ಈಗಿನ ಸುದ್ದಿ

ಐಟಿ ಕ್ರಾಂತಿ ಮಾಡಿದ್ದು, ಕಾಂಗ್ರೆಸ್ ಅಲ್ಲ ಬಿಜೆಪಿ: ಮೋದಿ

ಐಟಿ  ಕ್ರಾಂತಿ ಮಾಡಿದ್ದು, ಕಾಂಗ್ರೆಸ್ ಅಲ್ಲ ಬಿಜೆಪಿ: ಮೋದಿ
Published On :

ಬೆಂಗಳೂರು: ರಾಜ್ಯದಲ್ಲಿ ಐಟಿ ಕ್ರಾಂತಿ  ಮಾಡಿದ್ದು ಕಾಂಗ್ರೆಸ್ ಅಲ್ಲ ಅದು ಬಿಜೆಪಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ

ಬೊಮ್ಮನಹಳ್ಳಿಯ ಆಲಂ ಪಾಷಾ ಮೈದಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಐಟಿ ಕ್ರಾಂತಿ  ಮಾಡಿದ್ದು, ಕಾಂಗ್ರೆಸ್ ಸರ್ಕಾರ ಎಂದು ಹೇಳುತ್ತಿದ್ದಾರೆ ಆ ಹೇಳಿಕೆಯಲ್ಲಿ ತಿರುಳಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐಟಿ ಅಭಿವೃದ್ಧಿ ಮಾಡಲಾಯಿತು ಎಂದರು.

ಆಧಾರ್ ಕಾರ್ಡ್ ಯೋಜನೆಯಿಂದ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹಣ ನಷ್ಟವಾಗಿದೆ. ದೇಶದ ಸುರಕ್ಷತೆಗಾಗಿ ಆಧಾರ್ ಕಾರ್ಡ್ ಎನ್ನುತ್ತಾರೆ. ಆದರೆ ಆ ಬಗ್ಗೆ ಪ್ರಶ್ನಿಸಿದರೆ ಯೋಜನೆಯನ್ನು ಮಾಡಿದವರೆ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಪರೋಕ್ಷವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ನಾನು ಕೇಳಿದ ಪ್ರಶ್ನೆಯನ್ನೇ ಇದೀಗ ಸುಪ್ರೀಂಕೋರ್ಟ್ ಕೇಳುತ್ತಿದೆ ಎಂದರು.

ಕಳೆದ 60 ವರ್ಷಗಳಲ್ಲಿ ದೇಶ ಈ ದುಸ್ಥಿತಿ ಕಂಡಿರಲಿಲ್ಲ. ದೇಶ ಅಧೋಗತಿ
ಯ ಪಥದಲ್ಲಿ ಸಾಗುತ್ತಿದೆ. ಈ ಅಧಃ ಪತನದಿಂದ ದೇಶವನ್ನು ಹೊರಗೆ ತರುವ ಅವಕಾಶ ಬಂದಿದೆ. ಈ ಬಾರಿ ದೇಶದ ಜನತೆ ಉತ್ತಮರನ್ನೇ ಆಯ್ಕೆ ಮಾಡುತ್ತಾರೆ. ಭಾರತಕ್ಕೆ ಜನ ನಾಯಕ ಬೇಕಿಲ್ಲ, ಜನ ಸೇವಕ ಬೇಕಾಗಿದ್ದಾನೆ ಎಂದು ಮೋದಿ ಹೇಳಿದರು.

ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯುವಜನರ ಸಂಖ್ಯೆ ಇದ್ದು, ಅವರಿಗೆ ಸೂಕ್ತ ಉದ್ಯೋಗವಕಾಶ ಕಲ್ಪಿಸಿಕೊಡಬೇಕಿದೆ. ಯುಪಿಎ ಸರ್ಕಾರ ಅಧಿಕಾರವಧಿಯಲ್ಲಿ ಯುವಜನತೆಯ ಕನಸುಗಳೆಲ್ಲ ನೂಚ್ಚುನೂರಾಗಿದ್ದು, ಯುವಕರ ಕನಸು ನನಸು ಮಾಡುವುದೆ ನನ್ನ ಗುರಿ ಎಂದು ಮೋದಿ ಯುವಜನತೆಗೆ ಭರವಸೆ ನೀಡಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ನಾಯಕರಾದ ಸಂಸದ ಅನಂತ್‌ಕುಮಾರ್, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಡಿಸಿಎಂ ಆರ್. ಅಶೋಕ್ ಸೇರಿದಂತೆ ಮತ್ತಿತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.