ಮೋದಿ ವಿರುದ್ಧ ತಮಿಳುನಾಡು ಸಿಎಂ ಜಯಾ ವಾಗ್ದಾಳಿ

ಚೆನ್ನೈ: ತಮ್ಮ ಮತ್ತು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಡುವೆ ಉತ್ತಮ ಭಾಂಧವ್ಯವಿದೆ ಎಂಬ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಯಲಲಿತಾ, ಮೋದಿ ಅವರು ಮೊದಲು ತಮ್ಮ ಸತ್ಯಾಸತ್ಯಗಳನ್ನು ಪರೀಕ್ಷಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಇಂದು ಚೆನ್ನೈಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಜಯಾ, ಮೋದಿ ಅವರು ಎಐಎಡಿಎಂಕೆ ಅಥವಾ ಡಿಎಂಕೆ ತಮಿಳುನಾಡಿಗೆ ಏನಾದರೂ ಸಹಾಯ ಮಾಡಿವೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ತಮಿಳುನಾಡು ಜನತೆಗಾಗಿ ಉತ್ತಮ ಕೆಲಸ ಮಾಡಿದ ಪಕ್ಷ ಅಂದ್ರೆ ಅದು ಎಐಎಡಿಎಂಕೆ ಮಾತ್ರ ಅಂತ ನಾನು ಅವರಿ(ಮೋದಿ)ಗೆ ಹೇಳಲು ಬಯಸುತ್ತೇನೆ.
ಗುಜರಾತ್ ಅಭಿವೃದ್ಧಿಯಾಗಿದೆ ಎಂಬುದು ಒಂದು ಕಟ್ಟು ಕಥೆ ಅಷ್ಟೆ, ತಮಿಳುನಾಡು ಗುಜರಾತ್ಗಿಂತ ಹೆಚ್ಚು ಅಭಿವೃದ್ಧಿಯಾಗಿದೆ ಎಂದು ಜಯಲಲಿತಾ ಅವರು ಹೇಳಿದ್ದಾರೆ.
ಈ ಹಿಂದೆ ಜಯಲಲಿತಾ ಮತ್ತು ಮೋದಿ ಇಬ್ಬರೂ ಬಹಿರಂಗವಾಗಿಯೇ ಪರಸ್ಪರ ಬೆಂಬಲ ಘೋಷಿಸಿಕೊಂಡಿದ್ದರು. 2011ರಲ್ಲಿ ಜಯಲಲಿತಾ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವೇಳೆ ಮೋದಿ ಹಾಜರಿದ್ದರು. ಅಲ್ಲದೆ 2012ರಲ್ಲಿ ನಾಲ್ಕನೆ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಜಯಾ ತಮ್ಮ ಪ್ರತಿನಿಧಿಯನ್ನು ಕಳುಹಿಸಿದ್ದರು. ಆದರೆ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಎನ್ಡಿಎದಿಂದ ದೂರ ಸರಿದ ಜಯಾ, ತೃತೀಯ ರಂಗದ ಕಡೆ ಮುಖಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


