ಈಗಿನ ಸುದ್ದಿ

ಪಿ. ಶೇಷಾದ್ರಿ, ಗಿರೀಶ್‌ ಕಾಸರವಳ್ಳಿಗೆ ರಾಷ್ಟ್ರ ಪ್ರಶಸ್ತಿ

ಪಿ. ಶೇಷಾದ್ರಿ, ಗಿರೀಶ್‌ ಕಾಸರವಳ್ಳಿಗೆ ರಾಷ್ಟ್ರ ಪ್ರಶಸ್ತಿ
Published On :

ನವದೆಹಲಿ: 61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಪಿ. ಶೇಷಾದ್ರಿ ಹಾಗೂ ಗಿರೀಶ್ ಕಾಸರವಳ್ಳಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಪಿ. ಶೇಷಾದ್ರಿ ನಿರ್ದೇಶನದ 'ಡಿಸೆಂಬರ್ 1' ಚಿತ್ರಕ್ಕೆ ಅತ್ಯುತ್ತಮ ಮೂಲ ಚಿತ್ರಕತೆಗಾಗಿ (ಒರಿಜಿನಲ್ ಸ್ಕ್ರೀನ್‌ಪ್ಲೇ) ಪಿ. ಶೇಷಾದ್ರಿ ಅವರಿಗೆ ಲಭಿಸಿದೆ. ಹಾಗೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಕೂಡ 'ಡಿಸೆಂಬರ್ 1' ಚಿತ್ರಕ್ಕೆ (ರಜತಕಮಲ) ಲಭಿಸಿದೆ.

ಯು.ಆರ್ ಅನಂತಮೂರ್ತಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿದೆ.

ರೂಪಾಂತರಿಸಿದ ಅತ್ಯುತ್ತಮ ಚಿತ್ರಕತೆಗಾಗಿ(ಅಡಾಪ್ಟೆಡ್ ಸ್ಕ್ರೀನ್‌ಪ್ಲೇ) ಪಂಚಾಕ್ಷರಿ ನಿರ್ದೇಶನದ 'ಪ್ರಕೃತಿ' ಚಿತ್ರಕ್ಕಾಗಿ ಪಂಚಾಕ್ಷರಿ ಅವರಿಗೆ ಲಭಿಸಿದೆ. ಅವರು ಯು.ಆರ್ ಅನಂತಮೂರ್ತಿ ಅವರ ಮೂಲಕತೆ ಆಧಾರಿಸಿ ಈ ಚಿತ್ರಕಥೆಯನ್ನು ಬರೆದಿದ್ದರು.

  • ಮಾಧುರಿ ದಿಕ್ಷೀತ್ ನಟನೆಯ 'ಗುಲಾಬ್ ಗ್ಯಾಂಗ್‌' ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ.
  • ಪ್ರಾಂಜಲ್ ದುವಾಗೆ ಉತ್ತಮ ನಿರ್ದೇಶಕ ಪ್ರಶಸ್ತಿ
  • 'ಶಾಹಿದ್‌' ಚಿತ್ರದ ನಟನೆಗಾಗಿ ರಾಜ್‌ಕುಮಾರ್ ರಾವ್ ಅವರಿಗೆ ಉತ್ತಮ ನಟ
  • 'ಜಾಲಿ ಎಲ್‌ಎಲ್‌ಬಿ' ಉತ್ತಮ ಹಿಂದಿ ಚಿತ್ರ
  • 'ಮದ್ರಾಸ್ ಕೆಫೆ' ಚಿತ್ರಕ್ಕೆ ಉತ್ತಮ ಧ್ವನಿ ವಿನ್ಯಾಸ ಪ್ರಶಸ್ತಿ
  •  ಭಾಗ್ ಮಿಲ್ಕಾ ಭಾಗ್ ಚಿತ್ರಕ್ಕೆ ಉತ್ತಮ ಕೋರಿಯೋಗ್ರಾಫರ್ ಪ್ರಶಸ್ತಿ
  •  ಉತ್ತಮ ಕಾದಂಬರಿ ಆಧಾರಿತ ಚಿತ್ರ ತೆಲುಗಿನ 'ಸಿನಿಮಾ ಕಾ ಸಿನಿಮಾ'
  • ಅತ್ಯುತ್ತಮ ಹಿನ್ನೆಲೆ ಗಾಯಕ - ರೂಪಾಂಕರ್
  • ಅತ್ಯುತ್ತಮ ನಟಿ ಗೀತಾಂಜಲಿ - ತಾಪಾ
  • ಅತ್ಯುತ್ತಮ ಪೋಷಕ ನಟ ಸೌರಭ್ - ಶುಕ್ಲಾ
  • ಅತ್ಯುತ್ತಮ ಹಿನ್ನೆಲೆ ಗಾಯಕಿ - ಬೇಲಾ ಶಿಂಧೆ
  • ಅತ್ಯುತ್ತಮ ಬಾಲ ನಟ - ಸೋಮನಾಥ್ ಅವಘಡೆ
  • ಅತ್ಯುತ್ತಮ ಮಕ್ಕಳ ಚಿತ್ರ - ಕಪಾಲ್
  • ಅತ್ಯುತ್ತಮ ನಿರ್ದೇಶಕ - ಹಂಸಲ್ ಮೆಹ್ತಾ
  • ಅತ್ಯುತ್ತಮ ಚಿತ್ರ ವಿಮರ್ಶಕಿ - ಅಲ್ಕಾ ಸಹಾನಿ
  • ಅತ್ಯುತ್ತಮ ಮೇಕಪ್ - ಜತೀಶ್ವರ್
  • ಉತ್ತಮ ನೃತ್ಯ ನಿರ್ದೇಶನ - ಗಣೇಶ್ ಆಚಾರ್ಯ
ಉತ್ತಮ ಪ್ರಾದೇಶಿಕ ಚಿತ್ರಗಳ:
  • ಹಿಂದಿಯ 'ಜಾಲಿ ಎಲ್ಎಲ್ಬಿ' ಉತ್ತಮ ಚಿತ್ರ
  • ಅಸ್ಸಾಂನ 'ಅಜೆಯೊ' ಉತ್ತಮ ಪ್ರಾದೇಶಿಕ ಚಿತ್ರ
  • ಬೆಂಗಾಳಿಯ 'ಬಾಕಿತರ್ ಬ್ಯಾಕ್ತಿಗೊತೊ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ
  • ಕೊಂಕಣಿಯ 'ಬಾಗಾ ಬೀಚ್' ಚಿತ್ರಕ್ಕೆ ಪ್ರಾದೇಶಿಕ ಪ್ರಶಸ್ತಿ
  • ಮಲಯಾಳಂನ 'ಮೌತ್ 24 ಕದಮ್' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ
  • ಮರಾಠಿಯ 'ಅಚ್ಚಾ ದಿವಸ್ ಮಜಾ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ
  • ತಮಿಳಿನ 'ತುಂಗಾ ಉನ್ಗಲ್' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ
  • ತೆಲುಗಿನ 'ಮಾ ಬಂಗಾರು ತಲ್ಲಿ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ
  • ಇಂಗ್ಲಿಷ್ ನ 'ದಿ ಕಾಫಿನ್ ಮೇಕರ್' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಪ್ರಶಸ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.