ಕೋರ್ಟ್ ಮೆಟ್ಟಿಲೇರಿದ ರಮ್ಯಾ ಪಿತೃತ್ವ ವಿವಾದ

ಬೆಂಗಳೂರು: ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮ್ಯಾ ಅವರ ಪಿತೃತ್ವ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ಬಿ. ಸಿ ವೆಂಕಟೇಶ್ ಎಂಬುವವರು ನಾನು ರಮ್ಯಾ ತಂದೆ ಎಂದು ಹೇಳಿಕೊಂಡಿದ್ದು, ತನ್ನನ್ನು ರಮ್ಯಾ ತಂದೆ ಎಂದು ಘೋಷಿಸುವಂತೆ ಸೂಚಿಸಿ ಎಂದು ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನಟಿ ರಮ್ಯಾ ನನ್ನ ಮಗಳಾಗಿದ್ದು, ಅವರ ತಾಯಿ ರಂಜಿತಾ ನನ್ನ ಹೆಂಡತಿ. 1981 ಜೂನ್ 22ರಂದು ರಂಜಿತಾ ಅವರನ್ನು ನಾನು ವಿವಾಹವಾಗಿದ್ದೆ. ಸದಾಶಿವನಗರದ ಐಡಿಯಲ್ ನರ್ಸಿಂಗ್ ಹೋಮ್ನಲ್ಲಿ 1982 ನವೆಂಬರ್ 29ರಂದು ರಮ್ಯಾ ಜನನವಾಗಿದೆ ಎಂದು ಬಿ.ಸಿ ವೆಂಕಟೇಶ್ ತಿಳಿಸಿದ್ದಾರೆ.
ರಮ್ಯಾ ನಾಮಪತ್ರ ಸಲ್ಲಿಕೆ ವೇಳೆ ಕೇವಲ ತಾಯಿ ಹೆಸರು ನಮೂದಿಸಿದ್ದು, ನನ್ನ ಹೆಸರನ್ನು ಕೈಬಿಡಲಾಗಿದೆ. ಆದ್ದರಿಂದ ನನ್ನನ್ನು ತಂದೆ ಎಂದು ಘೋಷಿಸುವಂತೆ ರಮ್ಯಾಗೆ ಸೂಚಿಸಿ ಎಂದು ಅವರು ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ.
ರಮ್ಯಾಳಿಗೆ 5 ವರ್ಷ ತುಂಬುವವರೆಗೂ ಒಟ್ಟಿಗೆ ಇದ್ದೇವು. ನನಗೆ ಅಪಘಾತವಾದ ಬಳಿಕೆ ರಂಜಿತ ನನ್ನನ್ನು ರಮ್ಯಾಳಿಂದ ದೂರವಿಟ್ಟಳು. 2005ರಲ್ಲಿ ರಮ್ಯಾ ನನ್ನ ಪುತ್ರಿ ಎಂದು ತಿಳಿದಾಗ ಅವರ ಮನೆಯ ಬಾಗಿಲ ಬಳಿ ಹೋಗಿ, ನನ್ನ ಬಳಿ ಹಿಂದಿರುಗುವಂತೆ ಕೇಳಿದೆ, ಆದರೆ ನನ್ನ ಮಾತಿಗೆ ಯಾವುದೇ ರೀತಿಯ ಬೆಲೆ ನೀಡದ ರಮ್ಯಾ, ತಂದೆಯಾಗಿ ನನ್ನನ್ನು ಸ್ವೀಕರಿಸಲು ತಿರಸ್ಕರಿಸಿದ್ದಾಳೆ. ಇದರಿಂದಾಗಿ ನನಗೆ ಬಹಳ ನೋವಾಗಿದೆ ಎಂದು ಬಿ.ಸಿ ವೆಂಕಟೇಶ್ ಹೇಳಿಕೊಂಡಿದ್ದಾರೆ.
ಕಳೆದ 6ತಿಂಗಳ ಹಿಂದೆ ಸಂಸದ ಸ್ಥಾನಕ್ಕೆ ನಡೆದ ಚುನಾವಣೆಗೆ ರಮ್ಯಾ ನಾಮಪತ್ರ ಸಲ್ಲಿಸಿ ಬಂದ ನಂತರ ಸಾಕುತಂದೆ ವಿಧಿವಶರಾಗಿದ್ದರು. ತದ ನಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ರಮ್ಯಾ ಸಂಸದೆಯಾಗಿ ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


