ಈಗಿನ ಸುದ್ದಿ

'ನಾನು ಹೆಣವಾಗಿ ಬಂದಿದ್ದರೆ ಈ ಪ್ರೀತಿ ನೋಡುತ್ತಿರಲಿಲ್ಲ': ಅಂಬಿ

'ನಾನು ಹೆಣವಾಗಿ ಬಂದಿದ್ದರೆ ಈ ಪ್ರೀತಿ ನೋಡುತ್ತಿರಲಿಲ್ಲ': ಅಂಬಿ
Published On :

ಮಂಡ್ಯ: 'ಸಿಂಗಾಪುರದಿಂದ ನಾನು ಹೆಣವಾಗಿ ಬಂದಿದ್ದರೆ ನಿಮ್ಮ ಈ ಪ್ರೀತಿಯನ್ನು ನೋಡುತ್ತಿರಲಿಲ್ಲ. ಬದುಕಿದ್ದಾಗಲೇ ಜನರ ಪ್ರೀತಿ ನೋಡುವ ಭಾಗ್ಯ ನನಗೆ ಸಿಕ್ಕಿದೆ' ಎಂದು ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಶನಿವಾರ ಹೇಳಿದ್ದಾರೆ.

ಚುನಾವಣಾ ಪ್ರಚಾರ ನಿಮಿತ್ತ ಇಂದು ತವರು ಜಿಲ್ಲೆ ಮಂಡ್ಯಗೆ ಆಗಮಿಸಿರುವ ಅಂಬರೀಷ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಮಂಡ್ಯ ಸಂಸದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರೇ ಸ್ವತಃ ಅಂಬರೀಷ್ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು.

ಮಂಡ್ಯದ ಅಮರಾವತಿ ಹೋಟೆಲ್ ಬಳಿ ಅಭಿಮಾನಿಗಳನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಂಬಿ, ನಾನು ಒಂದು ವೇಳೆ ಹೆಣವಾಗಿ ಬಂದಿದ್ದರೆ ನಿಮ್ಮ ಈ ಪ್ರೀತಿ ನೋಡುತ್ತಿರಲಿಲ್ಲ ಎಂದು ಭಾವುಕರಾಗಿ ನುಡಿದರು.

ಸುಡುವ ಬಿಸಿಲನ್ನು ಲೆಕ್ಕಿಸದೇ, ಮಕ್ಕಳಿಂದ ವೃದ್ದರವರೆಗೂ ನನಗೆ ಪ್ರೀತಿಯನ್ನು ತೋರಿಸಿದ್ದಿರಿ. ಈ ಪ್ರೀತಿಯನ್ನು ನಾನು ಸಾಯೋವರೆಗೂ ಮರೆಯುವುದಿಲ್ಲ ಮತ್ತು ನಿಮ್ಮ ಪ್ರೀತಿ ಉಳಿಸಿಕೊಳ್ಳಲು ಸಂಪೂರ್ಣವಾಗಿ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನನ್ನ ರಾಜಕಾರಣಕ್ಕೆ ಆರ್ಶೀವಾದ ಪಡೆಯಲು ನಾನು ಇಲ್ಲಿಗೆ ಬಂದಿಲ್ಲ. ನಿಮ್ಮ ಪ್ರಾರ್ಥನೆಯ ಋಣ ತೀರಿಸಲು ಬಂದಿದ್ದೇನೆ ಎಂದರು. ಅಲ್ಲದೆ ಯಾವುದೇ ಸ್ವಾರ್ಥವಿಲ್ಲದೆ ಬೆಳಗ್ಗೆಯಿಂದ ನನ್ನ ಆಗಮನಕ್ಕಾಗಿ ಕಾದಿದ್ದಕ್ಕೆ ನಿಮಗೆಲ್ಲ ಧನ್ಯವಾದ ಎಂದು ಅಂಬರೀಷ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.