾಘಿಸಿದ್ದಾರೆ.

ನಮ್ಮ ಋುಷಿಗಳು ಎಲ್ಲರ ಸಂತೋಷದ ಬಗ್ಗೆ ಮಾತಾಡಿದ್ದರು, ಆದರೆ ಮಾತಾ ಅವರು ಸಂತೋಷವನ್ನು ಗಳಿಸುವುದರ ದಾರಿ ತೋರುತ್ತಿದ್ದಾರೆ ಎಂದ ಮೋದಿ, ಅಮೃತಾನಂದಮಯಿ ಮಠ ನಡೆಸುತ್ತಿರುವ ಸಂಶೋಧನಾ ಸಂಸ್ಥೆ ವತಿಯಿಂದ ಪ್ರದರ್ಶಿಸಿದ ನೂತನ ಕಲ್ಪನೆಯ ವಿಜ್ಞಾನದ ವಸ್ತುಗಳು ಭವ್ಯ ಭಾರತದ ಶಿಲನ್ಯಾಸ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.