ಈಗಿನ ಸುದ್ದಿ

ಗೋಧ್ರಾ ಗಲಭೆಗೆ ನಾನು ಮೂಕ ಪ್ರೇಕ್ಷಕನಲ್ಲ: ಮೋದಿ

ಗೋಧ್ರಾ ಗಲಭೆಗೆ ನಾನು ಮೂಕ ಪ್ರೇಕ್ಷಕನಲ್ಲ: ಮೋದಿ
Published On :

ಗಾಂಧಿನಗರ: 2002ರ ಗೋಧ್ರಾ ಗಲಭೆ ಸಂಬಂಧಿಸಿದಂತೆ ಮೂಕ ಪ್ರೇಕ್ಷಕರಾಗಿದ್ದಿರಿ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ದೇಶದ ಪ್ರತಿಷ್ಠಿತ ಪತ್ರಕರ್ತರಿಗೆ 2002 ರಿಂದ 2007ರವರೆಗೆ ನಾನು ಉತ್ತರಿಸುತ್ತಾ ಬಂದಿದ್ದೇನೆ ಎಂದರು.

ಈ ಸಂಬಂಧ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಅವರು, ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನಾನು ಯಾವುದನ್ನು ಮರೆಮಾಚದೇ ಎಲ್ಲವನ್ನು ಹೇಳುತ್ತಾ ಬಂದಿದ್ದೇನೆ. ಆದರೆ ಗಲಭೆಯ ಸತ್ಯಾಂಶ ಪತ್ತೆ ಹಚ್ಚಲು ಯಾವುದೇ ಆಯಾಮ ಸಿಕ್ಕಿರಲಿಲ್ಲ ಎಂದು ಮೋದಿ ಸ್ಪಷ್ಪಪಡಿಸಿದ್ದಾರೆ.

ಅಜ್ಞಾತ ಶಕ್ತಿಗಳು ನಡೆಸಿದ ಪಿತೂರಿಯಿಂದ ಈ ದುರಂತಕ್ಕೆ ಅವರನ್ನು ಹೊಣೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

2002ರ ಗಲಭೆಯ ಕುರಿತು ಮತ್ತೆ ಮತ್ತೆ ಕೇಳಿದಾಗ 'ನಾನು ಏನು ಹೇಳಬೇಕೋ ಅದನ್ನು ಹೇಳಿರುವೆ', ಈಗ ಜನತೆಯ ನ್ಯಾಯಾಲಯದಲ್ಲಿ ಇದ್ದೇನೆ ಮತ್ತು ಅವರ ತೀರ್ಪನ್ನು ಕೇಳಲು ಕಾಯುತ್ತಿದ್ದೇನೆ ಎಂದರು.

ಆ ಗುಜರಾತ್ ಗಲಭೆಗೆ ನರೇಂದ್ರ ಮೋದಿಯೇ ಕಾರಣವೆಂದು ಮಾಧ್ಯಮಗಳು ಆರೋಪ ಹೊರಿಸದೇ ಇದ್ದಿದ್ದರೆ ಇವತ್ತು ಈ ದೇಶದ ಜನತೆಗೆ ನರೇಂದ್ರ ಮೋದಿ ಯಾರೆಂಬುದು ಗೊತ್ತಾಗುತ್ತಿರಲಿಲ್ಲ ಎಂದರು.

2002ರ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ 790 ಮುಸ್ಲಿಂರು, 254 ಹಿಂದೂಗಳು ಮೃತಪಟ್ಟಿದ್ದು, 2500 ಮಂದಿ ಗಾಯಾಳುಗಳಾಗಿದ್ದರು. 223ಮಂದಿ ಕಾಣೆಯಾಗಿದ್ದರು ಎಂದು ಅಧಿಕೃತ ಮಾಹಿತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.