ಈಗಿನ ಸುದ್ದಿ

ಗುಲ್ಜಾರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಗುಲ್ಜಾರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
Published On :

ನವದೆಹಲಿ: ಚಲನಚಿತ್ರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪ್ರಖ್ಯಾತ ಗೀತರಚನಕಾರ ಹಾಗೂ ನಿರ್ದೇಶಕ ಗುಲ್ಜಾರ್ ಆಯ್ಕೆಯಾಗಿದ್ದಾರೆ.

ಗುಲ್ಜಾರ್‌ರ ನಿಜನಾಮ ಸಂಪೂರನ್ ಸಿಂಗ್ ಕಾಲ್ರಾ ಇವರು 18 ಆಗಸ್ಟ್ 1934ರಲ್ಲಿ ಪಂಜಾಬ್‌ನ ದೀನ ಎಂಬಲ್ಲಿ ಜನಿಸಿದ್ದರು. 1956ರಲ್ಲಿ ಚಿತ್ರಗಳಿಗೆ ಸಾಹಿತ್ಯ ಬರೆಯುವುದರ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು, ಗುಲ್ಜಾರ್ ಎಂಬ ಕಾವ್ಯನಾಮದಿಂದ ಪ್ರಖ್ಯಾತಿ ಪಡೆದಿದ್ದಾರೆ. ತಮ್ಮ ನೈಜ್ಯ ಸಾಹಿತ್ಯ ಮೂಲಕ ಚಿತ್ರ ರಸಿಕರ ಮನಸೆಳೆದ ಅವರು ಹಲವಾರು ಚಿತ್ರಗಳಿಗೆ ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಗುಲ್ಜಾರ್ ಅವರು ಮೊದಲ ಬಾರಿಗೆ ಹಿಂದಿಯ 'ಬಂಧಿನಿ' ಚಿತ್ರಕ್ಕೆ ಸಾಹಿತ್ಯ ಬರೆದರು. ಅಲ್ಲಿಂದ ಪ್ರಾರಂಭವಾದ ಅವರ ಚಿತ್ರರಂಗ ಜೀವನ ನಿರಂತರವಾಗಿ ಮುಂದುವರೆದಿದೆ. 2010ರಲ್ಲಿ ಬಿಡುಗಡೆಗೊಂಡ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಎ.ಆರ್. ರೆಹಮಾನ್ ಸಂಗೀತ ನಿರ್ದೇನದಲ್ಲಿ ಮೂಡಿ ಬಂದಿದ್ದ 'ಜೈ ಹೋ' ಹಾಡಿಗೆ ಗೀತ ರಚನೆ ಮಾಡಿದ್ದು, ಇದೇ ಗುಲ್ಚಾರ್.

ಎ.ಆರ್. ರೆಹಮಾನ್‌ರ ಪ್ರಮುಖ ಚಿತ್ರಗಳಿಗೆ ಗುಲ್ಜಾರ್ ಗೀತರಚನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಚಿತ್ರಗಳಾದ ದಿಲ್ ಸೆ, ಗುರು, ಸ್ಲಂ ಡಾಗ್ ಮಿಲಿಯನೇರ್‌ಗಳು. ಗುಲ್ಜಾರ್ ನಿರ್ದೇಶನದ ಚಿತ್ರಗಳು ಮೇರೆ ಅಪ್ನೆ 1971ರಲ್ಲಿ ತೆರೆಕಂಡ ಮೊದಲ ಚಿತ್ರ. ನಂತರ ಪರಿಚಯ, ಕೋಶಿಶ್, ಅಚಾನಕ್ ಮತ್ತು ಆನಂಧಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಗುಲ್ಜಾರ್‌ಗೆ ಒಲಿದಿರುವ ಪ್ರಮುಖ ಪ್ರಶಸ್ತಿಗಳು
2004ರಲ್ಲಿ ಪದ್ಮಭೂಷಣ ಪ್ರಶಸ್ತಿ
2002ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿ
2010 ಗ್ರ್ಯಾಮಿ ಪ್ರಶಸ್ತಿ
ನ್ಯಾಷನಲ್ ಫಿಲಂ ಪ್ರಶಸ್ತಿ
20 ಫಿಲ್ಮಂ ಫೇರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.