5ನೇ ಹಂತ: 12 ರಾಜ್ಯ, 121 ಕ್ಷೇತ್ರಗಳಲ್ಲಿ ಮತದಾನ

ನವದೆಹಲಿ: ಐದನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 12 ರಾಜ್ಯಗಳ 121 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯಾದ್ಯಂತ ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಭಾಗಶಃ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯುತ್ತಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಮತ ಚಲಾಯಿಸಲು ಮತದಾರರು ಮತಕಟ್ಟೆಗಳ ಬಳಿ ಸಾಲು ಕಟ್ಟಿ ನಿಂತಿರುವುದು ಸಾಮಾನ್ಯ ದೃಶ್ಯವಾಗಿತ್ತು.
2014ರ ಚುನಾವಣೆಯ 9 ಹಂತದ ಮತದಾನದ ಪೈಕಿ ಇಂದು ನಡೆಯುತ್ತಿರುವ ಮತದಾನ ಅತಿ ದೊಡ್ಡ ಹಂತದ ಮತ ಸಮರವಾಗಿದೆ. ಇಂದು 1769 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಸುಮಾರು 16.61 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಮಧ್ಯಾಹ್ನ 4 ಗಂಟೆವರೆಗೆ ಶೇಕಡಾವಾರು ಮತದಾನ:
ಪಶ್ಚಿಮ ಬಂಗಾಳದಲ್ಲಿ ಶೇ 50% ಮತದಾನ, ಉತ್ತರಪ್ರದೇಶದಲ್ಲಿ ಶೇ. 50 ರಷ್ಟು ಮತದಾನ, ಛತ್ತೀಸ್ ಗಢದಲ್ಲಿ ಶೇ.40ರಷ್ಟು ಮತದಾನ. ಒಡಿಶಾ ಶೇ. 51, ದಾರ್ಜಲಿಂಗ್ ನಲ್ಲಿ ಶೇ 45,ರಾಜಸ್ಥಾನ ಶೇ. 40ರಷ್ಟು ಮತದಾನ.
ಕಣದಲ್ಲಿರುವ ಪ್ರಮುಖ ನಾಯಕರು
ಮಾಜಿ ಪ್ರಧಾನಿ ದೇವೇಗೌಡ - ಹಾಸನ (ಜೆಡಿಎಸ್ )
ಶತ್ರುಘ್ನ ಸಿನ್ಹಾ - ಪಾಟ್ನಾ ಸಾಹಿಬ್ (ಬಿಜೆಪಿ)
ಅಜಿತ್ ಜೋಗಿ - ಮಹಾಸಮುಂದ್ (ಕಾಂಗ್ರೆಸ್)
ಜಸ್ವಂತ್ ಸಿಂಗ್ - ಬಾರ್ಮದ್ (ಪಕ್ಷೇತರ)
ಗುಲಾಂ ನಬಿ ಆಜಾದ್ - ಜಮ್ಮು (ಕಾಂಗ್ರೆಸ್)
ಮೇನಕಾ ಗಾಂಧಿ - ಫಿಲಿಬಿಟ್ (ಬಿಜೆಪಿ)
ಜ್ಯೋತಿರಾದಿತ್ಯ ಸಿಂಧಿಯಾ - ಗುಣ (ಕಾಂಗ್ರೆಸ್)
ಸುಪ್ರಿಯಾ - ಬಾರಾಮತಿ (ಎನ್ಸಿಪಿ)
ಬೈಜಯಂತ್ ಪಂಡಾ - ಕೇಂದ್ರಪಾರ (ಬಿಜೆಪಿ)
ಅಶೋಕ್ ಚೌಹಾಣ್ - ನಾಂದೇಡ್ (ಕಾಂಗ್ರೆಸ್)
ಗೋಪಿನಾಥ್ ಮುಂಡೆ - ಮರಾಠವಾಡ (ಬಿಜೆಪಿ)
ನಂದನ್ ನಿಲೇಕಣಿ -ಬೆಂಗಳೂರು ದಕ್ಷಿಣ(ಕಾಂಗ್ರೆಸ್)
ವೀರಪ್ಪ ಮೊಯ್ಲಿ - ಚಿಕ್ಕಬಳ್ಳಾಪುರ(ಕಾಂಗ್ರೆಸ್)
ಮತದಾನ ನಡೆಯುತ್ತಿರುವ 12 ರಾಜ್ಯಗಳು ಇಂತಿವೆ
ಕರ್ನಾಟಕ 28, ರಾಜಸ್ಥಾನ 20, ಮಹಾರಾಷ್ಟ್ರ 19, ಉತ್ತರ ಪ್ರದೇಶ ಮತ್ತು ಒಡಿಶಾ ತಲಾ 11, ಮಧ್ಯಪ್ರದೇಶ 10 ಬಿಹಾರ 7 ಜಾರ್ಖಂಡ್ 6 ಪಶ್ಚಿಮ ಬಂಗಾಳ 4 ಛತ್ತೀಸ್ಗಡ 3 ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಮಣಿಪುರದಲ್ಲಿ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


