ಈಗಿನ ಸುದ್ದಿ

20ರಂದು 'ಗತಿ, ಸ್ಥಿತಿ ಮತ್ತೆಲ್ಲ' ಪುಸ್ತಕ ಬಿಡುಗಡೆ ಸಮಾರಂಭ

20ರಂದು 'ಗತಿ, ಸ್ಥಿತಿ ಮತ್ತೆಲ್ಲ' ಪುಸ್ತಕ ಬಿಡುಗಡೆ ಸಮಾರಂಭ
Published On :

ಬೆಂಗಳೂರು: ಲೇಖಕ ಗಿರಿ ಅವರ 'ಗತಿ, ಸ್ಥಿತಿ ಮತ್ತೆಲ್ಲ' ಪುಸ್ತಕ ಏಪ್ರಿಲ್ 20ರಂದು ಬೆಳಗ್ಗೆ 10.30ಕ್ಕೆ ಭಾಷ್ಯಂ ಸರ್ಕಲ್ನ ಆಕೃತಿ ಪುಸ್ತಕ ಮಳಿಗೆಯಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ.

ಗಿರಿ ಅವರ ಈವರೆಗಿನ ಸಮಸ್ತ ಸಾಹಿತ್ಯ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಪುಸ್ತಕವನ್ನು ಎಸ್. ದಿವಾಕರ್ ಅವರು ಬಿಡುಗಡೆ ಮಾಡಲಿದ್ದಾರೆ.

ಸ್ಥಳ:  ನಂ. 31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ಭಾಷ್ಯಂ ಸರ್ಕಲ್, ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ, ರಾಜಾಜಿನಗರ, ಬೆಂಗಳೂರು-10
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886694580

’ಗತಿ ಸ್ಥತಿ’  ಕಾದಂಬರಿಯನ್ನು ಕುರಿತು:

’ಕಂಡದ್ದು ಕಾಣದ್ದು’ ಕಾದಂಬರಿಯನ್ನು ಕುರಿತು:
ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಸಂಗತಿಗಳು ಯಾವುವು ಎಂಬ ಜಿಜ್ಞಾಸೆ ಸಾಹಿತ್ಯ ಮತ್ತು ತತ್ವಶಾಸ್ತ್ರಗಳಿಗಿಂತಲೂ ಹಳೆಯದು. ನಾವು ಕಂಡದ್ದು ಮತ್ತು ಅನುಭವಿಸಿದ್ದರೆ ಮೇಲೆ ನಮ್ಮ ಸಾಮಾಜಿಕ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂಬುದು ಈವಾಗ ಗ್ರಹೀತ. ಕಾಣುವುದು ಬೇರೆಯೇ, ಅನುಭವ ಕಾಣುವ್ದರಿಂದ ಭಿನ್ನವಾದದ್ದೆ, ಹಾಗಿದ್ದರೆ ಹೇಗೆ ಭಿನ್ನ? . . . ಇರುವುದನ್ನ ಕೂಡ ನಾವು ಯಾಕೆ ಇಡಿಯಾಗಿ ಕಾಣುವುದಿಲ್ಲ? ಭಯವೇ, ಕುರುಡೇ, ಕಿವುಡೇ? . . . ಗಿರಿಯವರ ’ಕಂಡದ್ದು-ಕಾಣದ್ದು’ ಕಾದಂಬರಿ ಓದುವಾಗ ಮೇಲಿನ ಪ್ರಶ್ನೆಗಳು ಹುಟ್ಟುತ್ತವೆ. ಕಾದಂಬರಿ ತನ್ನ ಅನುಭವದ್ರವ್ಯ, ನಿರೂಪಣಾ ಕ್ರಮ ಮತ್ತು ವಿನ್ಯಾಸದಲ್ಲಿ ಈ ಪ್ರಶ್ನೆಗಳನ್ನು ಎದುರಿಸುವ ನೈತಿಕ ಛಾತಿ ತೋರುತ್ತದೆ. ಈ ತತ್ವಿಕ ಛಾತಿಯ ಹಿಂದೆ ಗಾಢವಾದ ಸೄಜನಶಿಲ ಭಿತ್ತಿ ಮತ್ತು ಮನುಷ್ಯ ಸ್ವಭಾವದ ಬಗ್ಗೆ ಇರುವ ಗೌರವ-ಕುತೂಹಲ ಕಂಡದ್ದು-ಕಾಣದ್ದು ಕಾದಂಬರಿಯನ್ನು ಈಚಿನ ಮುಖ್ಯ ಸಾಹಿತ್ಯ ಕೃತಿಗಳ ಸಾಲಿನಲ್ಲಿ ನಿಲ್ಲಿಸುತ್ತದೆ.

ಎರಡು ಮೂರು ತಲೆಮಾರುಗಳ ಕತೆಯನ್ನು ಹೇಳಲು ಮರಳಿಮಣ್ಣಿಗೆ, ಮದುಮಗಳಿಗಿಂತ ಸಂಕ್ಷಿಪ್ತವಾದ, ಭಿನ್ನವಾದ, ಕೆಲವೊಮ್ಮೆ ಆರೀತಿಯ ವಿನ್ಯಾಸವನ್ನು ಹೊಂದಿದ ಕೃತಿಗಳಿಗಿಂತಲೂ ಹೆಚ್ಚಿನ ಧ್ವನಿಪೂಣತೆಯನ್ನು ಸಾಧಿಸುವ ವಿನ್ಯಾಸವೊಂದನ್ನು ಹುಡುಕುವ ಪ್ರಯತ್ನವಾಗಿ ಕೂಡ ಈ ಕಾದಂಬರಿಯನ್ನು ಗಮನಿಸಬಹುದು.

ಕಾದಂಬರಿ ತನ್ನ ಓಟದಲ್ಲಿ ನಾನಾ ರೀತಿಯ ಭಾಷಿಕ ಪ್ರಯೋಗ ಮತ್ತು ನಿರೂಪಣೆಯ ಧಾಟಿಯನ್ನು ಒಳಗೊಂಡಿದೆ. ಸಾಧಾರಣವಾಗಿ ಕತೆ-ಕಾದಂಬರಿಗಳಲ್ಲಿ ಎದುರಾಗುವ ವಾಕ್ಯರಚನಾಕ್ರಮವನ್ನು ಇಲ್ಲಿ ಬೇರೆ ಬೇರೆ ರೀತಿಯಲ್ಲಿ ಮುರಿಯಲಾಗಿದೆ. ಅಂತಹ ವಾಕ್ಯ ರಚನೆಯ ಕ್ರಮ ಕಠೆಯ ಸದಂರ್ಭಕ್ಕೆ ಔಚಿತ್ಯಕ್ಕೆ ಹೊಂದುತ್ತದೆ ಅನ್ನುವುದು ಅಷ್ಟೇ ಮುಖ್ಯ.
ಕಂಡದ್ದು-ಕಾಣದ್ದರ ನಡುವಿನ ಬದುಕು, ಸಂಧಿಗ್ದತೆ, ಹಿಂಸೆಯ ಬೇರೆಬೇರೆ ಮುಖಗಳನ್ನು ಶೋಧಿಸುವುದು ಕಾದಂಬರಿಯ ಹಿಂದಿನ ದರ್ಶನವೆನ್ನಬಹುದು.
ಗತಿ-ಸ್ಥಿತಿ (condition and situation) ಎರಡೂ ಬೇರೆಬೇರೆಯಲ್ಲ.  ಹಂಡದ್ದು-ಕಾಣದ್ದು ಕೂಡ ಬೇರೆಬೇರೆಯಲ್ಲ. ಒಂದಕ್ಕಿಂತ ಇನ್ನೊಂದು ಮುಖ್ಯವಲ್ಲ.
-ಕೆ. ಸತ್ಯನಾರಾಯಣ

 

ಇತ್ತೀಚಿನ ಹೊಸ ಕತೆ, “ಚಂಪ ಮತ್ತು ಚಂದ್ರ” ಕುರಿತು:
ನವ್ಯರ (ಪ್ರಾತಿನಿಧಿಕ (Representative)  ಬರವಣಿಗೆಯ ಕ್ರಮವನ್ನು ಬಿಟ್ಟುಕೊಟ್ಟ ಗಿರಿಯವರ ಕತೆ ಏಕಕಾಲದಲ್ಲಿ ವಿವರಗಳನ್ನೂ ಸಾಂಕೇತಿಕ ಶಕ್ತಿಯನ್ನೂ ಒಟ್ಟಿಗೇ ಸೂಚಿಸುತ್ತಾ ಆಧುನಿಕ ಮನಸ್ಸು ಏರಬೇಕಾದ ನೈತಿಕ ನೆಲೆಗಳು ಯಾವುವು? ಒಬ್ಬ ವ್ಯಕ್ತಿ ಬೆಳೆದುಬಂದ ಕ್ರಮ ಮತ್ತು ಈಗ ಇರಬೇಕಾದ ಸ್ಥಿತಿ ಇವುಗಳನ್ನು ಅರ್ಥಮಾಡಿಕೊಳ್ಳುವಾಗ ಹುಟ್ಟಿಕೊಳ್ಳುವ ತಾತ್ವಿಕ ನೆಲೆಗಳೇನು? ಎಂಬ ಚಿಂತನೆಗೆ ತೊಡಗುತ್ತದೆ.

ಸಾಹಿತ್ಯ ಒಟ್ಟಾಗಿ ಒಂದು ಸಮೂಹ ಶೋಧನೆಯಲ್ಲಿ ತೊಡಗಿಕೊಳ್ಳಬಲ್ಲದು ಎಂದಾದರೆ ಗಿರಿಯವರು ತಮ್ಮ ಕತೆಯಲ್ಲಿ ಪೂರ್ವ-ಪಶ್ಛಿಮದ ದ್ವಂದ್ವಗಳನ್ನು ದಾಟುತ್ತಾರೆ. ಸಮಾನತೆಯ ಶೋಧನೆಯಲ್ಲಿ ಪರಸ್ಪರ ಅರಿವಿನ ವಿಸ್ತರಣೆ ಯಾವ ನೈತಿಕ ನೆಲೆಗಳಲ್ಲಿ ಔನ್ನತ್ಯವನ್ನು ಸಾಧಿಸಬಹುದು ಎಂಬುದನ್ನು ಸೂಚ್ಸಿಸುತ್ತಾರೆ. ಆರ್ಥಿಕ ಅಸಮಾನತೆಯ ಕಾಅಣವಾಗಬಲ್ಲ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಇಂತಹ ಚಿಂತನೆ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎಂದೂ ಅನಿಸದಿರದು.
-ಎಸ್. ಆರ್. ವಿಜಯ ಶಂಕರ 



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.