ಈಗಿನ ಸುದ್ದಿ

ನಿಲೇಕಣಿಯಂತವರು ರಾಜಕೀಯಕ್ಕೆ ಬರಬೇಕು: ಅಂಬರೀಷ್

ನಿಲೇಕಣಿಯಂತವರು ರಾಜಕೀಯಕ್ಕೆ ಬರಬೇಕು: ಅಂಬರೀಷ್
Published On :

ಬೆಂಗಳೂರು: ಹಿರಿಯ ನಟ, ವಸತಿ ಸಚಿವ ಅಂಬರೀಷ್ ಅವರು ಬೆಂಗಳುರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರ ಪರ ಭಾನುವಾರ ಪ್ರಚಾರ ನಡೆಸುತ್ತಿದ್ದಾರೆ.

ಬೆಂಗಳೂರಿನ ಶ್ರೀನಗರದಿಂದ ರೋಡ್ ಶೋ ಆರಂಭಿಸಿರುವ ರೆಬೆಲ್‌ಸ್ಟಾರ್ ಅಂಬರೀಷ್ ಅವರು, ನಂದನ್ ನಿಲೇಕಣಿ ಅವರ ಪರ ಮತಯಾಚಿಸಿದರು. ನಂದನ್ ನಿಲೇಕಣಿ, ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಅವರು ಅಂಬಿಗೆ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಅಂಬರೀಷ್, ರಾಜ್ಯ ಸರ್ಕಾರದ ಸಾಧನೆಯನ್ನು ನೋಡಿ ಕಾಂಗ್ರೆಸ್‌ಗೆ ಮತ ನೀಡಿ, ನಾವು ಜನರ ಎಲ್ಲಾ ಕಷ್ಟಗಳನ್ನು ಪರಿಹರಿಸಿದ್ದೇವೆ. ಅನ್ನ ಭಾಗ್ಯದ ಮೂಲಕ ಬಡವರಿಗೆ ಒಂದು ರುಪಾಯಿಗೆ ಕೆ.ಜಿ ಅಕ್ಕಿ ನೀಡಿದ್ದೇವೆ ಎಂದರು.

ನಾನು ಬೆರೆಯವರ ಬಗ್ಗೆ ಮಾತನಾಡುವುದಿಲ್ಲ. ಆದರೆ ನಿಲೇಕಣಿಯಂತವರು ರಾಜಕೀಯಕ್ಕೆ ಬರಬೇಕು. ನಾವು ಒಳ್ಳೆಯತನದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಅಂಬರೀಷ್ ಹೇಳಿದರು.

ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಅನಂತ್ ಕುಮಾರ್, ಜೆಡಿಎಸ್‌ನಿಂದ ಋತ್ ಮನೋರಮಾ ಹಾಗೂ ಎಎಪಿಯಿಂದ ನೀನಾ ನಾಯಕ್ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.