ಈಗಿನ ಸುದ್ದಿ

ಮೋದಿ ಗೃಹಸ್ಥ: ರಾಹುಲ್ ಕಿಡಿ

ಮೋದಿ ಗೃಹಸ್ಥ: ರಾಹುಲ್ ಕಿಡಿ
Published On :

ಜಮ್ಮು ಮತ್ತು ಕಾಶ್ಮೀರ: ದೇಶದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಬಿಜೆಪಿ ಭರವಸೆಯ ಪ್ರಧಾನಿ ಮೋದಿ ಅವರ ಪತ್ನಿಯ ಕುರಿತಾಗಿ ಯಾಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಕಿಡಿಕಾರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ದೊಡಾದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿ ಸಾರಿ ಬಿಜೆಪಿ ಮಹಿಳಾ ಸಬಲೀಕರಣದ ಬಗ್ಗೆ ಮಾನಾಡುತ್ತೆ ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪತ್ನಿಗೆ ಅನ್ಯಾಯವಾಗಿರುವುದರ ಕುರಿತಾಗಿ ಏಕೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.  

ನರೇಂದ್ರ ಮೋದಿ ಅವರು ಎಷ್ಟು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೋ ಅದು ನನಗೆ ಗೊತ್ತಿಲ್ಲ ಆದರೆ ಇಲ್ಲಿಯವರೆಗೂ ಯಾವುದೇ ಉಮೇದುವಾರಿಕೆಯಲ್ಲೂ ಮೋದಿ ಅವರು ಮದುವೆಯಾಗಿರುವುದಾಗಿ ನಮೂದಿಸಿರಲಿಲ್ಲ ಆದರೆ ಮೊದಲ ಬಾರಿಗೆ ತಾವು ಗೃಹಸ್ಥ ಎಂದು ನಮೂದಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಒಂದು ಕಡೆ ಬಿಜೆಪಿ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಅಸೆಂಬ್ಲಿಯಲ್ಲಿ ಬ್ಲೂ ಫಿಲ್ಮಂ ನೋಡುತ್ತಾರೆ. ಇದು ಮಹಿಳಾಯರನ್ನು ಸಬಲೀಕರಣದ ಮಾಡುವ ಪರಿನಾ ಎಂದರು. ಮತ್ತೆ ಛತ್ತೀಸ್‌ಗಡದ ವಿಷಯಕ್ಕೆ ಬಂದರೆ ಸುಮಾರು 20 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಆದರೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಇಲ್ಲಿಯವರೆಗೂ ತಿಳಿದಿಲ್ಲ ಎಂದರು.

ಗುಜರಾತ್‌ನ ವಡೋದರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೋದಿ ಅವರು ತಮ್ಮ ಉಮೇದುವಾರಿಕೆಯಲ್ಲಿ ತಾವು ಗೃಹಸ್ಥ. ನಿವೃತ್ತ ಶಾಲಾ ಶಿಕ್ಷಕಿಯಾಗಿರುವ ಜಶೋದಾಬೇನ್ ಎಂಬುವರು ತಮ್ಮ ಪತ್ನಿ ಎಂದು ನಮೂದಿಸಿರುವುದು ಚರ್ಚೆಗೆ ಗುರಿಯಾಗಿದೆ.

ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ನಿರ್ಮಲ ಸೀತಾರಾಮನ್ ಅವರು, ಮೋದಿ ಸಲ್ಲಿಸಿರುವ ಉಮೇದುವಾರಿಕೆಯನ್ನು ಸಂಪೂರ್ಣವಾಗಿ ಓದಿದ ನಂತರ ಕಾಮೆಂಟ್ ಮಾಡುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.