3ನೇ ಹಂತ: 11 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿ ಕೊನೆಗೊಂಡ ಮತದಾನ

ನವದೆಹಲಿ: ದೇಶದ 11 ರಾಜ್ಯ ಮತ್ತು 3 ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೆಲವು ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ.
ಮೂರನೇ ಹಂತದಲ್ಲಿ ಒಟ್ಟು 91 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. 11 ರಾಜ್ಯಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದ್ದು, 2009ರ ಲೋಕಸಭೆ ಚುನಾವಣೆಗಿಂತ ಶೇ. 2ರಷ್ಟು ಮತದಾನ ಹೆಚ್ಚಳವಾಗಿದೆ.
ರಾಜ್ಯಗಳ ಶೇಕಡವಾರು ಮತದಾನ ಇಂತಿದೆ:
ನವದೆಹಲಿಯಲ್ಲಿ 7 ಲೋಕಸಭಾ ಕ್ಷೇತ್ರಗಳ ಪೈಕಿ ಶೇ. 64ರಷ್ಟು ಮತದಾನ.
ಮಹಾರಾಷ್ಟ್ರದ 10 ಲೋಕಸಭಾ ಕ್ಷೇತ್ರಗಳ ಪೈಕಿ ಶೇ. 56ರಷ್ಟು ಮತದಾನ
ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 53ರಷ್ಟು ಮತದಾನ
ಉತ್ತರಪ್ರದೇಶದ 10 ಲೋಕಸಭಾ ಕ್ಷೇತ್ರಗಲ್ಲಿ ಶೇ. 60ರಷ್ಟು ಮತದಾನ
ಬಿಹಾರದ 6 ಕ್ಷೇತ್ರಗಳ ಪೈಕಿ ಶೇ. 54ರಷ್ಟು ಮತದಾನ
ಹರಿಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 73ರಷ್ಟು ಮತದಾನ
ಛತ್ತೀಸ್ಗಢದ ಬಸ್ತಾರ್ನಲ್ಲಿ ಶೇ. 47ರಷ್ಟು ಮತದಾನವಾಗಿದೆ.
ಮಧ್ಯಪ್ರದೇಶದ 9 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 55.98 ರಷ್ಟು ಮತದಾನ
ಒಡಿಶಾದಲ್ಲಿ ನಕ್ಸಲ್ ದಾಳಿ: ಮತಯಂತ್ರಗಳಿಗೆ ಬೆಂಕಿ
ಚುನಾವಣೆ ವೇಳೆ ಒಡಿಶಾದಲ್ಲಿ ಮಾವೋ ನಕ್ಸಲರು ದಾಳಿ ನಡೆಸಿದ್ದು, ಮತಯಂತ್ರಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.
ಚುನಾವಣೆ ಮುಕ್ತಾಯಗೊಂಡ ಬಳಿಕ ಚುನಾವಣಾಧಿಕಾರಿಗಳು ಮತಯಂತ್ರಗಳನ್ನು ಕೊಂಡೊಯ್ಯುತ್ತಿದ್ದಾಗ ಒಡಿಶಾದ ಮಡ್ಕರ್, ಕೊಟಿಯಾ ಹಾಗೂ ಕುಂಡಲಿಯಲ್ಲಿ ನಕ್ಸಲರು ದಾಳಿ ನಡೆಸಿ ಮತಯಂತ್ರಗಳನ್ನು ಕಸಿದುಕೊಂಡು ಬೆಂಕಿ ಹಚ್ಚಿದ್ದಾರೆ.
ಹಕ್ಕು ಚಲಾಯಿಸಿದ ನಾಯಕರು
ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಹರ್ಷವರ್ದನ್, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ತಿರುವನಂತಪುರದಲ್ಲಿ ಶಶಿ ತರೂರ್ ಹಾಗೂ ಚಂಡೀಗಡದಲ್ಲಿ ಪವನ್ ಕುಮಾರ್ ಬನ್ಸಾಲ್ ತಮ್ಮ ಮತ ಚಲಾಯಿಸಿದರು.
ನಕ್ಸಲ್ ಬೆದರಿಕೆ, ಮತದಾನ ಸ್ಥಗಿತ
ನಕ್ಸಲರ ಬೆದರಿಕೆ ಹಿನ್ನೆಲೆಯಲ್ಲಿ ಬಿಹಾರದ ಜಮೂಹಿ ಲೋಕಸಭಾ ಕ್ಷೇತ್ರದ 12 ಮತಕೇಂದ್ರಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.
ಒಡಿಶಾದಲ್ಲಿ ಲೋಕಸಭೆ ಜತೆಗೆ ಅಲ್ಲಿನ ವಿಧಾನಸಭೆಗೆ ಕೂಡ ಚುನಾವಣೆ ನಡೆಯುತ್ತಿದೆ. ಒಡಿಶಾದಲ್ಲಿನ 10 ಲೋಕಸಭೆ ಮತ್ತು 70 ವಿಧಾನಸಭೆ ಕ್ಷೇತ್ರಗಳಿಗೆ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕೇರಳದ 20, ಉತ್ತರಪ್ರದೇಶದ10, ಹರ್ಯಾಣದ 10, ಮಧ್ಯಪ್ರದೇಶದ 9, ದೆಹಲಿಯ 7, ಬಿಹಾರದ 6, ಜಾರ್ಖಂಡ್ನ 4, ಚಂಡೀಗಡದ1, ಛತ್ತೀಸ್ಗಡದ 1, ಜಮ್ಮು-ಕಾಶ್ಮೀರದ 1, ಅಂಡಮಾನ್ ಮತ್ತು ನಿಕೋಬಾರ್ನ 1, ಲಕ್ಷದ್ವೀಪದ1, ಮಹಾರಾಷ್ಟ್ರದ 10 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


