ಆಸೀಸ್ ಸರಣಿಗೆ ಇಂಡಿಯಾ ತಂಡ ಪ್ರಕಟ: ಯುವಿ ಕಮ್ಬ್ಯಾಕ್

ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು, 15 ಸದಸ್ಯರ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಸ್ಥಾನ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ದೇಶೀಯ ಕ್ರಿಕೆಟ್ನಲ್ಲಿ ಯುವರಾಜ್ ಗಮನ ಸೆಳೆಯುವ ಪ್ರದರ್ಶನ್ ನೀಡಿದ್ದರು. ಅಲ್ಲದೆ ಜಹೀರ್ ಖಾನ್ ಜೊತೆ ಫ್ರಾನ್ಸ್ನಲ್ಲಿ ನಡೆಸಿದ ಕಠಿಣ ಅಭ್ಯಾಸದ ಫಲವಾಗಿ ಯುವಿ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 10ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಗೊಳ್ಳಲಿದೆ.
ಇಂದು ಚೆನ್ನೈನಲ್ಲಿ ನಡೆದ ಬಿಸಿಸಿಐ ಆಯ್ಕೆ ಮಂಡಳಿ ಸಭೆಯಲ್ಲಿ, ಯುವರಾಜ್ ಸಿಂಗ್ ಹಾಗೂ ಕರ್ನಾಟಕದ ವೇಗದ ಬೌಲರ್ ಆರ್.ವಿನಯ್ ಕುಮಾರ್ ಸೇರಿದಂತೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು.
ಆಸೀಸ್ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ
ಎಂ.ಎಸ್.ಧೋನಿ (ನಾಯಕ)
ರೋಹಿತ್ ಶರ್ಮಾ
ಶಿಖರ್ ಧವನ್
ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್
ಸುರೇಶ್ ರೈನಾ
ರವೀಂದ್ರ ಜಡೆಜಾ
ಆರ್.ಅಶ್ವಿನ್
ಬಿ.ಕುಮಾರ್
ಇಶಾಂತ್ ಶರ್ಮಾ
ವಿನಯ್ ಕುಮಾರ್
ಅಮಿತ್ ಮಿಶ್ರಾ
ಅಂಬತಿ ರಾಯುಡು
ಮೊಹಮ್ಮದ್ ಶಮಿ
ಜಯದೇವ್ ಉನದ್ಕತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


