ಟಿಡಿಪಿ-ಬಿಜೆಪಿ ಮೈತ್ರಿಯಲ್ಲಿ ಮತ್ತೆ ಬಿರುಕು

ಹೈದರಾಬಾದ್: ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಟಿಡಿಪಿಯಲ್ಲಿ ಮತ್ತೆ ಬಿರುಕು ಮೂಡಿದೆ.
ಲೋಕಸಭಾ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕೆ ಇಳಿಸುತ್ತಿಲ್ಲ ಹಾಗೂ ಆಂಧ್ರದಲ್ಲಿ ಚುನಾವಣಾ ಪ್ರಚಾರಕ್ಕೆ ನಾಯ್ಡು ಜೊತೆ ವೇದಿಕೆ ಹಂಚಿಕೊಳ್ಳಲು ಸಹ ಮೋದಿ ಸಮ್ಮತಿ ಸೂಚಿಸುತ್ತಿಲ್ಲ ಎಂಬುದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ಅವರ ಮುನಿಸಿಗೆ ಕಾರಣವಾಗಿದೆ. ರಾಜಂಪೇಟೆ ಲೋಕಸಭಾ ಕ್ಷೇತ್ರದಿಂದ ದಗ್ಗುಬಾಟಿ ಪುರಂದೇಶ್ವರಿ ಹಾಗೂ ನರಸಾಪುರಂ ಲೋಕಸಭಾ ಕ್ಷೇತ್ರದಿಂದ ಇಂಜಿನಿಯರಿಂಗ್ ಕಲಾಶಾಲ ಮುಖ್ಯಸ್ಥ ಗೋಕರಾಜು ರಂಗರಾಜು ಕಣಕ್ಕೆ ಇಳಿಸಬೇಕೆಂಬ ಬಿಜೆಪಿ ನಿರ್ಣಯದ ವಿರುದ್ಧ ನಾಯ್ಡು ಬೇಸರಗೊಂಡಿದ್ದಾರೆ.
ರಾಜಂಪೇಟ ಕ್ಷೇತ್ರದಿಂದ ಪುರಂದೇಶ್ವರಿಯನ್ನು ಹೆಸರನ್ನು ಕಳೆದ ರಾತ್ರಿ ಬಿಜೆಪಿ ಅಂತಿಮಗೊಳಿಸುತ್ತಿದ್ದಂತೆ ಮೈತ್ರಿ ಮಾಡಿಕೊಂಡ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದೆ ಇದ್ದರೆ ಜನರು ನಮ್ಮ ತಿರಸ್ಕರಿಸುತ್ತಾರೆ ಎಂಬುದು ಚಂದ್ರಬಾಬುರ ವಾದವಾಗಿದೆ. ಇದರಿಂದ ತೀರ ಬೇಸರಗೊಂಡಿರುವ ನಾಯ್ಡು ಅವರು, ಸೀಮಾಂಧ್ರ ಭಾಗದಲ್ಲಿ ಮಾಡಿಕೊಂಡಿರುವ ಮೈತ್ರಿಯನ್ನು ಕೈಬಿಟ್ಟು, ತೆಲಂಗಾಣ ಭಾಗದ ಮೈತ್ರಿಯನ್ನು ಮಾತ್ರ ಮುಂದುವರೆಸಲು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.
ನರಸಾಪುರಂ ಕ್ಷೇತ್ರದಿಂದ ರಘುರಾಮ ಕೃಷ್ಣರಾಜು ಅವರಿಗೆ ಟಿಕೆಟ್ ನೀಡುತ್ತೇ ಅಂತ ಭಾವಿಸಿದ್ದೇ ಆದರೆ ರಘುರಾಮ ಅವರಿಗೆ ನೀಡದೆ ಆರ್ಎಸ್ಎಸ್ನ ಸೂಚನೆಯಂತೆ ಗೋಕರಾಜು ರಂಗರಾಜು ಅವರಿಗೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ, ಆಂಧ್ರಪ್ರದೇಶದಲ್ಲಿ ಏಪ್ರಿಲ್ 30 ಹಾಗೂ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಆಯೋಜಿಸಿರುವ ಟಿಡಿಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮೋದಿ ಅವರು ವೇದಿಕೆ ಹಂಚಿಕೊಳ್ಳಬೇಕು ಎಂದು ನಾಯ್ಡು ಹೇಳಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುವ ಬಿಜೆಪಿ, ಆಂಧ್ರಪ್ರದೇಶದಲ್ಲಿ ಏಪ್ರಿಲ್ 22ರಂದು ಆಂಧ್ರ ಕರಿಂನಗರ್ ಹಾಗೂ ನಿಜಾಮಬಾದ್ನಲ್ಲಿ ಮೋದಿ ಅವರು ಎರಡು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಹೀಗಾಗಿ ತಮ್ಮ ಸಮಾವೇಶದಲ್ಲಿ ಮೋದಿ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


