ಲೋಕಸಮರ: ಮ್ಯಾಜಿಕ್ ನಂಬರ್ 272ರ ಸಮೀಪಕ್ಕೆ ಎನ್ಡಿಎ

ನವದೆಹಲಿ: ಎರಡು ಸುದ್ದಿವಾಹಿನಿಗಳು ನಡೆಸಿದ ಪ್ರತ್ಯೇಕ ಸಮೀಕ್ಷೆಯಿಂದ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಬಹುತೇಕ ಖಚಿತವಾಗಿದೆ.
ಒಂದು ಸುದ್ದಿ ವಾಹಿನಿಯ ಸಮೀಕ್ಷೆಯ ಪ್ರಕಾರ, ಬಿಜೆಪಿ ಮತ್ತು ಮಿತ್ರ ಪಕ್ಷಗಳು ಒಟ್ಟಾರೆ 259 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಮ್ಯಾಜಿಕ್ ನಂಬರ್ 272ಕ್ಕೆ ಕೇವಲು 13 ಸ್ಥಾನಗಳ ಕೊರತೆ ಎದುರಿಸಲಿದೆ. ಮತ್ತೊಂದು ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್ಡಿಎ 234ರಿಂದ 246 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
ಈ ಎರಡೂ ಸಮೀಕ್ಷೆಗಳಲ್ಲಿ ಬಹಳ ವ್ಯತ್ಯಾಸವೇನು ಇಲ್ಲ. ಮೊದಲನೆದು ಹಂಸ ಸಂಶೋಧನಾ ಸಂಸ್ಥೆ ಎನ್ಡಿಟಿವಿಗಾಗಿ ಸಮೀಕ್ಷೆ ನಡೆಸಿದ್ದು, ಎನ್ಡಿಎದೊಂದಿಗೆ ಟಿಡಿಪಿಯೂ ಸೇರಿದೆ. ಇನ್ನು ಎರಡನೇ ಸಮೀಕ್ಷೆ ಸಿಎಸ್ಡಿಎಸ್-ಲೋಕ್ನಿತಿ ಸಿಎನ್ಎನ್, ಐಬಿಎನ್ಗಾಗಿ ನಡೆಸಿದ್ದು, ಟಿಡಿಪಿ 13ರಿಂದ 19 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ಎನ್ಡಿಟಿವಿ ಸಮೀಕ್ಷೆ ಪ್ರಕಾರ, ಬಿಜೆಪಿ ಸ್ವತಂತ್ರವಾಗಿ 214 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಸಿಎನ್ಎನ್ಐಬಿಎನ್ ಪ್ರಕಾರ 206ರಿಂದ 218 ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳಲಿದೆ. ಒಂದು ವೇಳೆ ಈ ಎರಡೂ ಸಮೀಕ್ಷೆಗಳು ನಿಜವಾದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಈ ದೇಶದ ಮುಂದಿನ ಪ್ರಧಾನಿಯಾಗುವುದು ಬಹುತೇಕ ಖಚಿತ.
ಎನ್ಡಿಟಿವಿ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಪಿಎ 123 ಸ್ಥಾನಗಳಲ್ಲಿ ಮತ್ತು ಸಿಎನ್ಎನ್-ಐಬಿಎನ್ ಪ್ರಕಾರ, 111ರಿಂದ 123 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ 104 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮೊದಲನೇ ಸಮೀಕ್ಷೆ ಹೇಳಿದರೆ, 94ರಿಂದ 106ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಎರಡನೇ ಸಮೀಕ್ಷೆ ಹೇಳಿದೆ.
ಎನ್ಡಿಟಿವಿ ಸಮೀಕ್ಷೆ: ರಾಜ್ಯದಲ್ಲಿ ಬಿಜೆಪಿ ಮುನ್ನಡೆ
ಎನ್ಡಿಟಿವಿ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದ್ದು, ಮೋದಿ ಅಲೆಯಲ್ಲಿ ತೆಲುತ್ತಿರುವ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
ರಾಜ್ಯದಲ್ಲಿ 28 ಸ್ಥಾನಗಳ ಪೈಕಿ ಬಿಜೆಪಿ 16 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
ರಾಜ್ಯಗಳು ಸ್ಥಾನ ಎನ್ಡಿಎ ಯುಪಿಎ ಇತರೆ
ಬಿಹಾರ 40 21 11 8
ಅಸ್ಸಾಂ 14 3 11 0
ಛತ್ತೀಸಗಢ 11 8 3 0
ದೆಹಲಿ 7 4 1 2
ಗುಜರಾತ್ 26 22 4 0
ಹರಿಯಾಣ 10 5 3 2
ಜಾರ್ಖಂಡ್ 14 10 4 0
ಕರ್ನಾಟಕ 28 16 10 2
ಕೇರಳ 20 0 9 11
ಮ.ಪ್ರದೇಶ 29 25 4 0
ಮಹಾರಾಷ್ಟ್ರ 48 36 10 2
ಒಡಿಸ್ಸಾ 21 0 3 18
ಪಂಜಾಬ್ 13 6 7 0
ರಾಜಸ್ಥಾನ 25 14 1 10
ಸೀಮಾಂಧ್ರ 25 14 1 10
ತಮಿಳುನಾಡು 39 3 0 36
ತೆಲಂಗಾಣ 17 2 7 8
ಉ.ಪ್ರದೇಶ 80 53 7 20
ಪ.ಬಂಗಾಳ 42 0 5 37
ಸಣ್ಣ ರಾಜ್ಯಗಳು 34 10 20 4
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


