ಸಿಎಂ ಸ್ಥಾನಕ್ಕೆ ದಿಢೀರ್ ರಾಜಿನಾಮೆ ತಪ್ಪು ನಿರ್ಧಾರ: ಕೇಜ್ರಿವಾಲ್

ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಕೇವಲ 49 ದಿನಗಳಿಗೆ ರಾಜಿನಾಮೆ ನೀಡಿದ್ದು ತಪ್ಪೆಂದು ಆಮ್ ಆದ್ಮಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೊನೆಗೂ ಒಪ್ಪಿಕೊಂಡಿದ್ದಾರೆ.
ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ದುಡುಕಿ ರಾಜಿನಾಮೆ ನೀಡಿದ್ದು ತಪ್ಪೆಂದು ನನಗೆ ಈಗ ಮನವರಿಕೆಯಾಗಿದ್ದು, ಮುಂದೆ ಈ ರೀತಿ ಆಗದಂತೆ ಜಾಗ್ರತೆ ವಹಿಸಲಾಗುವುದು ಎಂದರು.
ಕೆಲ ತತ್ವ ಸಿದ್ದಾಂತಕ್ಕೆ ಬದ್ದನಾಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ, ಇದನ್ನು ದೆಹಲಿಯ ಜನತೆ ಸ್ವಾಗತಿಸುತ್ತಾರೆ ಎಂದು ನಾನು ತಪ್ಪಾಗಿ ಭಾವಿಸಿದ್ದೆ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಇನ್ನೂ ಸ್ವಲ್ಪ ಕಾಲಾವಧಿಯನ್ನು ನಾವು ತೆಗೆದುಕೊಳ್ಳಬಹುದಿತ್ತು. ಇದು ಜನರ ಜತೆಗಿನ ಆಮ್ ಆದ್ಮಿ ಪಕ್ಷದ ಸಂವಹನ ಕೊರತೆಗೆ ಕಾರಣವಾಗಿದೆ ಎಂದರು.
ಕೆಲವೊಂದು ಬೆಳವಣಿಗೆ ನಮ್ಮ ಮತ್ತು ಜನರ ನಡುವೆ ಸಂವಹನ ಕೊರತೆ ಸೃಷ್ಟಿಸಿತು. ಇದನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಬಳಸಿಕೊಂಡು ನಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿ, ನಾವು ಪಲಾಯನವಾದಿಗಳೆಂದು ಹಣೆ ಪಟ್ಟಿ ಕಟ್ಟಿವೆ. ಇದು ನಾವು ಮಾಡಿಕೊಂಡಿರುವ ತಪ್ಪು ಮತ್ತು ಭವಿಷ್ಯದಲ್ಲಿ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಕೇಜ್ರಿವಾಲ್ ತಿಳಿಸಿದರು.
ದೆಹಲಿ ವಿಧಾನಸಭೆಯಲ್ಲಿ ಸಿಎಂ ಕೇಜ್ರಿವಾಲ್ರ ಬಹು ನಿರೀಕ್ಷಿತ ಜನ ಲೋಕಪಾಲ ವಿಧೇಯಕದ ವಿರುದ್ಧ ಬಿಜೆಪಿ, ಕಾಂಗ್ರೆಸ್ ಮತ ಚಲಾಯಿಸಿದ್ದರಿಂದ ವಿಧೇಯಕಕ್ಕೆ ಅಂಗೀಕಾರ ಸಿಗದೆ ನಿರಾಶರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


