ಈಗಿನ ಸುದ್ದಿ

ಮತ್ತೆ ಚೋರ್ ಬಾಬುಲಾಲ್ ಮನೆ ಮೇಲೆ ದಾಳಿ

ಮತ್ತೆ ಚೋರ್ ಬಾಬುಲಾಲ್ ಮನೆ ಮೇಲೆ ದಾಳಿ
Published On :

ಬಳ್ಳಾರಿ: ನಿನ್ನೆಯಷ್ಟೇ ಬಾಬುಲಾಲ್ ಪರಶುರಾಮ್ ಪುರಿ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಕೋಟಿಗಟ್ಟಲೆ ಹಣ ವಶಪಡಿಸಿಕೊಂಡ ಬೆನ್ನಲೇ, ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನಿನ್ನೆ ಬಾಬುಲಾಲ್ ಪರಶುರಾಮ್ ಪುರಿ ಅವರ ಮನೆ, ಕಚೇರಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಸುಮಾರು 8.77 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದರು.

ಆದಾಯ ಇಲಾಖೆಯ ಅಧಿಕಾರಿಗಳು ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರೊಂದಿಗೆ ಬಾಬುಲಾಲ್ ವಾಗ್ದಾಳಿ ನಡೆಸಿದರು. ಆನಂತರ ಸ್ಥಳಕ್ಕೆ ಆಗಮಿಸಿದ ಉಪ ಆಯುಕ್ತ ಅನಿರುದ್ಧ ಅವರು ಬಾಬುಲಾಲ್‌ಗೆ ಅಧಿಕಾರಿಗಳಿಗೆ ಸಹಕರಿಸುವಂತೆ ತಿಳಿಸಿದರು.

ಚುನಾವಣೆಯಲ್ಲಿ ಹವಾಲಾ ಹಣ ಸರಬರಾಜಾಗುತ್ತಿರುವ ಸುಳಿವಿನ ಮೇಲೆ ನಿನ್ನೆ ಬಳ್ಳಾರಿ ಗಣಿಧಣಿಗಳಿಗೇ ಸಾಲ ನೀಡುತ್ತಿದ್ದ ಫೈನಾನ್ಯಿಯರ್ ಬಾಬುಲಾಲ್‌ರ ಮನೆ, ಕಚೇರಿ ಹಾಗೂ ಮಗನ ನಿವಾಸದ ಮೇಲೆ ದಾಳಿ ನಡೆಸಿ, ಸುಮಾರು 8.77 ಕೋಟಿ ನಗದು, ಅಲ್ಲದೆ 4.3 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ, 5 ಕೋಟಿ ಮೌಲ್ಯದ ಚೆಕ್ ವಶಪಡಿಸಿಕೊಳ್ಳಲಾಗಿತ್ತು. ಮಗನ ಮನೆಯಲ್ಲಿ ರು. 4.80 ಲಕ್ಷ, ಕಚೇರಿಯಲ್ಲಿ 20.20 ಲಕ್ಷ ರುಪಾಯಿ ವಶಪಡಿಸಿಕೊಳ್ಳಲಾಗಿತ್ತು.

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯದ ಬಳಿಕ ಚುನಾವಣಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಒಂದು ಕಡೆ ನಗದು ರೂಪದಲ್ಲಿ 9 ಕೋಟಿ ರು. ಸಿಕ್ಕಿರುವ ಬೃಹತ್ ಮೊತ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.